24ಕ್ಕೆ ವಿಶೇಷಚೇತನರಿಗೆ
ವಿವಿಧ ಸ್ಪರ್ಧೆಗಳ ಆಯೋಜನೆ ಕಲಬುರಗಿ: ವಿಶ್ವ ವಿಶೇಷಚೇತನ ದಿನಾಚರಣೆ-2025ರ ಪ್ರಯುಕ್ತ ನ.24ರಂದು ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾಕ್ರೀಡಾಂಗಣದಲ್ಲಿವಿಶೇಷಚೇತನರಿಗಾಗಿ ಜಿಲ್ಲಾಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾವಿಶೇಷಚೇತನ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿವರ ಇಂತಿದೆ. 18 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ದೈಹಿಕ ವಿಶೇಷಚೇತನ ವಿಭಾಗದಲ್ಲಿ100 ಮೀಟರ್ ಓಟ, ಗುಂಡು ಎಸೆತ, ಬಕೇಟ್ ನಲ್ಲಿರಿಂಗ್ ಹಾಕುವ ಸ್ಪರ್ಧೆ, ವಯೋಮಿತಿ 6 ರಿಂದ 17 ವರ್ಷದ ದೈಹಿಕ ವಿಶೇಷಚೇತನರಿಗೆ 100 ಮೀ. ಓಟ, ಗುಂಡು ಎಸೆತ, ಥ್ರೋಬಾಲ್ ಎಸೆತ ಸ್ಪರ್ಧೆ, 18 ವರ್ಷ ಮೇಲ್ಪಟ್ಟ ದೃಷ್ಟಿದೋಷ ವಿಕಲಚೇತನ ವಿಭಾಗದಲ್ಲಿ50 ಮೀ. ಅಂಧರ ನಡಿಗೆ, ಗುಂಡು ಎಸೆತ, ಮ್ಯೂಜಿಕಲ್ ಚೇರ್ ಸ್ಪರ್ಧೆಗಳು, 6 ರಿಂದ 17 ವರ್ಷದ ದೃಷ್ಟಿದೋಷ ವಿಕಲಚೇತನರಿಗೆ 50 ಮೀಟರ್ ಅಂಧರ ನಡಿಗೆ, ಗುಂಡು ಎಸೆತ, ಕೆರೆದಡ ಸ್ಪರ್ಧೆ, 18 ವರ್ಷ ಮೇಲ್ಪಟ್ಟ ಶ್ರವಣದೋಷವುಳ್ಳ ವಿಕಲಚೇತನರಿಗೆ 100 ಮೀಟರ್ ಓಟ, ಗುಂಡು ಎಸೆತ, ಉದ್ದ ಜಿಗಿತ ಸ್ಪರ್ಧೆ, 6 ರಿಂದ 17 ವರ್ಷದ ಶ್ರವಣದೋಷವುಳ್ಳ ವಿಕಲಚೇತನರಿಗೆ 100 ಮೀ. ಓಟ, ಗುಂಡು ಎಸೆತ, ಉದ್ದ ಜಿಗಿತ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ, ಗಾಯನ ಸ್ಪರ್ಧೆ, ಏಕಪಾತ್ರ ಅಭಿನಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳ ಅರ್ಹ ವಿಕಲಚೇತನರು ಹೆಚ್ಚಿನ ಸಂಖ್ಯೆಯಲ್ಲಿಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ ಈ ಕಚೇರಿ ದೂರವಾಣಿ ಸಂಖ್ಯೆ 08472-235222, ಪ್ರಕಾಶ ಜಾಧವ-9972563646 ಹಾಗೂ ಸ್ವಪ್ನ ಪಾಟೀಲ ಮೊ.ಸಂಖ್ಯೆ 7411612044ಕ್ಕೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಕೋರಲಾಗಿದೆ. 24ಕ್ಕೆ ಹಾಪ್ ಕಾಮ್ಸ್ ವಾರ್ಷಿಕ ಸಭೆ ಕಲಬುರಗಿ: ಕಲಬುರಗಿ-ಯಾದಗಿರಿ ಹಾಪ್ ಕಾಮ್ಸ್ ಇದರ ವಿಶೇಷ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಗುರುಶಾಂತ ವಿ.ಪಾಟೀಲ ಅಧ್ಯಕ್ಷತೆಯಲ್ಲಿನ.24ರಂದು ಬೆಳಗ್ಗೆ 11.30ಕ್ಕೆ ಸಂಘದ ಕಚೇರಿ ಆವರಣದಲ್ಲಿನಡೆಯಲಿದ್ದು, ಸಭೆಗೆ ಸಂಘದ ಎಲ್ಲಸದಸ್ಯರು ಭಾಗವಹಿಸಬೇಕೆಂದು ವ್ಯವಸ್ಥಾಪಕ ನಿರ್ದೇಶಕ ಅನಿಲ ರಾಠೋಡ ತಿಳಿಸಿದ್ದಾರೆ. ಜಿಲ್ಲಾಮಟ್ಟದ ಸಮಿತಿಗೆ
ಸದಸ್ಯರ ನೇಮಕಕ್ಕೆ ಅರ್ಜಿ ಕಲಬುರಗಿ: ಕರ್ನಾಟಕ ಪರಿಶಿಷ್ಟ ಪಂಗಡಗಳ ಮೇದಾರ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಸರಕಾರ ಜಾರಿಗೆ ತರುವ ಯೋಜನೆಗಳ ಅನುಷ್ಠಾನಕ್ಕಾಗಿ ಜಿಲ್ಲಾಮಟ್ಟದ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಅರ್ಹರಿಂದ ಜಿಲ್ಲೆಯ ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಕ್ಕೆ ಸೇರಿದ ಮತ್ತು ಸಮುದಾಯಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿರುವ ಹಾಗೂ ಗುರುತಿಸಿಕೊಂಡಿರುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಆದರೆ, ಅರ್ಜಿಗಳು ಸ್ವೀಕೃತವಾಗದಿರುವ ಕಾರಣ 2 ಸದಸ್ಯರ ಆಯ್ಕೆಗೆ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ನಿಗದಿತ ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೆಶಕರ ಕಚೇರಿಯಿಂದ ಅಥವಾ ಅಥವಾ ಎಲ್ಲತಾಲೂಕುಗಳ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕಚೇರಿಯಿಂದ ಪಡೆದುಕೊಂಡು ಭರ್ತಿ ಮಾಡಿ ನ.21ರ ಸಂಜೆ 5 ಗಂಟೆಯೊಳಗಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಹಾಗೂ ಕಚೇರಿ ದೂ.ಸಂಖ್ಯೆ 08472-278621ಗೆ ಸಂಪರ್ಕಿಸಲು ಕೋರಲಾಗಿದೆ. ಇಂದು ವಿದ್ಯುತ್ ವ್ಯತ್ಯಯ ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ವತಿಯಂದ 110/11ಕೆವಿ ಕಲಬುರಗಿ ದಕ್ಷಿಣ ವಿತರಣಾ ಕೇಂದ್ರದಿಂದ ಹೊರಹೊಗುವ 11 ಕೆ.ವಿ. ನೃಪತುಂಗಾ ಫೀಡರ್ ಮೇಲೆ ನಿರ್ವಹಣಾ ಕಾರ್ಯಕಾಮಗಾರಿ ಕೈಗೊಂಡಿರುವ ಪ್ರಯುಕ್ತ ನವೆಂಬರ್ 19 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ ಸರಬರಾಜಿನಲ್ಲಿವ್ಯತ್ಯಯ ಉಂಟಾಗಲಿದ್ದು, ಎಲ್ಲಾಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. 110/11 ಕೆ.ವಿ ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರ: ಎಫ್ -11 ನೃಪತುಂಗಾ ಫೀಡರಿನ ನಾಗನಳ್ಳಿ, ನಂದಿಕೂರ, ನಂದಿಕೂರ ತಾಂಡಾ, ಕೆಸರಟಗಿ, ಕೆಸರಟಗಿ ತಾಂಡಾ ಉದನೂರ, ಉದನೂರ ತಾಂಡಾ ಮತ್ತು ಕೂಟನೂರ(ಡಿ). ಸಾಲಬಾಧೆ: ರೈತ ಆತ್ಮಹತ್ಯೆ ಅಫಜಲಪುರ: ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಸಿದ್ದರಾಮ ಕೋಕಟನೂರ(55)ಎಂಬ ರೈತ ಸಾಲಬಾಧೆಯಿಂದ ಮನನೊಂದು ಮಂಗಳವಾರ ನಸುಕಿನ ಜಾವ 4ಗಂಟೆಗೆ ವಿಷ
ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಧಿಡೆಧಿದಿದೆ.
ಮೃತ ರೈತ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ3 ಲಕ್ಷ, ಖಾಸಗಿ ವ್ಯಕ್ತಿಗಳಲ್ಲಿ
25 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಈ ಬಾರಿ ಸರಿಯಾಗಿ ಬೆಳೆ ಬಾರದಿರುವುದರಿಂದ ಸಾಲಗಾರರಿಗೆ ಮರಳಿ ಸಾಲ ಕೊಡಲು ಆಗುವುದಿಲ್ಲಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಐದು ಜನ ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಅಫಜಲಪುರ ಪೊಧಿಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

