ವಿಕ ಸುದ್ದಿಲೋಕ ಧಾರವಾಡ
ನಗರದ ಮಕ್ಕಳ ಅಕಾಡೆಮಿಯ ರಜತ ಮಹೋತ್ಸವದ ನಿಮಿತ್ತ ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್, ಧಾರವಾಡ ಹಾಗೂ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಹಯೋಗದಲ್ಲಿಧಾರವಾಡ ಐಡಲ್ 2025 ಗ್ರಾತ್ರ್ಯಂಡ್ ಫಿನಾಲೆ ಕಾರ್ಯಕ್ರಮವನ್ನು ನ. 2ರಂದು ಸಂಜೆ 5ಕ್ಕೆ ನಗರದ ಸೃಜನಾ ರಂಗಮಂದಿರದಲ್ಲಿಏರ್ಪಡಿಸಲಾಗಿದೆ.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಖ್ಯಾತ ಹಿಂದೂಸ್ಥಾನಿ ಗಾಯಕಿ ವಿದುಷಿ ಸಂಗೀತಾ ಕಟ್ಟಿ, ವಿದುಷಿ ಸುಜಾತಾ ಗುರವ, ಡಾ. ಶ್ರೀಧರ ಕುಲಕರ್ಣಿ ಮತ್ತು ಖ್ಯಾತ ಸಿತಾರವಾದಕ ಉಸ್ತಾದ್ ಶಫಿಕಖಾನ್ ನಿರ್ಣಾಯಕರಾಗಿ ಪಾಲ್ಗೊಳ್ಳುವರು.
ಮಕ್ಕಳ ಅಕಾಡೆಮಿ ಅಧ್ಯಕ್ಷ ಡಾ. ರಾಜನ್ ದೇಶಪಾಂಡೆ ಅಧ್ಯಕ್ಷತೆ ವಹಿಸುವರು. ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ನಾಯಕ, ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ, ಮಕ್ಕಳ ಅಕಾಡೆಮಿ ಕಾರ್ಯದರ್ಶಿ ಡಾ. ಎಂ.ವಾಯ್ .ಸಾವಂತ, ಸಂಯೋಜಕ ಡಾ.ವಿಜಯ ತ್ರಾಸದ ಉಪಸ್ಥಿತರಿರುವರು. ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ 18ಯುವ ಪ್ರತಿಭಾನ್ವಿತ ಕಲಾವಿದರು ಧಾರವಾಡ ಐಡಲ್ ಗ್ರಾತ್ರ್ಯಂಡ್ ಫಿನಾಲೆಯಲ್ಲಿಪಾಲ್ಗೊಳ್ಳುವರು. ವಿಜೇತರಿಗೆ ಧಾರವಾಡ ಐಡಲ್ ಗುಜ್ಜಾಡಿ ಸ್ವರ್ಣ ಟ್ರೋಫಿ ಪ್ರದಾನ ಮಾಡಲಾಗುವುದು. ಕಲಾಸಕ್ತರು, ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳಲು ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

