ಗಾರ್ಡನ್ ಲೋಕ 19

Contributed bynetravati.krishnamurthy@timesgroup.com|Vijaya Karnataka

ಬಾಲ್ಕನಿಗಳಲ್ಲಿ ಸೌತೆಕಾಯಿ ಬೆಳೆಯಲು 19 ವರ್ಟಿಕಲ್ ಟ್ರೆಲ್ಲಿಸ್‌ಗಳನ್ನು ಬಳಸಿ. ಇದು ಜಾಗ ಉಳಿತಾಯ ಮಾಡುವುದಲ್ಲದೆ ಉತ್ತಮ ಇಳುವರಿ ನೀಡುತ್ತದೆ. ಸ್ಪೇಸ್‌ಮಾಸ್ಟರ್‌ ಅಥವಾ ಬುಷ್‌ ಚಾಂಪಿಯನ್‌ ನಂತಹ ತಳಿಗಳನ್ನು ಆರಿಸಿ. ದೊಡ್ಡ ಪಾಟ್‌ಗಳು, ಪೋಷಕಾಂಶ ಭರಿತ ಮಣ್ಣು, ಮತ್ತು ಸೂರ್ಯನ ಬೆಳಕು ಅಗತ್ಯ. ಗಿಡಗಳಿಗೆ ನಿಯಮಿತವಾಗಿ ನೀರು ಮತ್ತು ಗೊಬ್ಬರ ನೀಡಿ. ಮೃದುವಾದ ಟೈಸ್‌ ಬಳಸಿ ಗಿಡಗಳನ್ನು ಟ್ರೆಲ್ಲಿಸ್‌ಗೆ ಕಟ್ಟಿ. 6 ರಿಂದ 8 ಇಂಚು ಬೆಳೆದಾಗ ಸೌತೆಕಾಯಿ ಕೊಯ್ಲು ಮಾಡಿ. ಇದು ಮನೆ ಬಾಗಿಲಿಗೆ ತಾಜಾ ಸೌತೆಕಾಯಿ ನೀಡುತ್ತದೆ.

a unique guide for garden enthusiasts grow varieties in the garden twist

ವರ್ಟಿಕಲ್ ಟ್ರೆಲ್ಲಿಸ್ ನಲ್ಲಿಬೆಳೆಸಿ ಸೌತೆಕಾಯಿ

--------------

ಬಾಲ್ಕನಿ ತೋಟಗಾರಿಕೆಯಲ್ಲಿಲಂಬವಾಗಿ ಗಿಡಗಳನ್ನು ಬೆಳೆಸುವುದು ಜಾಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಮಾತ್ರವಲ್ಲದೆ ಫಲಪ್ರದ್ರವೂ ಆಗಿದೆ. ಟ್ರೆಲ್ಲಿಸ್ ಗಳ ಬಳಕೆಯಿಂದ ಲಭ್ಯವಿರುವ ಸೀಮಿತ ಜಾಗವನ್ನು ಹೆಚ್ಚು ಬಳಸಿಕೊಳ್ಳಲು, ಸಸ್ಯಗಳ ಆರೋಗ್ಯವನ್ನು ಹೆಚ್ಚಿಸಲು ಮತ್ತು ಮನೆ ಬಾಗಿಲಿಗೆ ವರ್ಷಪೂರ್ತಿ ತಾಜಾವಾಗಿ ಬೆಳೆದ ಸೌತೆಕಾಯಿಯನ್ನು ಪಡೆಯಬಹುದು.

-ಸ್ಪೇಸ್ ಮಾಸ್ಟರ್ ಅಥವಾ ಬುಷ್ ಚಾಂಪಿಯನ್ ನಂತಹ ಸಾಂದ್ರೀಕೃತ ಅಥವಾ ಕ್ಲೈಂಬಿಂಗ್ ಸೌತೆಕಾಯಿ ಪ್ರಕಾರಗಳನ್ನು ಆಯ್ಕೆ ಮಾಡಿ. ಇವು ವರ್ಟಿಕಲ್ ಪಾಟ್ ಗಳಿಗೆ ಸೂಕ್ತ. ಸಣ್ಣ ಬಾಲ್ಕನಿಗಳಿಗೂ ಪರಿಪೂರ್ಣ ಆಯ್ಕೆ.

-ನೀರು ಸರಿಯಾಗಿ ಹರಿದು ಹೋಗುವ ಕನಿಷ್ಠ 12 ರಿಂದ 16 ಇಂಚುಗಳ ದೊಡ್ಡ ಪಾಟ್ ಗಳ ಅಗತ್ಯವಿರುತ್ತದೆ. ಸೀಸನ್ ಉದ್ದಕ್ಕೂ ಆರೋಗ್ಯಕರ ಬೇರುಗಳು ಮತ್ತು ಸ್ಥಿರ ಬೆಳವಣಿಗೆಗೆ ಪೋಷಕಾಂಶ ಭರಿತ ಮಣ್ಣನ್ನು ಒದಗಿಸಲು ಕಾಂಪೋಸ್ಟ್ ನೊಂದಿಗೆ ಪಾಟ್ ಮಿಶ್ರಣವನ್ನು ಬಳಸಬೇಕು.

-ಗಟ್ಟಿಮುಟ್ಟಾದ ಟ್ರೆಲ್ಲಿಸ್ ಗಳು, ಬಿದಿರಿನ ಕೋಲುಗಳು ಅಥವಾ ಜಾಲರಿಯ ಚೌಕಟ್ಟು ಬಳ್ಳಿಗಳು ಮೇಲೆಕ್ಕೆ ಬೆಳೆಯಲು ಸಹಾಯ ಮಾಡುತ್ತವೆ.

-ಸೌತೆಕಾಯಿಗಳು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಉತ್ತಮವಾಗಿ ಬೆಳೆಯುತ್ತವೆ. ಪ್ರತಿದಿನ ಕನಿಷ್ಠ 6 ರಿಂದ 8 ಗಂಟೆಗಳ ನೇರ ಸೂರ್ಯನ ಬೆಳಕು ಬೇಕಾಗುತ್ತದೆ.

-ಬಾಲ್ಕನಿಯಲ್ಲಿರುವ ಗಿಡಗಳು ಬೇಗೆನ ಒಣಗುತ್ತವೆ. ಗಿಡಗಳಿಗೆ ಆಗಾಗ್ಗೆ ನೀರು ಹಾಕಬೇಕು. ಮಣ್ಣು ತೇವವಾಗಿರುತವಂತೆ ನೋಡಿಕೊಳ್ಳಬೇಕು. ಉತ್ತಮ ಇಳುವರಿ ಪಡೆಯಲು ಪ್ರತಿ ಎರಡು ವಾರಗಳಿಗೊಮ್ಮ ಸಮತೋಲಿತ ದ್ರವ ರೂಪದ ಗೊಬ್ಬರ ಹಾಕಬೇಕು.

-ಮೃದುವಾದ ಗಾರ್ಡನ್ ಟೈಸ್ ಅಥವಾ ಟ್ವೈನ್ ಬಳಸಿ ಎಳೆಯ ಸೌತೆಕಾಯಿ ಗಿಡಗಳನ್ನು ಟ್ರೆಲ್ಲಿಸ್ ಮೇಲೆ ಸಡಿಲವಾಗಿ ಕಟ್ಟಿ. ಇದರಿಂದ ಕೀಟ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಕೊಯ್ಲುಸುಲಭವಾಗುತ್ತದೆ.

-6 ರಿಂದ 8 ಇಂಚು ಉದ್ದ ಬೆಳೆದ ಹಸಿರು ಸೌತೆಕಾಯಿ ಕೊಯ್ಲುಮಾಡಲು ಹೆಚ್ಚು ಸೂಕ್ತ. ನಿಯಮಿತವಾಗಿ ಕೊಯ್ಲುಮಾಡುವುದರಿಂದ ಹೆಚ್ಚು ಕಾಯಿಗಳು ಬಿಡುಲು ಅವಕಾಶ ಸಿಗುತ್ತದೆ.