ನವೆಂಬರ್ ನಲ್ಲಿದತ್ತು ಮಾಸಾಚರಣೆ
ಬಾಗಲಕೋಟೆ: ಮಕ್ಕಳ ನಿರ್ದೇಶನಾಲಯ, ಜಿಲ್ಲಾಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಿಂದ ನವೆಂಬರ್ ನಲ್ಲಿಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಆಚರಿಸಲಾಗುತ್ತಿದೆ. ಮಕ್ಕಳ ಮಾರಾಟ ಹಾಗೂ ಕೊಳ್ಳುವವರಿಗೆ ಬಾಲನ್ಯಾಯ ಕಾಯಿದೆ ಅನ್ವಯ 5 ವರ್ಷಗಳವರೆಗೆ ಜೈಲು ಮತ್ತು 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಈ ಅಪರಾಧದಲ್ಲಿಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಣೆ ಮಾಡಲಾಗುತ್ತದೆ. ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳು ಕಂಡುಬಂದಲ್ಲಿಜಿಲ್ಲಾಮಕ್ಕಳ ರಕ್ಷಣಾ ಘಟಕ, ಸ್ತ್ರೀಶಕ್ತಿ ಭವನ, ನವನಗರ, ಬಾಗಲಕೋಟೆ (08354-295345), ಮಕ್ಕಳ ಸಹಾಯವಾಣಿ-1098 ಅಥವಾ ಸರ್ಚ್ ಸ್ವಯಂ ಸೇವಾ ಸಂಸ್ಥೆ, ಅಮೂಲ್ಯ(ಪಿ) ದತ್ತು ಸ್ವೀಕಾರ ಕೇಂದ್ರ, ನವನಗರ, ಬಾಗಲಕೋಟೆ (9448801473)ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

