ಯಂತ್ರಶ್ರೀ ಪದ್ಧತಿಯ ಭತ್ತ ನಾಟಿ
ವಿಕ ಸುದ್ದಿಲೋಕ ಕಂಪ್ಲಿ
ತಾಲೂಕಿನ ಚಿಕ್ಕಜಾಯಗನೂರಿನಲ್ಲಿರೈತ ಸಂಪರ್ಕ ಕೇಂದ್ರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿಕೃಷಿ ವಿಸ್ತರಣಾ ಕಾರ್ಯಕ್ರಮದಡಿ ಯಂತ್ರಶ್ರೀ ಯೋಜನೆ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ತರಬೇತಿ ಶುಕ್ರವಾರ ನಡೆಯಿತು.
ಗ್ರಾಮದ ಪ್ರಗತಿಪರ ರೈತ ಜಿ.ಅಮರೇಗೌಡ 5ಎಕರೆ ಪ್ರದೇಶದಲ್ಲಿಯಂತ್ರಶ್ರೀ ಪದ್ಧತಿಯಲ್ಲಿಭತ್ತ ನಾಟಿದ್ದರಿಂದ ರೈತ ಕ್ಷೇತ್ರ ಪಾಠಶಾಲೆ ನಡೆಯಿತು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ನಾಜನಿನ್ ನದಾಫ್ ಮಾತನಾಡಿ, ‘‘ರೈತರು ಯಾಂತ್ರೀಕರಣದ ಮೂಲಕ ಭತ್ತ ನಾಟಿ ಮಾಡಿದರೆ ಹಲವು ಅನುಕೂಲಗಳಿವೆ. ಇಲಾಖೆ ಸಹಾಯ, ಸಹಕಾರದಿಂದ ಭತ್ತ ಬೆಳೆಯು ವುದನ್ನು ಸರಳೀಕರಣ ಮಾಡಿಕೊಳ್ಳಬೇಕು,’’ ಎಂದರು.
ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಸಂಜು ಕುಮಾರ್ ಮಾತನಾಡಿ, ‘‘ಯಂತ್ರಶ್ರೀ ಪದ್ಧತಿಯಡಿ ಸಸಿ ಮಡಿ ತಯಾರಿ, ಕಳೆ ನಿರ್ವಹಣೆ, ಬೆಳೆ ಕಟಾವು ಬಗ್ಗೆ ಹಾಗೂ ಭತ್ತ ಕೈ ನಾಟಿ ಮತ್ತು ಯಂತ್ರದ ಮೂಲಕ ನಾಟಿಗೆ ತಗುಲುವ ಖರ್ಚುಗಳ ಮಾಹಿತಿ ನೀಡಿದರು.
ಹಂಪಾದೇವನಹಳ್ಳಿ ಗ್ರಾಪಂಅಧ್ಯಕ್ಷೆ ಕವಿತಾ ಪಂಪನಗೌಡ, ಕೃಷಿ ಅಧಿಕಾರಿ ಜ್ಯೋತಿ, ತಾಂತ್ರಿಕ ವ್ಯವಸ್ಥಾಪಕ ರೇಣುಕಾರಾಜ್ ಇತರರಿದ್ದರು.
ಪೊ.ಶೀ.31ಕೆಎಂಪಿ1;- ಕಂಪ್ಲಿತಾಲೂಕಿನ ಚಿಕ್ಕಜಾಯಗನೂರಿನಲ್ಲಿ ಯಂತ್ರಶ್ರೀ ಯೋಜನೆ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ತರಬೇತಿ ಶುಕ್ರವಾರ ನಡೆಯಿತು.

