ಶೂ ಮತ್ತು ಸಾಕ್ಸ್ ವಿತರಣೆ ಕಾರ್ಯಕ್ರಮ
ವಿಕ ಸುದ್ದಿಲೋಕ ತುಮ್ಮಿನಕಟ್ಟಿ
ವಿದ್ಯಾರ್ಥಿಗಳು ಶಿಕ್ಷಣದ ಜತೆ ಕೌಶಲ ಬೆಳೆಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಎಸ್ ಡಿಎಂಸಿ ಅಧ್ಯಕ್ಷ ಮಂಜುನಾಥ ಮಾಸೂರ ಹೇಳಿದರು.
ಅವರು ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ಈಗಾಗಲೇ ಆಂಗ್ಲಮಾಧ್ಯಮ ತರಗತಿ ಪ್ರಾರಂಭವಾಗಿದೆ. 31 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಸಮವಸ್ತ್ರ ವಿತರಿಸಲಾಗಿದೆ. ಪಠ್ಯಪುಸ್ತಕ ಸರಿಯಾಗಿ ವಿತರಣೆಯಾಗಿಲ್ಲ. ಶಾಲೆ ಪ್ರಾರಂಭವಾಗಿ 4 ತಿಂಗಳಾದರೂ ಮಕ್ಕಳು ಪುಸ್ತಕಗಳನ್ನು ಜೆರಾಕ್ಸ್ ಮಾಡಿಕೊಂಡು ಓದುತ್ತಿದ್ದಾರೆ. ಕನ್ನಡ 3 ಪುಸ್ತಕ, ಇಂಗ್ಲಿಷ್ 17 ಪುಸ್ತಕ, ಗಣಿತ 10 ಪುಸ್ತಕ, ಪರಿಸರ ಅಧ್ಯಯನ 15, ವಿದ್ಯಾರ್ಥಿಗಳಿಗೆ ಪುಸ್ತಕಗಳು ಬರಬೇಕಾಗಿದೆ. ಪುಸ್ತಕಗಳ ಕೊರತೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದಷ್ಟು ಬೇಗನೆ ಪುಸ್ತಕಗಳನ್ನು ತರಿಸಿ ವಿತರಿಸಬೇಕೆಂದು ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಿದರು.
ಶಾಲಾ ಮುಖ್ಯ ಪ್ರಭಾರಿ ಶಿಕ್ಷಕ ಹೆಚ್ .ಹೆಚ್ .ಕರೆಗೌಡ, ಜಲಂದರ ಜೋಗಾರ, ವೈ.ಎಸ್ .ಸಂಕಣ್ಣನವರ, ಅನಿತಾ ಸೈದಣ್ಣನವರ, ಪಿ.ಎಸ್ .ಶಿರಗಂಬಿ, ಎಸ್ ..ಹೆಚ್ .ಎಣ್ಣಿ, ಬಿ.ಸಿ.ಹಾದಿಮನಿ, ಎಸ್ .ಬಿ.ಕೆಂಚರೆಡ್ಡಿ, ಎಲ್ .ಎನ್ .ಬಳ್ಳಾರಿ, ರೇಣುಕಾ ಎಂ.ಹೆಚ್ , ಅರ್ಜುನ ಎಂ.ವಿ, ಮಾಂತೇಶ ಗುಂಡೇರ ಇದ್ದರು.
31 ಟಿಎಮ್ ಕೆ 01
ತುಮ್ಮಿನಕಟ್ಟಿ ಗ್ರಾಮದಲ್ಲಿಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿಶೂ ಮತ್ತು ಸಾಕ್ಸ್ ಗಳನ್ನು ಎಸ್ ಡಿಎಮ್ ಸಿ ಅಧ್ಯಕ್ಷ ಮಂಜುನಾಥ ಮಾಸೂರ ವಿತರಿಸಿದರು.

