ಜೇನು ಕೃಷಿಗೆ 15 ಲಕ್ಷ ರೂ. ಸಬ್ಸಿಡಿ

Contributed byPunith AR|Vijaya Karnataka
Subscribe

ಜೇನು ಕೃಷಿ ಮಾಡಲು ಆಸಕ್ತಿ ಇರುವವರಿಗೆ ಒಳ್ಳೆಯ ಸುದ್ದಿ. ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮ ಯೋಜನೆಯಡಿ 15 ಲಕ್ಷ ರೂಪಾಯಿ ವರೆಗೆ ಸಹಾಯಧನ ಸಿಗಲಿದೆ. ಶೇ. 50ರಷ್ಟು ಸಹಾಯಧನ ಲಭ್ಯವಿದ್ದು, 30 ಲಕ್ಷ ರೂಪಾಯಿ ಯೋಜನೆಯಲ್ಲಿ 15 ಲಕ್ಷ ರೂಪಾಯಿ ಸಬ್ಸಿಡಿ ದೊರೆಯಲಿದೆ. ಯಂತ್ರೋಪಕರಣ ಖರೀದಿ ಮತ್ತು ಉತ್ಪನ್ನ ಮಾರಾಟಕ್ಕೂ ಸಹಾಯ ಮಾಡಲಾಗುವುದು. ಇದು ಜೇನು ಕೃಷಿಕರಿಗೆ ಉತ್ತೇಜನ ನೀಡಲಿದೆ.

bee farmings bright future opportunities up to 15 lakh subsidy
ಬೆಂಗಳೂರು: ಜೇನು ಕೃಷಿ ಮಾಡಲು ಆಸಕ್ತಿ ಇರುವವರಿಗೆ ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮ ಯೋಜನೆಯಡಿ 15 ಲಕ್ಷ ರೂ. ವರೆಗೆ ಸಹಾಯಧನ ಸಿಗಲಿದೆ ಎಂದು ಕೆಪೆಕ್‌ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌.ಶಿವಪ್ರಕಾಶ್‌ ತಿಳಿಸಿದ್ದಾರೆ. ವಿಶ್ವ ಆಹಾರ ದಿನದ ಅಂಗವಾಗಿ ನಡೆದ 'ಜೇನು ಕೃಷಿ: ಉತ್ತಮ ಭವಿಷ್ಯಕ್ಕಾಗಿ ಆರೋಗ್ಯಕರ ಆಹಾರ' ಕುರಿತ ವಿಚಾರಗೋಷ್ಠಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಈ ಯೋಜನೆಯಡಿ ರೈತರಿಗೆ ಶೇ. 50ರಷ್ಟು ಸಹಾಯಧನ ಲಭಿಸಲಿದ್ದು, 30 ಲಕ್ಷ ರೂ. ಯೋಜನೆಯಲ್ಲಿ 15 ಲಕ್ಷ ರೂ. ಸಬ್ಸಿಡಿ ದೊರೆಯಲಿದೆ. ಇದರಲ್ಲಿ ಕೇಂದ್ರ ಸರ್ಕಾರ 6 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರ 9 ಲಕ್ಷ ರೂ. ಸಹಾಯ ನೀಡಲಿದೆ. ಜೇನು ಗೂಡಿನಿಂದ ತುಪ್ಪ ತೆಗೆಯಲು, ಅದನ್ನು ಸೋಸಲು, ಪ್ಯಾಕ್ ಮಾಡಲು ಬೇಕಾದ ಯಂತ್ರೋಪಕರಣ ಖರೀದಿಗೆ ಹಾಗೂ ಉತ್ಪನ್ನಗಳ ಮಾರ್ಕೆಟಿಂಗ್‌ಗೂ ಸಹಾಯಧನ ಸಿಗಲಿದೆ.

ಜೇನು ಕೃಷಿ ಸುಲಭದ ಕೆಲಸವಲ್ಲ, ಅದಕ್ಕೆ ಬಹಳ ತಾಳ್ಮೆ ಬೇಕು ಎಂದು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ. ಎ.ಬಿ.ಪಾಟೀಲ್‌ ಹೇಳಿದರು. ಪ್ರಸ್ತುತ ರಾಜ್ಯದಲ್ಲಿ 50 ಸಾವಿರ ಮಂದಿ ಜೇನು ಕೃಷಿ ಮಾಡುತ್ತಿದ್ದು, ವರ್ಷಕ್ಕೆ 1 ಸಾವಿರ ಟನ್‌ ಜೇನುತುಪ್ಪ ಉತ್ಪಾದನೆಯಾಗುತ್ತಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಸಾವಯವ ಜೇನುತುಪ್ಪ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಕೃಷಿ ತಂತ್ರಜ್ಞ ಎಂ.ಎಸ್‌.ಶಾಂತವೀರಯ್ಯ ಅವರಿಗೆ 'ಜೀವಮಾನ ಸಾಧಕ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೇನು ಕೃಷಿಕರಾದ ಮಧುಕೇಶ್ವಧಿರ ಹೆಗಡೆ, ಅಪೂರ್ವ, ವಿ.ಆರ್‌.ಚಂದ್ರಶೇಖರ್‌, ಎಂ.ಗೀತಾ ಹಾಗೂ ಎಂ.ಪ್ರಜ್ವಲ್‌ ಅವರಿಗೆ ಅತ್ಯುತ್ತಮ ಸಾಧನಾ ಪ್ರಶಸ್ತಿ ನೀಡಲಾಯಿತು. ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಎಸ್‌.ನಂದಾ, ಐಎಟಿ ಕಾರ್ಯದರ್ಶಿ ಜಿ.ಎಚ್‌. ಯೋಗೇಶ್‌ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ