ರಾಜ್ಯ ಸರಕಾರದಿಂದ ‘ಭೂ ಗ್ಯಾರಂಟಿ’

Contributed bysantoshappajivk@gmail.com|Vijaya Karnataka
Subscribe

ರಾಜ್ಯ ಸರಕಾರದ 'ಭೂ ಗ್ಯಾರಂಟಿ' ಯೋಜನೆಯಡಿ ಹಾನಗಲ್ಲ ತಾಲೂಕಿನ ಆಲದಕಟ್ಟಿ ಮತ್ತು ಬಿಂಗಾಪುರ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಾಸಿಸುವವರಿಗೆ ಮನೆಯ ಒಡೆಯನಾಗುವ ಅವಕಾಶ ಕಲ್ಪಿಸಲಾಗಿದೆ. ಶಾಸಕ ಶ್ರೀನಿವಾಸ ಮಾನೆ ಅವರು 220 ಕೋಟಿ ರೂ. ವೆಚ್ಚದ ಕೆರೆ ತುಂಬಿಸುವ ಯೋಜನೆ ಅನುಮೋದನೆ ಬಗ್ಗೆ ತಿಳಿಸಿದರು.

state governments land guarantee a promise of new home ownership

*ಆಲದಕಟ್ಟಿ, ಬಿಂಗಾಪುರ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ರಾಜ್ಯ ಸರಕಾರದಿಂದ ‘ಭೂ ಗ್ಯಾರಂಟಿ’

ವಿಕ ಸುದ್ದಿಲೋಕ ಅಕ್ಕಿಆಲೂರು

ಪಂಚ ಗ್ಯಾರಂಟಿಗಳ ಜೊತೆಗೆ ಭೂ ಗ್ಯಾರಂಟಿಯನ್ನು ನಮ್ಮ ಸರಕಾರ ಕೊಟ್ಟಿದೆ. ವಾಸಿಸುವವನನ್ನು ಮನೆಯ ಒಡೆಯನನ್ನಾಗಿ ಮಾಡಿ, 10 ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಭೂಮಿಗೆ ಮಾಲಿಕನನ್ನಾಗಿ ಮಾಡಿದೆ. ಜಿಲ್ಲೆಯಲ್ಲಿಯೇ ಹಾನಗಲ್ಲತಾಲೂಕಿನಲ್ಲಿಅತೀ ಹೆಚ್ಚು ಫಲಾನುಭವಿಗಳು ಹಕ್ಕುಪತ್ರ ಪಡೆಯುತ್ತಿದ್ದಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಹಾನಗಲ್ಲತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿಆಲದಕಟ್ಟಿ ಮತ್ತು ಬಿಂಗಾಪುರ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘‘ಪ್ರತಿಯೊಬ್ಬರಿಗೂ ಸ್ವಂತ ಸೂರು ಇರಬೇಕು, ಹಸಿದ ಹೊಟ್ಟೆಗೆ ಅನ್ನ ಸಿಗಬೇಕು, ಜನಕಲ್ಯಾಣವಾಗಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಕಳಕಳಿಯಿಂದ ಕೆಲಸ ಮಾಡುತ್ತಿದೆ. ಹಾವೇರಿ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಕಟ್ಟಡ ಭಾಗ್ಯ ಒದಗಿಸಲಾಗಿದೆ. ಪ್ರತಿವರ್ಷ ನೂರು ಜನ ವೈದ್ಯರನ್ನು ಹಾವೇರಿ ಜಿಲ್ಲೆನೀಡುತ್ತಿದೆ. ಜಿಲ್ಲೆಯ 400 ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಗಳು ಅಂತಿಮ ಹಂತಕ್ಕೆ ಬಂದಿವೆ, ಬೆಳೆಹಾನಿಗೆ ಪರಿಹಾರ ಕೊಡುವ ಕೆಲಸ ಶೀಘ್ರ ನಡೆಯಲಿದೆ. ಕೇಂದ್ರ ಸರಕಾರದಿಂದ ಬರುವ ಹಣಕ್ಕಿಂತ ಹೆಚ್ಚು ಹಣ ಕೊಡುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ’’ ಎಂದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘‘30-40 ವರ್ಷಗಳ ಕಾಲ ಮನೆ ಮಾಲಿಕತ್ವ ಇಲ್ಲದೇ ಪರಿತಪಿಸುತ್ತಿದ್ದ ಸಾವಿರಾರು ಕುಟುಂಬಗಳಲ್ಲೀಗ ಸಂತಸ ಮೂಡಿದೆ. ನರೇಗಲ್ , ಕೂಸನೂರು ಕೆರೆಗಳನ್ನು ತುಂಬಿಸುವ 220 ಕೋಟಿ ರೂ. ವೆಚ್ಚದ ಯೋಜನೆ ಅನುಮೋದನೆ ಸಿಕ್ಕಿದೆ’’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್ , ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಸವಣೂರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ತಹಸೀಲ್ದಾರ್ ರೇಣುಕಾ ಎಸ್ ., ಆಲದಕಟ್ಟಿ ಗ್ರಾಪಂ ಅಧ್ಯಕ್ಷೆ ಮಾಳವ್ವ ದೇವಸೂರ, ಮಾರನಬೀಡ ಗ್ರಾಪಂ ಅಧ್ಯಕ್ಷ ಈರಣ್ಣ ಜಾಡರ, ಉಪಾಧ್ಯಕ್ಷೆ ನಗೀನಾ ಹರವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಜಿಪಂ ಮಾಜಿ ಸದಸ್ಯರಾದ ಟಾಕನಗೌಡ ಪಾಟೀಲ, ಕೊಟ್ರಪ್ಪ ಕುದರಿಸಿದ್ದನವರ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್ , ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಮಲ್ಲಿಕಾರ್ಜುನ ದೇವಣ್ಣನವರ, ಸುರೇಶ ಮುಸುರಿ, ಬಸನಗೌಡ ಪಾಟೀಲ, ಚಂದ್ರು ಬಳ್ಳಾರಿ, ಉಳವಪ್ಪ ಜಿಂಗಿ, ಅಶೋಕ ಹೆಗಡೆ, ಗೋಪಾಲ ಕಾಟಣ್ಣನವರ, ವೆಂಕಟೇಶ ಬಂಡಿವಡ್ಡರ, ಮಹಲಿಂಗಪ್ಪ ಹಾದಿಮನಿ ಇತರರಿದ್ದರು.

ಫೋಟೊ 31ಎಕೆಆರ್ 1

ಹಾನಗಲ್ಲತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿನಡೆದ ಸಮಾರಂಭದಲ್ಲಿಆಲದಕಟ್ಟಿ, ಬಿಂಗಾಪುರ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಜಿಲ್ಲಾಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ಶ್ರೀನಿವಾಸ ಮಾನೆ ಇದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ