ಸಮೃದ್ಧಿ ಹೊತ್ತು ತರಲಿದೆ ಪರಾಭವ ಸಂವತ್ಸರ

Contributed bypunyavathi.hp@timesgroup.com|Vijaya Karnataka

ಪರಾಭವ ಸಂವತ್ಸರವು ಸಮೃದ್ಧಿಯನ್ನು ತರಲಿದೆ. ಈ ವರ್ಷ 13 ತಿಂಗಳುಗಳಿದ್ದು, ಗ್ರಹಣಗಳಿಲ್ಲದೆ ಮಳೆ, ಬೆಳೆ ಚೆನ್ನಾಗಿರಲಿದೆ. ಯುಗಾದಿಯಂದು ಬೇವು-ಬೆಲ್ಲ ಸೇವನೆ, ಮಾವು-ಬೇವಿನ ತೋರಣಕ್ಕೆ ವೈಜ್ಞಾನಿಕ ಮಹತ್ವವಿದೆ. ಅಮಾವಾಸ್ಯೆಯಿದ್ದರೂ ಯುಗಾದಿ ಹಬ್ಬವನ್ನು ಮಾರ್ಚ್ 19ರಂದೇ ಆಚರಿಸಬಹುದು. ಲಕ್ಷ್ಮೀ ನಾರಾಯಣರ ಆರಾಧನೆಗೆ ಇದು ಉತ್ತಮ ಸಮಯ.

importance and celebration of parabhava year in yugadi

ದೈವಜ್ಞ ಕೆ.ಎನ್ .ಸೋಮಯಾಜಿ ‘ಪರಾಭವ’ ನಾಮ ಸಂವತ್ಸರವು ಸಮೃದ್ಧಿಯ ಸಂಕೇತವಾಗಿದೆ. ಈ ಸಂವತ್ಸರವು 13 ತಿಂಗಳು ಬಂದಿದ್ದು, ಯಾವುದೇ ಗ್ರಹಣಗಳು ಸಂಭವಿಸುವುಧಿದಿಲ್ಲ. ಮಳೆ, ಬೆಳೆ ಉತ್ತಮವಾಗಿರಲಿದ್ದು, ಇದೊಂದು ಸಮೃದ್ಧಿಯ ಸಂವತ್ಸರವಾಗಿದೆ. ವಾಸ್ತವದಲ್ಲಿಪರಾಭವ ಎಂದರೆ ಸೋಲು ಎಂಬ ಅರ್ಥ ಕೊಡುತ್ತದೆ. ಆದರೆ ಪರಾಭವ ಸಂವತ್ಸದರ ಕುರಿತು ಭಯ ಪಡಬೇಕಾಗಿಲ್ಲ. ಪುರಾಣೋಕ್ತವಾಗಿ ನಾರದ ಮಹರ್ಷಿಯ ಮಕ್ಕಳುಗಳ ಹೆಸರುಗಳನ್ನು ಸಂವತ್ಸರಕ್ಕೆ ಇಡಲಾಗಿದೆ. 60 ಸಂವತ್ಸರಗಳ ಒಂದು ಚಕ್ರದಲ್ಲಿಪರಾಭವ ನಾಮ ಸಂವತ್ಸರವೂ ಒಂದಾಗಿದೆ. ಸಾಮಾನ್ಯವಾಗಿ ಒಂದು ಸಂವತ್ಸರ ಎಂದರೆ 12 ತಿಂಗಳುಗಳಿರುತ್ತವೆ. ಆದರೆ ಪರಾಭವ ನಾಮ ಸಂವತ್ಸರ 13 ತಿಂಗಳುಗಳನ್ನು ಹೊಂದಿರುವ ಸಂವತ್ಸರಧಿವಾಗಿದೆ. ಜೇಷ್ಠ ಮಾಸ ಎರಡು ತಿಂಗಳು ಬಂದಿದೆ. ಅಧಿಕ ಮಾಸದ ಬಗೆಗೂ ಭಯ ಬೇಕಿಲ್ಲ. ‘ಅಧಿಕಸ್ಯ ಅಧಿಕ ಫಲಂ’ ಎಂದು ಶಾಸ್ತ್ರ ಹೇಳುತ್ತದೆ. ಹಾಗಾಗಿ ಲಕ್ಷ್ಮೇ ನಾರಾಯಣರ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಸಮಯ ಇದಾಗಿದೆ. ಈ ಸಂವತ್ಸರ ಪೂರ್ತಿ ಯಾವುದೇ ಗ್ರಹಣಗಳು ಸಂಭವಿಸುವುದಿಲ್ಲ. ಇದು ಕೂಡ ಈ ಸಂವತ್ಸರದ ವಿಶೇಷವಾಗಿದೆ. ಮಾವು-ಬೇವಿನ ವೈಶಿಷ್ಟ್ಯ: ಯುಗಾದಿಧಿಯಂದು ಕುಲದೇವರು ಹಾಗೂ ಇಷ್ಟ ದೇವರಿಗೆ ಪೂಜೆ ಸಲ್ಲಿಸಿ, ಬೇವು-ಬೆಲ್ಲವನ್ನು ಪ್ರಸಾದದ ರೂಪದಲ್ಲಿಸ್ವೀಕರಿಸಬೇಕು. ನಂತರ ಪಂಚಾಂಗಕ್ಕೆ ಪೂಜೆ ಸಲ್ಲಿಸಿ, ಸ್ವಯಂ ಪಂಚಾಂಗ ಓದಬಹುದು ಅಥವಾ ಪಂಡಿತಧಿರನ್ನು ಕರೆಸಿ ಓದಿಸುವ ಮೂಲಕ ಪಂಚಾಂಗ ಶ್ರವಣದೊಂದಿಗೆ ವರ್ಷದ ಫಲ ತಿಳಿಯಧಿಬೇಕು. ಮನೆ ಮಂದಿಯೆಲ್ಲಾಕುಳಿತು ಹಬ್ಬದೂಟ ಮಾಡುವುದು ಆಚರಣೆಯ ವಿಶೇಷತೆ. ಪ್ರಾಂತೀಯವಾಗಿ ಆಚರಣೆ ಭಿನ್ನವಾಗಿರುಧಿತ್ತದೆ. ಯುಗಾದಿಧಿಯಂದು ಪಂಚಾಂಗಕ್ಕೆ ಪೂಜೆ ಮಾಡಧಿಬೇಕು. ಯುಗಾದಿಯ ದಿನ ಪಂಚಾಂಗ ಪಠಣ, ಶ್ರವಣ ಮುಖ್ಯವಾಧಿದುದು. ಉದಕ ಕುಂಭ (ನೀರು ತುಂಬಿದ ಪಾತ್ರೆ) ಸಹಿತ ನೂತನ ವಸ್ತ್ರ ಮತ್ತು ಧಾನ್ಯವನ್ನು ದಾನ ಕೊಟ್ಟು, ಕುಟುಂಬ ಸಮೇತರಾಗಿ ಬೇವು-ಬೆಲ್ಲಸೇವನೆಯ ನಂತರ ಹಬ್ಬದೂಟ ಸವಿಯುವುದು ಹಬ್ಬದ ಆಚರಣೆ ವಿಧಾನ. ಯುಗಾದಿಗೆ ಮಾವಿನ ತೋರಣವೇ ಆಗಬೇಕು. ಇದು ಕ್ಷೀರ ಸಸ್ಯ. ಮಾವನ್ನು ಮುರಿದರೆ ಬಿಳಿ ದ್ರವ ಬರುತ್ತದೆ. ನಕಾರಾತ್ಮಕ ಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ಮಾವಿನ ಎಲೆಗೆ ಇದೆ. ಇದು ಬಿಸಿಲು ಏರುವ ಕಾಲ. ಹವಾಮಾನ ವೈಪರೀತ್ಯದ ಕಾಲ. ಗಾಳಿಧಿಯಲ್ಲಿನ ವೈರಸ್ , ಬ್ಯಾಕ್ಟೀರಿಧಿಯಾಧಿಧಿಗಳನ್ನು ನಿಗ್ರಹಿಸುವ ಶಕ್ತಿ ಬೇವಿಗಿದೆ. ಹೀಗಾಗಿ, ಮಾವು-ಬೇವು ತೋರಣ ಹೊಸ್ತಿಲಿಗೆ ಕಟ್ಟುವುದು ತುಂಬಾ ಮುಖ್ಯ. ಯುಗಾದಿಯ ಬೇವು-ಬೆಲ್ಲಕ್ಕೆ ವೈಜ್ಞಾನಿಕ ಸಂಸ್ಕಾರವಿದೆ. ಸಿಹಿ-ಕಹಿಯ ಮಿಶ್ರಣವು ನಮಗೆ ಬದುಕಿನ ನೀತಿಯನ್ನು ಅರ್ಥ ಮಾಡಿಸುವಂತಿದೆ. ಬದುಕಿನಲ್ಲಿಏನೇ ಬರಲಿ ಸಮಚಿತ್ತ, ಸಮಭಾವದಿಂದ ಸ್ವೀಕರಿಸಬೇಕು ಎಂಬುದನ್ನು ಸೂಚಿಸುತ್ತದೆ. ಬೇವು ಅನ್ನುವುದು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಯುಗಾದಿಗೆ ಅಮಾವಾಸ್ಯೆಯ ಭಯ ಬೇಡ: ಮಾರ್ಚ್ 19ರಂದು ಯುಗಾದಿ ಹಬ್ಬ . ಈ ದಿನವೇ ಅಮಾವಾಸ್ಯೆ ಬಂದಿದೆ. ಹೇಗಪ್ಪಾ ಹಬ್ಬ ಆಚರಣೆ ಮಾಡುವುದು ಎಂಬ ಆತಂಕ ಜನರಲ್ಲಿದೆ. ಮಾರ್ಚ್ 18ರಂದೇ ಅಮಾವಾಸ್ಯೆ ಆರಂಭವಾಗಧಿಲಿದ್ದು, ಯುಗಾದಿಯ ದಿನವಾದ ಗುರುವಾರ ಬೆಳಗ್ಗೆ 6.40ಕ್ಕೆ ಅಮಾವಾಸ್ಯೆ ಮುಗಿಯುತ್ತದೆ. ನಂತರದಲ್ಲಿಚೈತ್ರಮಾಸ ಪ್ರಾರಂಭವಾಗಿ, ಪಾಡ್ಯವೂ ಆರಂಭವಾಗುಧಿತ್ತದೆ. ಪಾಡ್ಯವು ಮಾರ್ಚ್ 20ರಂದು ಬೆಳಗಿನ ಜಾವ 5.40 ರವರೆಗೆ ಇರಲಿದೆ. ಹಾಗಾಗಿ ಮಾರನೇ ದಿನ ಸೂರ್ಯ ಉದಯಕ್ಕೆ ಪಾಡ್ಯ ಸಿಗುವುದಿಲ್ಲ. ಆದ್ದಧಿರಿಂದ ಧರ್ಮಶಾಸ್ತ್ರದ ಪ್ರಕಾರ ಹಬ್ಬದ ಆಚರಣೆ ಮಾರ್ಚ್ 19ರಂದೇ ಬರುತ್ತದೆ. ಹೀಗಾಗಿ ಅಮಾವಾಸ್ಯೆಯ ಬಗ್ಗೆ ಜನ ಯಾವುದೇ ಭಯ, ಆತಂಕವಿಲ್ಲದೆ ಹಬ್ಬವನ್ನು ಸಂಭ್ರಮದಿಂದ ಆಚರಿಸಬಹುದು. (ಲೇಖಕರು: ಖ್ಯಾತ ಜ್ಯೋತಿಷಿ)