Trump Offers 2600 Exit Bonus To Illegal Immigrants
ವಲಸಿಗರ ಬೀಧಿಳ್ಕೊಧಿಡುಗೆಗೆ ಟ್ರಂಪ್ ಆಫರ್
Contributed by: shree vijendra|Vijaya Karnataka•
ಅಕ್ರಮ ವಲಸಿಗರಿಗೆ ಅಮೆರಿಕದಿಂದ ಹೊರಬರಲು ಹೊಸ ಅವಕಾಶ. ಸ್ವಯಂಪ್ರೇರಿತವಾಗಿ ದೇಶ ತೊರೆಯುವವರಿಗೆ 2,600 ಡಾಲರ್ 'ಎಕ್ಸಿಟ್ ಬೋನಸ್' ನೀಡಲಾಗುತ್ತಿದೆ. ಉಚಿತ ವಿಮಾನ ಪ್ರಯಾಣದ ಜೊತೆಗೆ ದಂಡದಿಂದ ವಿನಾಯಿತಿ ಸಿಗಲಿದೆ. ಭಾರತ, ಚೀನಾ, ಕೊಲಂಬಿಯಾ ದೇಶಗಳ ವಲಸಿಗರನ್ನು ಗುರಿಯಾಗಿಸಿ ಈ ಯೋಜನೆ ರೂಪಿಸಲಾಗಿದೆ. ಅಧ್ಯಕ್ಷ ಟ್ರಂಪ್ ಸರ್ಕಾರದ ಈ ಹೊಸ ಪ್ಲಾನ್ ಅಕ್ರಮ ವಲಸಿಗರಿಗೆ ನೆರವಾಗಲಿದೆ.
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರಿಗೆ, ಸ್ವಯಂಪ್ರೇರಿತರಾಗಿ ದೇಶ ತೊರೆಯಲು ಅಮೆರಿಕದ ಗೃಹ ಭದ್ರತಾ ಇಲಾಖೆ ಒಂದು ಹೊಸ ಆಫರ್ ನೀಡಿದೆ. ಈ ಯೋಜನೆಯ ಅಡಿಯಲ್ಲಿ, ಸ್ವಯಂಪ್ರೇರಿತರಾಗಿ ದೇಶ ಬಿಡುವವರಿಗೆ 2,600 ಡಾಲರ್ 'ಎಕ್ಸಿಟ್ ಬೋನಸ್' ನೀಡಲಾಗುತ್ತದೆ. ಈ ಯೋಜನೆಯ ಪ್ರಚಾರಕ್ಕಾಗಿ, ಭಾರತದ ತಾಜ್‌ಮಹಲ್ ಚಿತ್ರವನ್ನು ಬಳಸುವ ಮೂಲಕ ಭಾರತೀಯರನ್ನು ಉದ್ದೇಶಿಸಿ ಈ ಆಫರ್ ನೀಡಲಾಗುತ್ತಿದೆ ಎಂದು ಸೂಚಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ, ಅಕ್ರಮ ವಲಸಿಗರನ್ನು ದೇಶದಿಂದ ಹೊರ ಕಳುಹಿಸಲು ಈ ಹೊಸ ಯೋಜನೆಯನ್ನು ರೂಪಿಸಿದೆ.
ಈ ಯೋಜನೆಯ ಪ್ರಕಾರ, ಸ್ವಯಂ ಗಡೀಪಾರಾಗಲು ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಹೋಮ್ ಸೇವೆ ಬಳಸುವವರಿಗೆ ಉಚಿತ ವಿಮಾನ ಪ್ರಯಾಣ ಮತ್ತು 2,600 ಡಾಲರ್ ಎಕ್ಸಿಟ್ ಬೋನಸ್ ಸಿಗಲಿದೆ. ಈ ಬಗ್ಗೆ ಗೃಹ ಭದ್ರತಾ ಇಲಾಖೆ 'X' (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದೆ. ಈ ಪೋಸ್ಟ್‌ನಲ್ಲಿ, "ನೀವು ಹೊಸ ಆರಂಭದೊಂದಿಗೆ ತವರಿಗೆ ಮರಳಬಹುದು! ಸ್ವಯಂ ಗಡೀಪಾರಾಗಲು ನೀವು ಕಸ್ಟಮ್ಸ್ ಮತ್ತು ಬಾರ್ಡರ್ ಪೊ›ಟೆಕ್ಷನ್ (ಸಿಬಿಪಿ) ಹೋಮ್ ಸೇವೆ ಬಳಸಿದಲ್ಲಿಉಚಿತ ವಿಮಾನ ಪ್ರಯಾಣ ಮತ್ತು 2,600 ಡಾಲರ್ ಎಕ್ಸಿಟ್ ಬೋನಸ್ ಪಡೆಯ ಬಹುದು," ಎಂದು ತಿಳಿಸಲಾಗಿದೆ.ಈ ಯೋಜನೆಯಡಿ ದೇಶ ತೊರೆಯುವ ಅಕ್ರಮ ವಲಸಿಗರಿಗೆ, ಅವರ ಸ್ವದೇಶಕ್ಕೆ ಅಥವಾ ಬೇರೆ ದೇಶಕ್ಕೆ ಮರಳಲು ವಿಮಾನ ಟಿಕೆಟ್ ವೆಚ್ಚವನ್ನು ಅಮೆರಿಕ ಸರ್ಕಾರವೇ ಭರಿಸಲಿದೆ. ಅಲ್ಲದೆ, ದಂಡ ಪಾವತಿ ಸೇರಿದಂತೆ ಇತರ ಸಮಸ್ಯೆಗಳಿಂದ ವಿನಾಯಿತಿ ನೀಡಲಾಗುತ್ತದೆ. ಅಮೆರಿಕದಲ್ಲಿ ಬಲವಂತವಾಗಿ ಗಡೀಪಾರು ಮಾಡುವ ಕಾನೂನು ಜಾರಿಯಲ್ಲಿದೆ. ಆದರೆ, ಈ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಲು ಇಚ್ಛಿಸದೆ, ಗೌರವಯುತವಾಗಿ ದೇಶ ತೊರೆಯಲು ಬಯಸುವವರಿಗೆ ಈ ಹೊಸ ಆಫರ್ ಸಹಾಯ ಮಾಡಲಿದೆ. ಈ ಯೋಜನೆಯ ಪ್ರಚಾರಕ್ಕಾಗಿ, ಭಾರತದ ತಾಜ್‌ಮಹಲ್ ಜೊತೆಗೆ, ಚೀನಾ ಮತ್ತು ಕೊಲಂಬಿಯಾದ ಪ್ರಸಿದ್ಧ ತಾಣಗಳ ಚಿತ್ರಗಳನ್ನೂ ಬಳಸಲಾಗಿದೆ. ಇದು ಆಯಾ ದೇಶಗಳ ಅಕ್ರಮ ವಲಸಿಗರನ್ನು ಗುರಿಯಾಗಿಸಿಕೊಂಡಿದೆ ಎಂಬುದನ್ನು ಸೂಚಿಸುತ್ತದೆ.