ಪೊಲೀಸ್ ಇಲಾಖೆಯಿಂದ ಏಕತೆಗಾಗಿ ಓಟ
ವಿಕ ಸುದ್ದಿಲೋಕ ಶಿವಮೊಗ್ಗ
ದೇಶದ ಮಾಜಿ ಗೃಹಮಂತ್ರಿ ಸರ್ದಾರ್ ವಲ್ಲಭಬಾಯ್ ಪಟೇಲರ 150ನೇ ಜನ್ಮದಿನ ಅಂಗವಾಗಿ ಜಿಲ್ಲಾಪೊಲೀಸ್ ಇಲಾಖೆಯಿಂದ ಶುಕ್ರವಾರ ರನ್ ಫಾರ್ ಯೂನಿಟಿ ಮ್ಯಾರಾಥಾನ್ ನಡೆಸಲಾಯಿತು.
ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ ಆರಂಭವಾದ ಮ್ಯಾರಥಾನ್ ಗೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಚಾಲನೆ ನೀಡುವ ಜತೆ ಭಾಗವಹಿಸಿದ್ದರು. ಅಶೋಕ ವೃತ್ತ, ಟಿ.ಸೀನಪ್ಪಶೆಟ್ಟಿ ವೃತ್ತ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದ ಮೂಲಕ ಸಾಗಿದ ಮ್ಯಾರಥಾನ್ ಡಿಎಆರ್ ಮೈದಾನದಲ್ಲಿಮುಕ್ತಾಯವಾಯಿತು.
2025ನೇ ಸಾಲಿನಲ್ಲಿಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಬಂದೋಬಸ್ ್ತನಲ್ಲಿಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರಗಳನ್ನು ಎಸ್ ಪಿ ಮಿಥುನ್ ಕುಮಾರ್ ವಿತರಿಸಿದರು. ಕಾರ್ಯಕ್ರಮದಲ್ಲಿರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ವಿವಿಧ ಠಾಣೆಗಳ ಸಿಬ್ಬಂದಿ ಇದ್ದರು.
=====
31ಎಸ್ ಎಂಜಿ29
ಶಿವಮೊಗ್ಗ ಪೊಲೀಸ್ ಇಲಾಖೆ ಆಯೋಜಿಸಿದ್ದ ರನ್ ಫಾರ್ ಯೂನಿಟಿ ಮ್ಯಾರಥಾನ್ ನಲ್ಲಿಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಭಾಗವಹಿಸಿದ್ದರು.

