* ಕೇಳ್ರಪ್ಪೊ ನಮ್ಮ ಏರಿಯಾ ಪ್ರಾಬ್ಲಂ - 04
ಕಿಕ್ಕರ್ : ಚೀಲೂರು - ಗೋವಿನಕೋವಿ ಮುಖ್ಯರಸ್ತೆ ಬದಿ ಸಿಪ್ಪೆ ರಾಶಿ | ಕೊಳೆತು ದುರ್ನಾತ ಸೂಸುವ ತಿಪ್ಪೆ
----
ಸಿಪ್ಪೆ ವಾಸನೆಗೆ ವಾಹನ ಸವಾರರು ಸುಸ್ತು
ವಿಕ ವಿಶೇಷ ನ್ಯಾಮತಿ
ಅಡಕೆ ಸಂಸ್ಕರಣೆ ಮಾಡಿದ ನಂತರ ಸಿಪ್ಪೆಯನ್ನು ರಸ್ತೆಯ ಬದಿಗೆ ಸುರಿಯುವ ಚಾಳಿ ಈ ಭಾಗದಲ್ಲಿಮತ್ತೆ ಮುಂದುವರಿದಿದೆ. ಜೊತೆಗೆ ಒಣಗಿದ ಬಳಿಕ ಸಿಪ್ಪೆಗೆ ಬೆಂಕಿ ಹಚ್ಚುತ್ತಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗತೊಡಗಿದೆ ಎಂದು ಸಾರ್ವಜನಿಕರು ತಕರಾರು ತೆಗೆದಿದ್ದಾರೆ.
ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಲ್ಲಿಅಡಕೆ ಕೊಯ್ಲುನಡೆಯುತ್ತಿದ್ದು, ರೈತರು, ಖೇಣಿದಾರರು ಸುಲಿದ ಅಡಕೆಯ ಸಿಪ್ಪೆಯನ್ನು ರಸ್ತೆಯ ಬದಿ, ಕೆರೆಯ ಏರಿ, ನದಿ, ಹಳ್ಳಗಳ ತೀರದ ಬಳಿ ತಂದು ಸುರಿಯುವ ಕಾರ್ಯ ಮುಂದುವರಿಸಿದ್ದಾರೆ. ತಾಲೂಕಿನ ಚೀಲೂರು - ಗೋವಿನಕೋವಿ ಮುಖ್ಯರಸ್ತೆಯ ಬದಿಯಲ್ಲಿಹೀಗೆ ರಾಶಿಗಟ್ಟಲೇ ಸುರಿದ ಸಿಪ್ಪೆ ಗೋಚರಿಸುತ್ತಿದೆ.
‘ಸಿಪ್ಪೆಗಳಿಗೆ ಬೆಂಕಿ ಹಚ್ಚುವುದರಿಂದ ಹಾಗೂ ರಸ್ತೆಯ ಬದಿ ಸುರಿಯುವುದರಿಂದ ಕೊಳೆತು ಇದರ ಕಮಟು ವಾಸನೆ ಬಹುದೂರದವರೆಗೆ ಹರಡುತ್ತದೆ. ಇದರಿಂದ ಕೆಲವೊಮ್ಮೆ ಉಸಿರಾಡಲು ಸಮಸ್ಯೆ ಆಗುತ್ತಿದೆ. ರಸ್ತೆ ಬದಿ ಸಿಪ್ಪೆ ತಂದು ಸುರಿಯುವುದಕ್ಕೆ ಗ್ರಾಮ ಪಂಚಾಯಿತಿ ಕಡಿವಾಣ ಹಾಕಬೇಕು’ ಎಂದು ಈ ಭಾಗದ ಸಾರ್ವಜನಿಕರು, ವಾಹನ ಸವಾರರು ಮನವಿ ಮಾಡಿದ್ದಾರೆ.
ತಾಲೂಕಿನ ಕೆಲ ಬೆಳೆಗಾರರು, ವರ್ತಕರು ಅಡಕೆಯನ್ನು ಸುಲಿಸಿ ಸಿಪ್ಪೆಯನ್ನು ರಸ್ತೆ ಪಕ್ಕಕ್ಕೆ ತಂದು ಸುರಿಯುತ್ತಿದ್ದಾರೆ. ಇದರಿಂದ ಪ್ರಯಾಣಿಕರು ನಾನಾ ರೀತಿಯ ತೊಂದರೆ ಅನುಭವಿಸುವಂತಾಗಿದೆ. ಹಲವು ವರ್ಷಗಳಿಂದಲೂ ಇಂತಹದೇ ಸನ್ನಿವೇಶ ಸೃಷ್ಟಿಯಾಗುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣ ಮೌನ ವಹಿಸುತ್ತಿದ್ದಾರೆ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿಬಂದಿದೆ.
ರಸ್ತೆ ಆವರಿಸಿಕೊಳ್ಳುವ ಸಿಪ್ಪೆ:
ಅಡಕೆ ಬೆಳೆಗಾರರು ಹಾಗೂ ವರ್ತಕರು ಸಿಪ್ಪೆಯ ಮರುಬಳಕೆಗೆ ಚಿಂತನೆ ನಡೆಸದೆ, ರಸ್ತೆಯ ಪಕ್ಕದಲ್ಲೇ ಹಾಕುತ್ತಿರುವುದರಿಂದ ವಾಹನಗಳು ದಿನಂಪ್ರತಿ ಸಂಚರಿಸಿ ಸಿಪ್ಪೆಯ ರಾಶಿ ರಸ್ತೆಯನ್ನು ಆವರಿಸಿಕೊಳ್ಳುತ್ತಿವೆ. ಇದರಿಂದ ವಾಹನಗಳು ನಿಯಂತ್ರಣಕ್ಕೆ ಸಿಗದಂತಾಗುತ್ತಿವೆ. ಕೆಲವೊಮ್ಮೆ ರಸ್ತೆಯಲ್ಲಿಯ ಗುಂಡಿಗಳು ಕಾಣಸಿಗದೇ ಸಮಸ್ಯೆಗೆ ಸಿಲುಕುವಂತಾಗಿದೆ. ಇನ್ನು ಸಿಪ್ಪೆಯ ಗುಡ್ಡೆಗಳು ಕೊಳೆತು ನಾರುವುದರ ಕೊಳೆತ ವಾಸನೆ ಕುಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
----
ಬಾಕ್ಸ್ ...
ದಟ್ಟ ಹೊಗೆ
ಸಿಪ್ಪೆಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಬೆಂಕಿ ಹಾಕಿದಾಗ ದಟ್ಟ ಹೊಗೆ ಕವಿಯುವುದರಿಂದ ಹಾಗೂ ವಾಸನೆಯಿಂದಾಗಿ ವಾಹನ ಚಾಲಕರು ವಿಚಲಿತರಾಗುತ್ತಿದ್ದಾರೆ. ಹೊಗೆಯ ದಟ್ಟಣೆ ಕೆಲವೊಮ್ಮೆ ಅಪಾಯಕ್ಕೂ ಎಡೆಮಾಡಿಕೊಟ್ಟಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಅನಾಹುತಗಳು ನಡೆದಿದ್ದು, ಅದೃಷ್ಟವಶಾತ ಸಣ್ಣಪುಟ್ಟ ಗಾಯಗಳೊಂದಿಗೆ ಬೈಕ್ ಸವಾರರು ಪಾರಾಗಿದ್ದಾರೆ.
----
ಕೋಟ್ ...
ರೈತರು ಹಾಗೂ ವರ್ತಕರು ರಸ್ತೆ ಬದಿಯಲ್ಲಿಅಡಕೆ ಸಿಪ್ಪೆ, ಕಸದ ರಾಶಿ ಹಾಕುತ್ತಿರುವುದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ.
- ಪ್ರಶಾಂತ್ ವಾಹನ ಸವಾರ.
----
31ಎನ್ ಎಂಟಿ1
---
ನ್ಯಾಮತಿ ತಾಲೂಕಿನ ಚೀಲೂರು - ಗೋವಿನಕೋವಿ ಮುಖ್ಯರಸ್ತೆಯ ಬದಿಯಲ್ಲಿಹಾಕಿರುವ ಸುಲಿದ ಅಡಕೆಯ ಸಿಪ್ಪೆಯನ್ನು ಸುರಿದಿರುವುದು.

