ಜಾನ್ ಡಿಸೋಜ ಕುಂದಾಪುರ
ಒಟh್ಞ.dsಟ್ಠ್ಢaಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಇಲ್ಲಿನ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಗೆ ಪುರಸಭೆ ಮುಂದಾಗಿದ್ದು, ಪರ ವಿರೋಧ ನಿಲುವು ವ್ಯಕ್ತವಾಗುತ್ತಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲಎಂಬ ಅಭಿಪ್ರಾಯ ಮೂಡಿದೆ.
ರಸ್ತೆಬದಿಯಲ್ಲಿಕೈಗಾಡಿ, ಸಣ್ಣ ವಾಹನಗಳನ್ನಿರಿಸಿಕೊಂಡು ಆಹಾರ ಮತ್ತು ಸರಕುಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿರುವ 75ಕ್ಕೂ ಮಿಕ್ಕಿ ಬೀದಿಬದಿ ವ್ಯಾಪಾರಿಗಳು ಈಗ ಅಡಕತ್ತರಿಗೆ ಸಿಲುಕಿದ್ದಾರೆ. ವ್ಯಾಪಾರದ ಉದ್ದೇಶಕ್ಕೆ ಸಾಲ ಮಾಡಿಕೊಂಡು ವಾಹನ ಖರೀದಿಸಿದ್ದೇವೆ. ನಮ್ಮ ಕುಟುಂಬಗಳನ್ನು ಪೋಷಿಸಲು ಇದ್ದ ಏಕೈಕ ಮಾರ್ಗಕ್ಕೂ ಈಗ ಕಡಿವಾಣ ಹಾಕಲಾಗುತ್ತಿದೆ. ಸಂಜೆ ಕೆಲವು ಗಂಟೆಗಳ ಕಾಲ ವ್ಯವಹಾರ ನಮ್ಮದು. ಅಂಗಡಿಗಳ ತೆರವು ಕಾರ್ಯ ನಡೆಸಲಾಗುತ್ತಿದ್ದು, ನಮಗೆ ದಿಕ್ಕು ತೋಚದಂತಾಗಿದೆ ಎಂದು ಸಂತ್ರಸ್ತ ಬೀದಿವ್ಯಾಪಾರಿಗಳು ಅಧಿವಧಿಲಧಿತ್ತುಧಿಕೊಂಡಿಧಿದ್ದಾಧಿರೆ.
ಸಣ್ಣ ವ್ಯಾಪಾರಿಗಳ ಪೈಕಿ ಹಲವರು ಈ ಹಿಂದೆ ಬೆಂಗಳೂರು, ಮುಂಬಯಿ ಮತ್ತು ಹೈದರಾಬಾದ್ ನಂತಹ ದೊಡ್ಡ ನಗರಗಳಲ್ಲಿಸಣ್ಣ ತಿನಿಸುಗಳನ್ನು ನಡೆಸುತ್ತಿದ್ದವರು. ಕೋವಿಡ್ ನಿಂದ ನಷ್ಟ ಅನುಭವಿಸಿ ಊರಿಗೆ ಬಂದ ಅನೇಕರು ಊರಿನಲ್ಲಾದರು ಬದುಕು ಕಟ್ಟಿಕೊಳ್ಳೋಣ ಎಂದು ಬೀದಿಯಲ್ಲಿವ್ಯಾಪಾರ ಆರಂಭಿಸಿದ್ದು ಅಂತವರಿಗೆ ಈಗ ಭಾರಿ ಹೊಡೆತ ಬಿದ್ದಿದೆ.
ಬೀದಿ ಬದಿ ವ್ಯಾಧಿಪಾಧಿರಧಿದಿಂದ ಸಾಧಿರ್ವಧಿಜಧಿನಿಧಿಕಧಿರಿಗೆ ತೊಂದರೆ ಆಧಿಗುಧಿತ್ತಿದೆ. ತೆಧಿರಧಿವುಧಿಗೊಧಿಳಿಧಿಸಲು ಕೋರ್ಟ್ ಆಧಿದೇಧಿಶವೂ ಇದೆ. ಪಾಧಿರ್ಕಿಂಗ್ ಸೇಧಿರಿಧಿದಂತೆ ಸಂಚಾರ ವ್ಯಧಿವಧಿಸ್ಥೆಗೂ ಬೀದಿ ಬದಿ ವ್ಯಾಧಿಪಾರ ಸಧಿಮಸ್ಯೆ ಉಂಟು ಮಾಧಿಡುಧಿತ್ತಿದೆ. ಈ ಕಾಧಿರಧಿಣಧಿದಿಂದ ತೆಧಿರವು ಮಾಧಿಡುಧಿವುದು ಅಧಿನಿಧಿವಾರ್ಯ ಎಂಬುದು ಅಧಿಧಿಧಿಕಾಧಿರಿಧಿಗಳ ಹೇಧಿಳಿಧಿಕೆ.
ಕೋಟ್
ಕೋರ್ಟ್ ಆದೇಶದಂತೆ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪರವಾನಗಿ ಪಡೆದುಕೊಂಡು ವ್ಯವಹಾರ ನಡೆಸುತ್ತಿರುವ ಯಾವುದೇ ಬೀದಿಬದಿಯ ಅಂಗಡಿ ತೆರವು ನಡೆಯುತ್ತಿಲ್ಲ. ಅನಧಿಕೃತವಾಗಿ ಅಂಗಡಿ ಇರಿಸಿಕೊಂಡವರ ವಿರುದ್ಧ ಮಾತ್ರ ಕ್ರಮ ಜರುಗಿಸಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳಿಂದ ನಗರದಲ್ಲಿಪಾರ್ಕಿಂಗ್ ಸಮಸ್ಯೆ ಉಲ್ಭಣಿಸಿದೆ ಎಂಬ ಸದಸ್ಯರ ಆರೋಪದ ಹಿನ್ನೆಲೆಯಲ್ಲಿಕೌನ್ಸಿಲ್ ನಿರ್ಣಯದಂತೆ ಕ್ರಮ ಜರುಗಿಸಲಾಗುತ್ತಿದೆ.
-ಮೋಹನದಾಸ ಶೆಣೈ, ಅಧ್ಯಕ್ಷ, ಪುರಸಭೆ ಕುಂದಾಪುರ.
ಕೋಟ್
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ರೂಪಿಸದೆ ಅವರನ್ನು ಏಕಾಏಕಿ ತೆರವುಗೊಳಿಸುವುದರಿಂದ ಅವರ ದೈನಂದಿನ ಜೀವನ ಮತ್ತು ಕುಟುಂಬಕ್ಕೆ ಭಾರಿ ಹೊಡೆತ ನೀಡಿದಂತಾಗುತ್ತದೆ. ಬೀದಿಬದಿ ವ್ಯಾಪಾರಿಗಳ ರಕ್ಷಣಾ ಕಾನೂನು ಉಲ್ಲಂಘನೆ ಮಾಡುವುದು ತರವಲ್ಲ. ತೆರವುಗೊಂಡ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ರಕ್ಷಣೆ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿಹೋರಾಟ ನಡೆಸಲಾಗುವುದು.
-ಚಂದ್ರಶೇಖರ ವಿ., ಕಾರ್ಮಿಕ ಮುಖಂಡ
ಪೋಟೊ//31ಕೆ-ಕೆಯುಎನ್ // ಬೀದಿಬದಿ ವ್ಯಾಪಾರಿಗಳಿಗೆ ಎದುರಾದ ಸಂಕಷ್ಟ

