ಶಿರಸಿಯಲ್ಲಿಗಮನಸೆಳೆದ ಏಕತೆಗಾಗಿ ಓಟ
ಏಕತೆಯಿಂದಿದ್ದರೆ ಸುರಕ್ಷತೆ
ವಿಕ ಸುದ್ದಿಲೋಕ ಶಿರಸಿ
ಮಕ್ಕಳಲ್ಲಿ, ಸಮಾಜದಲ್ಲಿ ಏಕತೆ ಭಾವನೆಯನ್ನು ಮರುಸ್ಥಾಪಿಸುವ ಕೆಲಸ ಆಗಬೇಕು ಎಂದು 1ನೇ ಹೆಚ್ಚುವರಿ ಜಿಲ್ಲಾಸತ್ರ ನ್ಯಾಯಾಧೀಶ ಕಿರಣ ಕಿಣಿ ಅಭಿಪ್ರಾಯಪಟ್ಟರು.
ಪೊಲೀಸ್ ಉಪವಿಭಾಗದಿಂದ ನಗರದಲ್ಲಿಶುಕ್ರವಾರ ನಡೆದ ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘‘ ಸಣ್ಣವರಿರುವಾಗನಿಂದಲೂ ನಾವೆಲ್ಲಒಂದು ಎಂದು ತಿಳಿದುಕೊಂಡು ಬಂದಿದ್ದೇವೆ. ಆದರೆ ಈಗ ಜಾತಿ, ಧರ್ಮ, ಪಂಥಗಳ ಆಧಾರದಲ್ಲಿಒಬ್ಬರನ್ನೊಬ್ಬರು ದ್ವೇಷಿಸುವ ವಾತಾವರಣ ಬೆಳೆಯುತ್ತಿದೆ. ಮುಖ್ಯವಾಗಿ ಇದು ಭವಿಷ್ಯದ ಮಕ್ಕಳಲ್ಲಿಮನಸಲ್ಲಿಯೂ ಮೂಡುತ್ತಿದೆ. ಇದರಿಂದ ಸಮಗ್ರತೆ, ಏಕತೆಗೆ ಹಾನಿ ಉಂಟಾಗುತ್ತದೆ’’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘‘2014ರಿಂದಲೂ ಏಕತಾ ಹಾಗೂ ಸದ್ಭಾವನೆ ದಿವಸ ಆಚರಿಸಲಾಗುತ್ತದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಯಾವ ಉದ್ದೇಶದಿಂದ ಏಕೀಕರಣ ಮಾಡಿದ್ದಾರೊ ಅದರ ಆಶಯಕ್ಕೆ ಧಕ್ಕೆ ಆಗಬಾರದು. ನಾವು ಏಕತೆಯಿಂದ ಇದ್ದರೆ ಸುರಕ್ಷಿತರಾಗಿರುತ್ತೇವೆ’’ ಎಂದರು.
ಡಿವೈಎಸ್ ಪಿ ಗೀತಾ ಪಾಟೀಲ್ ಪ್ರತಿಜ್ಞಾವಿಧಿ ಬೋಧಿಸಿದರು. ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್ , ನಗರ ಠಾಣೆ ಪಿಎಸ್ ಐ ನಾಗಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.
ನಂತರ ಪೊಲೀಸ್ ಸಿಬ್ಬಂದಿ ಒಳಗೊಂಡು ನಡೆದ ಏಕತಾ ಓಟ ವಿಕಾಸಾಶ್ರಮದಿಂದ ಪ್ರಾರಂಭವಾಗಿ ಅಶ್ವಿನಿ ವೃತ್ತ, ದೇವಿಕೆರೆ, ನಟರಾಜ ರಸ್ತೆ, ಬಿಡ್ಕಿಬೈಲ್ , ಮಾರಿಕಾಂಬಾ ದೇವಸ್ಥಾನ, ಶಿವಾಜಿಚೌಕ್ , ರಾಘವೇಂದ್ರ ವೃತ್ತ ಮೂಲಕ ಸಾಗಿತು.
31ಎಸ್ಸಾರೆಸ್ 2ಎ,ಬಿ
ಶಿರಸಿಯಲ್ಲಿಏಕತೆಗಾಗಿ ಓಟಕ್ಕೆ 1ನೇ ಹೆಚ್ಚುವರಿ ಜಿಲ್ಲಾಸತ್ರ ನ್ಯಾಯಾಧೀಶ ಕಿರಣ ಕಿಣಿ ಚಾಲನೆ ನೀಡಿದರು. ಡಿವೈಎಸ್ ಪಿ ಗೀತಾ ಪಾಟೀಲ್ ಇದ್ದರು.

