ಸಿ.ಟಿ.ರವಿ ಹೇಳಿಕೆ ವಿರುದ್ಧ ಸವಿತಾ ಸಮಾಜ ಪ್ರತಿಭಟನೆ
ವಿಕ ಸುದ್ದಿಲೋಕ ರಿಪ್ಪನ್ ಪೇಟೆ
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸವಿತಾ ಸಮಾಜವನ್ನು ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಸವಿತಾ ಸಮಾಜದ ಪದಾಧಿಕಾರಿಗಳು ಶುಕ್ರವಾರ ಪಟ್ಟಣದಲ್ಲಿಪ್ರತಿಭಟನೆ ನಡೆಸಿದರು.
ಸಮಾಜದ ಅಧ್ಯಕ್ಷ ಸಿದ್ದೇಶ್ ಮಾತನಾಡಿ, ಸಿ.ಟಿ. ರವಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಒಂದು ಸಮುದಾಯದ ಬಗ್ಗೆ ಅಗೌರವವಾಗಿ ಮಾತನಾಡಿರುವುದು ಖಂಡನೀಯ.ಇನ್ನೊಬ್ಬರಿಗೆ ನೋವಾಗುತ್ತದೆ ಎಂಬ ಕನಿಷ್ಠ ಜ್ಞಾನ ಇಲ್ಲದೆ, ಅವಮಾನಕರ ಹೇಳಿಕೆ ಒಪ್ಪುವಂತದ್ದಲ್ಲ. ಕೂಡಲೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿರಾಜ್ಯಾದ್ಯಂತ ಸಮುದಾಯದವರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿ ಬಾರಿಯು ರಾಜಕಾರಣಿಗಳು ಒಂದಲ್ಲಾಒಂದು ಸಮಾಜವನ್ನು ನಿಂದಿಸುತ್ತ, ಜನರ ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆಯಾಚಿಸಿ ನಾಟಕವಾಡುತ್ತಾರೆ. ಇಂತಹ ವಿವೇಚನ ರಹಿತ ಹೇಳಿಕೆಗಳನ್ನು ಶಾಶ್ವತವಾಗಿ ನಿಬಂರ್ ಧಿಸಲು ಸರಕಾರ ಸೂಕ್ತ ಕಾನೂನು ರೂಪಿಸಿ, ಸಮಾಜದ ಅಸಮಾನತೆಯನ್ನು ತೊಲಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರು ನಾಡ ಕಚೇರಿಯ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಕಾರ್ಯದರ್ಶಿ ಸುನಿಲ್ , ಪದಾಧಿಕಾರಿಗಳಾದ ಮಂಜುನಾಥ, ವಾಸು, ಅರುಣ್ ಕುಮಾರ್ , ಪಾಂಡುರಂಗ, ರಾಜೇಶ್ , ಸತೀಶ, ಬಾಲರಾಜ ಮತ್ತಿತರರು ಹಾಜರಿದ್ದರು.
31 ಆರ್ ಪಿಟಿ 1
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸವಿತಾ ಸಮಾಜವನ್ನು ಅವಹೇಳನ ಮಾಡಿದ್ದಾರೆಂದು ಆರೋಪಿಸಿ ರಿಪ್ಪನ್ ಪೇಟೆಯಲ್ಲಿಸವಿತಾ ಸಮಾಜದಿಂದ ಪ್ರತಿಭಟನೆ ನಡೆಸಿ, ನಾಡ ಕಚೇರಿಗೆ ಮನವಿ ಸಲ್ಲಿಸಲಾಯಿತು.

