ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕವು ಶುಕ್ರವಾರ ಈ ಏಕತಾ ನಡಿಗೆಯನ್ನು ಹಮ್ಮಿಕೊಂಡಿತ್ತು. ಶಾಸಕ ಮಹೇಶ ಟೆಂಗಿನಕಾಯಿ ಅವರು ನಡಿಗೆಗೆ ಚಾಲನೆ ನೀಡಿ, ಸರ್ದಾರ್ ವಲ್ಲಭಭಾಯಿ ಪಟೇಲರು ದೇಶದ ಗೃಹ ಸಚಿವರಾಗಿ ಮಾಡಿದ ಸಾಧನೆಗಳು ಮಾದರಿಯಾಗಿವೆ ಎಂದು ಶ್ಲಾಘಿಸಿದರು. ಹಿಂದಿನ ಹೈದರಾಬಾದ್ ಕರ್ನಾಟಕದ ಪರಿಸ್ಥಿತಿಯನ್ನು ನೆನಪಿಸಿಕೊಂಡು, ಅಖಂಡ ಭಾರತ ಉಳಿಯುತ್ತದೆಯೋ ಇಲ್ಲವೋ ಎಂಬ ಸಂದರ್ಭದಲ್ಲಿ ಪಟೇಲರು ದಿಟ್ಟ ನಿರ್ಧಾರ ತೆಗೆದುಕೊಂಡು ದೇಶವನ್ನು ಒಗ್ಗೂಡಿಸಿದರು ಎಂದು ಹೇಳಿದರು."ಸರ್ದಾರ್ ವಲ್ಲಭಭಾಯಿ ಪಟೇಲರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಜಗತ್ತಿಗೆ ಭಾರತ ಜಗನ್ಮಾತೆಯಾಗಿ ಬೆಳಗಬೇಕು ಎಂಬುದು ನಮ್ಮೆಲ್ಲರ ಕಲ್ಪನೆಯಾಗಿದ್ದು, ಈ ನಿಟ್ಟಿನಲ್ಲಿ ಪಟೇಲರು ತಾಳಿದ್ದ ಯೋಚನೆಗಳನ್ನು ಕಾರ್ಯಗತಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹುದೊಡ್ಡ ಯಶಸ್ಸು ಕಂಡಿದ್ದಾರೆ. ಆ ಕಾರಣಕ್ಕಾಗಿ ದೇಶಾದ್ಯಂತ ಬಿಜೆಪಿಯಿಂದ ಏಕತಾ ನಡಿಗೆ ಆಯೋಜಿಸಿದೆ" ಎಂದು ಟೆಂಗಿನಕಾಯಿ ತಿಳಿಸಿದರು.
ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ, ಭಾರತದ ಏಕತೆಗಾಗಿ ಬಿಜೆಪಿಯಿಂದ ದೇಶ ಹಾಗೂ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಏಕತಾ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು. ಈ ನಡಿಗೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದಾರೆ ಎಂದು ಅವರು ಹೇಳಿದರು.
ನಂತರ, ಇಲ್ಲಿನ ಮೂರು ಸಾವಿರ ಮಠದಿಂದ ಆರಂಭಗೊಂಡ ಏಕತಾ ನಡಿಗೆಯು ದುರ್ಗದ ಬೈಲುವರೆಗೆ ನಡೆಯಿತು. ಈ ಸಂದರ್ಭದಲ್ಲಿ ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಉಮೇಶಗೌಡ ಕೌಜಗೇರಿ, ಮಂಜುನಾಥ ಕಾಟಿಕರ, ಸಿದ್ದು ಮೊಗಲಿಶೆಟ್ಟರ, ಮಂಜುನಾಥ ಚಿಂತಗಿಂಜಲ್, ಪ್ರಭು ನವಿಲಗುಂದಮಠ, ಕೃಷ್ಣಾ ಗಂಡಗಾಳೇಕರ, ಪ್ರವೀಣ್ ಪವಾರ, ರಾಜು ಕೋರ್ಯಾಣಮಠ, ಮಂಜುನಾಥ ಬಿಜವಾಡ, ಅಮೃತ ಕಲ್ಪವೃಕ್ಷ, ರವಿ ನಾಯಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದ್ವಾ, ಅಕ್ಕಮ್ಮಾ ಹೆಗಡೆ, ವಿಜಯಲಕ್ಷ್ಮೇ ತಿಮ್ಮೊಳಿ, ಸುಮ ಶಿವನಗೌಡ್ರ, ನಾಗರತ್ನ ಬಳ್ಳಾರಿ, ಸಿರೋಜಾ ಛಬ್ಬಿ, ಲಕ್ಷ್ಮೇ ದೊಡ್ಡಮನಿ, ಲೀಲಾವತಿ ಪಾಸ್ತೆ, ಮೇಘನಾ ಶಿಂಧೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಫೋಟೋ: 31 ಸಂತೋಷ ಬಿಜೆಪಿ ಹುಬ್ಬಳ್ಳಿಯಲ್ಲಿ ನಡೆದ ಏಕತಾ ನಡಿಗೆಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.

