ಹುಬ್ಬಳ್ಳಿ : ನೇಕಾರ ನಗರದ ದೇವಾಂಗ ಸಮಾಜ ಬನಶಂಕರಿ ಸೇವಾ ಟ್ರಸ್ಟ್ , ಬನಶ್ರೀ ಮಹಿಳಾ ಮಂಡಳ ಆಶ್ರಯದಲ್ಲಿದೇವರ ದಾಸಿಮಯ್ಯ ಭವನ ಕಟ್ಟಡ ನಿರ್ಮಾಣಕ್ಕೆ ನ.2ರಂದು ಶಂಕುಸ್ಥಾಪನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ.
ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಶಂಕುಸ್ಥಾಪನೆ ನೆರವೇರಿಸುವರು. ಧಾರವಾಡ ಜಿಲ್ಲಾದೇವಾಂಗ ಸೇವಾ ಸಂಘದ ಅಧ್ಯಕ್ಷ ಡಾ.ಕೆ.ಜಿ. ಬ್ಯಾಕೋಡಿ ಕಾರ್ಯಕ್ರಮ ಉದ್ಘಾಟಿಸುವರು. ಪಾಲಿಕೆ ಸದಸ್ಯರಾದ ಶಾಂತಾ ಹಿರೇಮಠ, ಶಿವಗಂಗಾ ಮಾನಶೆಟ್ಟರ ಪ್ರತಿಭಾ ಪುರಸ್ಕಾರ ವಿತರಿಸುವರು. ಎಸ್ .ಎಸ್ . ರೊಟ್ಟಿ, ವೆಂಕಟರಮಣ ಚಿಟ್ಟಾ, ರಾಜಕುಮಾರ ಕಾಮರಡ್ಡಿ, ಬಾಗಣ್ಣ ಬಿರಾಜದಾರ, ರಾಕೇಶ ಪಲ್ಲಾಟಿ, ಸುರೇಶ ಮಾನಶೆಟ್ಟರ, ದೇವಾಂಗ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಚಿತ್ತಗಿಂಜಲ ಅತಿಥಿಗಳಾಗಿ ಆಗಮಿಸುವರು.ವಾಸು ನಂದರಗಿ, ಜಯಶ್ರೀ ಸುರಪುರ, ನಿರ್ಮಲಾ ಬಳ್ಳಿ, ಗೀತಾ ದೇವಾಂಗಮಠ ಅವರನ್ನು ಸನ್ಮಾನಿಸಲಾಗುವುದು. ದೇವಾಂಗ ಸಮಾಜ ಬನಶಂಕರಿ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ ಭಾಪ್ರಿ ಅಧ್ಯಕ್ಷತೆ ವಹಿಸುವರು.
26ನೇ ವಾರ್ಷಿಕೋತ್ಸವ
ಬನಶಂಕರ ದೇವಿ ಮೂರ್ತಿ ಪ್ರತಿಷ್ಠಾನದ 26ನೇ ವಾರ್ಷಿಕೋತ್ಸವ ಕಾರ್ಯಕ್ರಮ ನ.2ರಂದು ಜರುಗಲಿದೆ. ಇದೇ ಸಂದರ್ಭದಲ್ಲಿದೇವಲ ದೇವಾಂಗ ಮಹರ್ಷಿ ಭಾವಚಿತ್ರ ಹಾಗೂ ಬನಶಂಕರಿ ದೇವಿಯ ಪಾಲಕಿ ಉತ್ಸವದ ಭವ್ಯ ಮೆರವಣಿಗೆ ಬೆಳಗ್ಗೆ 8.30ಕ್ಕೆ ನಡೆಯಲಿದೆ. ರಾತ್ರಿ 8.30ಕ್ಕೆ ಕಾರ್ತಿಕೋತ್ಸವ ಜರುಗಲಿದೆ.

