ಯಳಂದೂರು: ಪಟ್ಟಣದ ಖಾಸಗಿ ರಸಗೊಬ್ಬರ ಕೀಟನಾಶಕ ಮಾರಾಟ ಮಳಿಗೆಗಳಿಗೆ ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕರಾದ ಸುಷ್ಮಾ ಅವರು ಭೇಟಿ ನೀಡಿ ಪರಿಶೀಲಿಸಿದರು. ‘‘ನಿಗದಿತ ದರದಲ್ಲಿರೈತರಿಗೆ ರಸಗೊಬ್ಬರ, ಕೀಟನಾಶಕ ನೀಡಬೇಕು, ಮಾರಾಟದ ಬಗ್ಗೆ ದರಪಟ್ಟಿ ಪ್ರಕಟಿಸಬೇಕು, ರೈತರು ಕೇಳಿದ ಗೊಬ್ಬರವನ್ನು ನೀಡಬೇಕು, ಗುಣಮಟ್ಟದ ಬಿತ್ತನೆ ಬೀಜ, ರಸ ಗೊಬ್ಬರ ಮಾರಾಟ ಮಾಡದಿದ್ದರೆ ಪರವಾನಗಿಯನ್ನು ರದ್ದುಪಡಿಸುವುದಾಗಿ,’’ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಜಾಗೃತಿ ತನಿಖಾ ತಂಡದ ಅಧಿಕಾರಿ ರಮೇಶ್ , ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಮೃತೇಶ್ , ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ ಇದ್ದರು.

