ಬಸವಕಲ್ಯಾಣ: ಟಿಪ್ಪರ್ ಲಾರಿ -ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿಬೈಕ್ ಮೇಲೆ ತೆರಳುತ್ತಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಗರದ ಬಸ್ ನಿಲ್ದಾಣ ಹತ್ತಿರ ಬುಧವಾರ ಸಂಭವಿಸಿದೆ. ಬಸವಕಲ್ಯಾಣ ನಗರದ ಖಡಿ ಝಂಡಾ ಕಾಲೊನಿಯ ನಿವಾಸಿ ಸೈಯದ್ ದಸ್ತಗೀರ್ (35) ಮತ್ತು ಅವರ ಪತ್ನಿ ಯಾಸ್ಮೀನ್ ದಸ್ತಗೀರ್ (33) ಮೃತರು. ತ್ರಿಪುರಾಂತ ಬಳಿಯ ಕಾಲೊನಿ ಯೊಂದರಲ್ಲಿವಾಸಿ ಸುತ್ತಿದ್ದ ಮೃತರು, ಬೈಕ್ ಮೇಲೆ ಬಸ್ ನಿಲ್ದಾಣ ಕಡೆಯಿಂದ ಖಡಿ ಝಂಡಾ ಕಾಲೊನಿಯತ್ತ ತೆರಳುತ್ತಿ ದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಬಸವಕಲ್ಯಾಣ ಸಿಪಿಐ ಅಲಿಸಾಬ್ , ಪಿಎಸ್ ಐಗಧಿಳಾದ ಸಿದ್ದೇಶ್ವರ ಚಂದ್ರಶೇಖರ್ ನಾರಾ ಯಣಪುರ ಭೇಟಿ ನೀಡಿ ಪರಿಶೀಲಿಸಿದರು. ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

