ಹಾಪ್ ಕಾಮ್ಸ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ವಿಕ ಸುದ್ದಿಲೋಕ ಶಿವಮೊಗ್ಗ
ಜಿಲ್ಲಾತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್ ಕಾಮ್ಸ್ ) ಅಧ್ಯಕ್ಷರಾಗಿ ಆರ್ . ವಿಜಯಕುಮಾರ್ ಮತ್ತು ಉಪಾಧ್ಯಕ್ಷರಾಗಿ ಚಂದ್ರೇಗೌಡ ಆಯ್ಕೆಯಾಗಿದ್ದಾರೆ.
15 ಜನ ಚುನಾಯಿತ ನಿರ್ದೇಶಕರು, ಸರಕಾರದ ಪ್ರತಿನಿಧಿ ಮತ್ತು ಜಂಟಿ ನಿರ್ದೇಶಕರು ಸೇರಿ ಒಟ್ಟು 17 ಮತಗಳಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರಿ ಇಲಾಖೆ ಅಧಿಕಾರಿ ಸತೀಶ್ ಕಾರ್ಯನಿರ್ವಹಿಸಿದ್ದರು. ಸಂಸ್ಥೆಯ ಎಲ್ಲಚುನಾಯಿತ ನಿರ್ದೇಶಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಫೋಟೊ: 31ಎಸ್ ಎಂಜಿ27
ಹಾಪ್ ಕಾಮ್ಸ್ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಜಯಕುಮಾರ್ , ಚಂದ್ರೇಗೌಡ ಅವರನ್ನು ಸನ್ಮಾನಿಸಲಾಯಿತು.
===

