ವಿಂಡ್ ಫ್ಯಾನ್ ಅಧಿಳಧಿವಧಿಡಿಧಿಸಧಿದಂತೆ ಆಗ್ರಹ
ಮೊಳಕಾಲ್ಮುರು: ತಾಲೂಕಿನ ತಳವಾರಹಳ್ಳಿ ಸಮೀಪದ ಪುರಬೋರನಹಟ್ಟಿ ಜಮೀನುಗಳಲ್ಲಿವಿಂಡ್ ಫ್ಯಾನ್ ಅಳವಡಿಕೆ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ, ಗುರುವಾರ ನಾನಾ ಸಂಘಟನೆ ಪದಾಧಿಕಾರಿಗಳು ವಿಂಡ್ ಫ್ಯಾನ್ ಅಳವಡಿಕೆ ಸ್ಥಳದಲ್ಲಿಪ್ರತಿಭಟನೆ ನಡೆಸಿದರು.
ಸಮಾಜ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಎಸ್ .ಪರಮೇಶ್ ಮಾತನಾಡಿ, ತಳವಾರಹಳ್ಳಿ, ಹೊಸಹಟ್ಟಿ, ಪುರಬೋರನಹಟ್ಟಿ ಸುತ್ತಲಿನ ಜಮೀನುಗಳಲ್ಲಿಒಂದು ಜಮೀನಿಗೆ ಅನುಮತಿ ಪಡೆದು ಮೂರ್ನಾಲ್ಕು ವಿಂಡ್ ಫ್ಯಾನ್ ಅಳವಡಿಕೆ ಮಾಡಲಾಗುತ್ತಿದೆ. ಈ ವಿಷಯವು ಸ್ಥಳೀಯ ಗ್ರಾಪಂ ಸೇರಿದಂತೆ ಸಂಬಂಧಿಸಿದ ಎಲ್ಲಇಲಾಖೆಗಳ ಅಧಿಕಾರಿಗಳಿಗೆ ತಿಳಿದಿದ್ದರೂ ಯಾರೊಬ್ಬರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲಎಂದು ದೂರಿದರು.
ರೈತರನ್ನು ಕಂಪನಿಯ ಅಧಿಕಾರಿಗಳು ಪುಸಲಾಯಿಸಿ, ಹಣದ ಆಮಿಷ ತೋರುತ್ತಾ ಫ್ಯಾನ್ ಅಳವಡಿಕೆಗೆ ಮುಂದಾಗುತ್ತಿದ್ದಾರೆ. ಇವುಗಳ ಅಳವಡಿಕೆಯಿಂದ ವಾತಾವರಣದಲ್ಲಿವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಶಬ್ದ ಮಾಲಿನ್ಯದಿಂದ ಜನರಿಗೆ ಕಿರಿಕಿರಿಯಾಗಲಿದೆ. ಈ ವಿಷಯಗಳು ತಿಳಿದಿದ್ದರೂ ಎಲ್ಲಅಧಿಕಾರಿಗಳು ಇವುಗಳನ್ನು ಸ್ಥಗಿತಗೊಳಿಸುತ್ತಿಲ್ಲಎಂದು ಧಿದೂಧಿರಿಧಿದಧಿರು.
ಸ್ಥಳದಲ್ಲಿವೇದಿಕೆಯ ಸಂಸ್ಥಾಪಕ ಮರಿಸ್ವಾಮಿ, ಕರ್ನಾಟಕ ರೈತ ಪ್ರಾಂತ ಸಂಘ ತಾಲೂಕು ಅಧ್ಯಕ್ಷ ನಾಗರಾಜ್ , ತಿಪ್ಪೇಸ್ವಾಮಿ, ಕಾಮಯ್ಯ, ಮುರ್ತಿ, ಲಕ್ಷತ್ರ್ಮಣ್ , ಬಸವರಾಜ್ , ನಾಗಣ್ಣ ಇದ್ದರು.
------
31 ಎಂಎಲ್ ಕೆ ಪಿ 2
ಪುರಬೋರನಹಟ್ಟಿ ಜಮೀನುಗಳಲ್ಲಿಅಕ್ರಮವಾಗಿ ನಡೆಸುತ್ತಿರುವ ವಿಂಡ್ ಫ್ಯಾನ್ ಅಳವಡಿಕೆಯ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ, ಗುರುವಾರ ನಾನಾ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

