ಸಾಕೇತ್ ....
ಧಿಧಿಮಂಗಳೂರು: ನಗರದ ಎ.ಜೆ. ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಕೇಂದ್ರದಲ್ಲಿ 11ನೇ ವರ್ಲ್ಡ್ ಅಕಾಡೆಮಿಕ್ ಕಾಂಗ್ರೆಸ್ ಆಫ್ ಎಮರ್ಜೆನ್ಸಿ ಮೆಡಿಸಿನ್ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ ಶುಕ್ರವಾರ ನಡೆಯಿತು. ಲಕ್ಷ್ಮಿ ಸ್ಮಾರಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಕಾರ ್ಯಕ್ರಮ ಉದ್ಘಾಟಿಸಿದರು.
ಡಬ್ಲ್ಯೂಎಸಿಎಂ ಮುಖ್ಯ ಶೈಕ್ಷಣಿಕ ಅಧಿಕಾರಿ ಡಾ. ಸಾಗರ್ ಗಾಲ್ವಾಂಕರ್ , ಡಬ್ಲ್ಯೂಎಸಿಎಂ ಪ್ರಧಾನ ಕಾರ್ಯದರ್ಶಿ ಡಾ. ವಿಮಲ್ ಕೃಷ್ಣನ್ ಪಿಳ್ಳೈ,ಡಬ್ಲ್ಯೂಎಚ್ ಒ -ಸಿಸಿಇಟಿ ದಕ್ಷಿಣ ಏಷ್ಯಾ ನಿರ್ದೇಶಕ ಡಾ. ಸಂಜೀವ್ ಕುಮಾರ್ ಭೋಯ್ , ಎಮರ್ಜೆನ್ಸಿ ಮೆಡಿಸಿನ್ ಪೀಡಿಯಾಟ್ರಿಕ್ಸ್ ಅಧ್ಯಕ್ಷ ಡಾ. ಪ್ರೇರಣಾ ಬಾತ್ರಾ, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ಐಎಪಿ ಮಾಜಿ ಅಧ್ಯಕ್ಷ ಡಾ. ಸಂತೋಷ್ ಸೋನ್ಸ್ , ಪ್ರಧಾನ ಕಾರ್ಯದರ್ಶಿ ಡಾ. ವಿಮಲ್ ಕೃಷ್ಣನ್ ಪಿಳ್ಳೈ, ಸಮ್ಮೇಳನ ಸಂಘಟನಾ ಕಾರ್ಯದರ್ಶಿಗಳಾದ ಡಾ. ನಿಖಿಲ್ ಶೆಟ್ಟಿ, ಡಾ. ರಯಾನ್ ಫರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಇಂಡೋ- ಯುಎಸ್ ಕೊಲಾಬರೇಟಿವ್ ಫಾರ್ ಅಕಾಡೆಮಿಕ್ ಎಮರ್ಜೆನ್ಸಿ ಆ್ಯಂಡ್ ಟ್ರಾಮಾ ಇನ್ ಇಂಡಿಯಾ ಆಯೋಜಿಸಿದ್ದು, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ , ಡಬ್ಲ್ಯೂಎಚ್ ಒ ಕೊಲಾಬರೇಟಿಂಗ್ ಸೆಂಟರ್ ಫಾರ್ ಎಮರ್ಜೆನ್ಸಿ ಆ್ಯಂಡ್ ಟ್ರಾಮಾ ಇನ್ ಆಗ್ನೇಯ ಏಷ್ಯಾ ಸಹಭಾಗಿತ್ವದಲ್ಲಿಹಲವಾರು ಜಾಗತಿಕ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಏರ್ಪಡಿಸಲಾಗಿದೆ. ಪ್ರಪಂಚದಾದ್ಯಂತದ ಪ್ರಮುಖ ತುರ್ತು ವೈದ್ಯಕೀಯ ತಜ್ಞರು ಸೇರಿದಂತೆ 800 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಅಧ್ಯಾಪಕ ಸದಸ್ಯರು ಸಮ್ಮೇಳನದಲ್ಲಿಭಾಗವಹಿಸಿದ್ದು, ನ.2ರ ವರೆಗೆ ಸಮ್ಮೇಳನ ಮುಂದುವರಿಯಲಿದೆ.
ಇದರ ಜತೆಗೆ ಅಪಸ್ಮಾರ ಮತ್ತು ಕೆಮ್ಮು ಸಿರಪ್ ಗಳ ಸುರಕ್ಷಿತ ಬಳಕೆ ಸೇರಿದಂತೆ ಮಕ್ಕಳ ಆರೋಗ್ಯ ಕಾಳಜಿಗಳ ಮೇಲೆ ಕೇಂದ್ರೀಕರಿಸುವ ಅಧಿವೇಶನವಿದೆ. ಎ. ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಫಾದರ್ ಮುಲ್ಲರ್ಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಕೆ.ಎಸ್ . ಹೆಗ್ಡೆ ಅಕಾಡೆಮಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ, ಯೇನೆಪೋಯ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಕಸ್ತೂರ್ಬಾ ವೈದ್ಯಕೀಯ ಕಾಲೇಜುಗಳು, ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಕಣಚೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರಗಳಲ್ಲಿಕಾರ್ಯಾಗಾರಗಳು ನಡೆಯಲಿದೆ.

