ನಗರಸಭೆ ಅಧಿಕಾರಿಗಳು ದಾಳಿ , ಪ್ಲಾಸ್ಟಿಕ್ ವಶ
ವಿಕ ಸುದ್ದಿಲೋಕ ಹೊಸಕೋಟೆ
ಹೊಸಕೋಟೆ ನಗರದ ಮಾರ್ಕೆಟ್ ರಸ್ತೆಯ ಪೂರ್ಣಿಮಾ ಮಾರ್ಕೆಟಿಂಗ್ ಅಂಗಡಿಯ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ಮಾಡಿ ನಿಷೇಧಿತ 100 ಕೆ.ಜಿ ಪ್ಲಾಸ್ಟಿಕನ್ನು ವಶಪಸಿಕೊಂಡಿದ್ದಾರೆ.
ದೊಡ್ಡ ಪ್ರಮಾಣದಲ್ಲಿಪ್ಲಾಸ್ಟಿಕ್ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪೌರಾಯುಕ್ತ ನೀಲ ಲೋಚನ ಪ್ರಭು ಹೊಸಕೋಟೆ ಪೊಲೀಸರಿಗೆ ದೂರು ನೀಡಿದರು.
ಈ ವೇಳೆ ಮಾತನಾಡಿದ ಅವರು, ಅ.29ರಂದು ರಾತ್ರಿ ಸುಮಾರು 8.55 ಸಮಯದಲ್ಲಿಖಚಿತ ಮಾಹಿತಿ ಮೇರೆಗೆ ಪೌರಾಯುಕ್ತ ನೀಲಲೋಚನ ಪ್ರಭು ಹಾಗೂ ನಗರಸಭೆ ಅಧಿಕಾರಿಗಳು ಅಂಗಡಿಯ ಮೇಲೆ ದಾಳಿ ಮಾಡಿದರು. ಅಂಗಡಿ ಗೋದಾಮಿನಲ್ಲಿಸಂಗ್ರಹಿಸಿಟ್ಟದ್ದ ಪ್ಲಾಸ್ಟಿಕ್ ರಾಶಿ ಕಂಡು ಹೌಹಾರಿದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಲು ಅನುಮತಿ ಕೊಟ್ಟವರಾರ ಯರು?, ಈಗಾಗಲೇ ಹೊಸಕೋಟೆ ನಗರದಲ್ಲಿಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ನಿಷೇಧಿಸಲಾಗಿದೆ. ಆದರೂ, ಕದ್ದು ಮುಚ್ಚಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿಮಾರಾಟ ಮಾಡುತ್ತಿರುವ ಇವರ ಮೇಲೆ ಕಾನೂನು ಕ್ರಮ ಜರಗಿಸಬೇಕಿದೆ ಎಂದರು.
ಇಂತಹ ವ್ಯಕ್ತಿಗಳಿಂದಲೇ ನಗರದಲ್ಲಿಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಲು ಕಾರಣವಾಗಿದೆ. ನಗರದ ಯಾವುದೇ ರಸ್ತೆಗಳನ್ನು ನೋಡಿದರೂ ಪ್ಲಾಸ್ಟಿಕ್ ತ್ಯಾಜ್ಯ ಎದ್ದು ಕಾಣುತ್ತದೆ. ನಗರಸಭೆ ವತಿಯಿಂದ ಪ್ರತಿ ದಿನ ಸ್ವಚ್ಛತಾ ವಾಹನಗಳು ಮನೆಯ ಮುಂದೆ ಹೋಗುತ್ತವೆ. ಆದರೂ ಕೆಲವರು ರಸ್ತೆ ಬದಿ ಕಸ ಸುರಿದು ಹೋಗುತ್ತಿದ್ದಾರೆ. ಎಲ್ಲಾನಾಗರಿಕರು ತಮ್ಮ ಮನೆಗಳಲ್ಲಿಶೇಖರಣೆ ಆಗುವ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಸ್ವಚ್ಛತಾ ವಾಹನಗಳಿಗೆ ನೀಡಬೇಕು. ಇಲ್ಲವಾದಲ್ಲಿಮುಲಾಜಿಲ್ಲದೆ ದಂಡ ವಿಧಿಸಲಾಗುವುದು. ನಗರದಲ್ಲಿಪ್ಲಾಸ್ಟಿಕ್ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ ಎಂದರು.
ಚಿತ್ರ-31 ಸೂಲಬೆಲೆ 2
ಹೊಸಕೋಟೆ ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ನೇತೃತ್ವದಲ್ಲಿದಾಳಿ ಮಾಡಿ ವಶಪಡಿಸಿಕೊಂಡ ಪ್ಲಾಸ್ಟಿಕ್ .

