ಉಸ್ತುವಾರಿ ಸಚಿವರ ಜಿಲ್ಲಾಪ್ರವಾಸ
ಕೊಪ್ಪಳ: ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ನ.1 ರಂದು ಜಿಲ್ಲಾಪ್ರವಾಸ ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಜಿಲ್ಲಾಕ್ರೀಡಾಂಗಣದಲ್ಲಿಜಿಲ್ಲಾಡಳಿತದಿಂದ ಆಚರಿಸಲಾಗುವ 70ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಭಾಗವಹಿಸಿ, ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 10 ಗಂಟೆಗೆ ಕೊಪ್ಪಳದಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಜಾಗೃತಿ ಸಭೆ ಇಂದು
ಕೊಪ್ಪಳ: ನಗರದ ಶ್ರೀ ಕಾಳಿದಾಸ ವಿದ್ಯಾಸಂಸ್ಥೆಯ ಸಮುದಾಯ ಭವನದಲ್ಲಿನ.2ರಂದು ಕಲ್ಯಾಣ ಕರ್ನಾಟಕ ವಿಭಾಗದ ಕುರುಬರ ಎಸ್ .ಟಿ. ಮೀಸಲು ಮಾಹಿತಿ-ಜಾಗೃತಿ ಸಭೆ ನಡೆಯಲಿದೆ. ಕುರುಬ ಸಮಾಜವು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಇಂದಿಗೂ ಅಲೆಮಾರಿ ಜೀವನ ನಡೆಸುತ್ತಿರುವ, ಬುಡಕಟ್ಟು ಸಂಸ್ಕೃತಿ ಆಚರಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರ್ರದಲ್ಲಿಮೀಸಲು ಪ್ರಜೆಗಳ ಹಕ್ಕು. ದೇಶದ ಹಲವು ರಾಜ್ಯಗಳಲ್ಲಿಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿದ್ದರೂ ರಾಧಿಜ್ಯಧಿದಲ್ಲಿಕುರುಬ ಸಮುದಾಯ ಮೀಸಲಿಧಿನಿಂದ ವಂಚಿತವಾಗಿದೆ.ಪ್ರಸ್ತುತ ಆಗುತ್ತಿರುವ ಬೆಳವಣಿಗೆಗಳು ಮುಂದಿನ ಪ್ರಕ್ರಿಯೆಗಳು ಹಾಗೂ ಹೋರಾಟದ ಬಗ್ಗೆ ರಾಜ್ಯಾದ್ಯಂತ ಮಾಹಿತಿ-ಜಾಗೃತಿ ಸಭೆ ನಡೆಸಲು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅಧ್ಯಕ್ಷತೆಯಲ್ಲಿರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಲಿದೆ. ಕುರುಬ ಸಮಾಜದ ಮುಧಿಖಂಡರು ಸಭೆಯಲ್ಲಿಭಾಗವಹಿಸಬೇಕು ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ, ಉಪಾಧ್ಯಕ್ಷ ಕುಬೇರ ಮಜ್ಜಿಗಿ ಪ್ರಧಿಕಧಿಟಧಿಣೆಧಿಯಲ್ಲಿತಿಧಿಳಿಧಿಸಿಧಿದ್ದಾರೆ.

