ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊಗಳನ್ನು ವೈರಲ್ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಬುಧವಾರ ಬಿಜೆಪಿ ಮುಖಂಡ ದೇವರಾಜೇಗೌಡ ಸೇರಿದಂತೆ 39 ಜನರ ವಿರುದ್ಧ ಚಾಜ್ ರ್ ಶೀಟ್ ಸಲ್ಲಿಸಿದೆ. ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಬುಧವಾರ ಹಾಸನ ಜಿಲ್ಲೆಯ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ 13,712 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಆರೋಪಪಟ್ಟಿಯಲ್ಲಿ52 ಜನರ ಹೆಸರುಗಳಿದ್ದರೂ 39 ಜನರ ವಿರುದ್ಧ ಮಾತ್ರ ಚಾಜ್ ರ್ ಶೀಟ್ ದಾಖಲಿಸಲಾಗಿದೆ. ಅಶ್ಲೀಲ ವಿಡಿಯೊ ಹಂಚಲು ಆರೋಪಿಗಳು 70 ಪೆನ್ ಡ್ರೈವ್ ಖರೀದಿಸಿದ್ದರು ಮತ್ತು ಹಾಸನದಲ್ಲೇ 70 ಪೆನ್ ಡ್ರೈವ್ ಖರೀದಿ ಮಾಡಿರುವುದು ತನಿಖೆಯಿಂದ ಬಯಲಾಗಿದೆ ಎಂದು ಎಸ್ ಐಟಿ ಹೇಳಿದೆ.

