ಒಲಿಂಪಿಕ್ ಪದಕ ವಿಜೇತ ಹಾಕಿ ಪಟು ನಿಧನ

Contributed byHarsha Vardhana|Vijaya Karnataka
Subscribe

ಭಾರತದ ಮಾಜಿ ಹಾಕಿ ಗೋಲ್‌ ಕೀಪರ್‌ ಮ್ಯಾನುಯೆಲ್‌ ಫ್ರೆಡರಿಕ್‌ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. 1972ರ ಮ್ಯೂನಿಚ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ತಂಡದ ಸದಸ್ಯರಾಗಿದ್ದರು. 2019ರಲ್ಲಿ ಜೀವಮಾನದ ಸಾಧನೆಗಾಗಿ ಮೇಜರ್‌ ಧ್ಯಾನ್‌ಚಂದ್‌ ಪುರಸ್ಕಾರ ಪಡೆದಿದ್ದರು. ಕ್ರೀಡಾ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

indian hockey player frederick passes away olympic medalist shock
ಭಾರತದ ಮಾಜಿ ಹಾಕಿ ಗೋಲ್‌ ಕೀಪರ್‌ ಮ್ಯಾನುಯೆಲ್‌ ಫ್ರೆಡರಿಕ್‌ ಅವರು 78ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ನಿಧನರಾದ ಫ್ರೆಡರಿಕ್‌ ಅವರು ಕಳೆದ 10 ತಿಂಗಳಿಂದ ಪ್ರಾಸ್ಟೇಟ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 1972ರ ಮ್ಯೂನಿಚ್‌ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕ ಗೆದ್ದ ತಂಡದ ಸದಸ್ಯರಾಗಿದ್ದ ಇವರಿಗೆ 2019ರಲ್ಲಿ ಜೀವಮಾನದ ಸಾಧನೆಗಾಗಿ ಮೇಜರ್‌ ಧ್ಯಾನ್‌ಚಂದ್‌ ಪುರಸ್ಕಾರ ಲಭಿಸಿತ್ತು.

ಕೇರಳ ಮೂಲದ ಫ್ರೆಡರಿಕ್‌ ಅವರು ಭಾರತೀಯ ಹಾಕಿ ತಂಡದ ಪ್ರಮುಖ ಗೋಲ್‌ ಕೀಪರ್‌ ಆಗಿ ಗುರುತಿಸಿಕೊಂಡಿದ್ದರು. 1972ರ ಮ್ಯೂನಿಚ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಇವರ ಅದ್ಭುತ ಆಟಕ್ಕೆ ಗೌರವ ಸೂಚಿಸಿ, 2019ರಲ್ಲಿ ಜೀವಮಾನದ ಸಾಧನೆಗಾಗಿ ನೀಡುವ ಪ್ರತಿಷ್ಠಿತ ಮೇಜರ್‌ ಧ್ಯಾನ್‌ಚಂದ್‌ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
ಫ್ರೆಡರಿಕ್‌ ಅವರ ನಿಧನದ ಸುದ್ದಿ ಕೇಳಿ ಹಾಕಿ ಇಂಡಿಯಾ ಸೇರಿದಂತೆ ಕ್ರೀಡಾ ರಂಗದ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆ ಕ್ರೀಡಾ ಲೋಕಕ್ಕೆ ತುಂಬಲಾರದ ನಷ್ಟ ಎಂದು ಎಲ್ಲರೂ ಸ್ಮರಿಸಿಕೊಂಡಿದ್ದಾರೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ