ಕಾಂಗ್ರೆಸ್ ಒಬಿಸಿ ಘಟಕಕ್ಕೆ ಪದಾಧಿಕಾರಿಗಳ ನೇಮಕ
ವಿಕ ಸುದ್ದಿಲೋಕ ಶಿವಮೊಗ್ಗ
ಜಿಲ್ಲಾಕಾಂಗ್ರೆಸ್ ನ ಹಿಂದುಳಿದ ವರ್ಗಗಳ ವಿಭಾಗಕ್ಕೆ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ವಿಭಾಗದ ಜಿಲ್ಲಾಧ್ಯಕ್ಷ ಎಂ. ರಮೇಶ್ ಶಂಕರಘಟ್ಟ ತಿಳಿಸಿದರು.
ಶುಕ್ರವಾರ ಪ್ರೆಸ್ಟ್ ಟ್ರಸ್ಟ್ ಪತ್ರಿಕಾಭವನದಲ್ಲಿಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಈ ಹಿಂದೆ ಶಿವಮೊಗ್ಗ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಮಾಜಿ ಸಿಎಂ ಎಸ್ . ಬಂಗಾರಪ್ಪ ಬಿಜೆಪಿ ಸೇರಿದಾಗ ಬಹಳಷ್ಟು ಜನ ಹಿಂದುಳಿದ ವರ್ಗದವರು ಬಿಜೆಪಿಯತ್ತ ವಾಲಿದ್ದರು. ಬಂಗಾರಪ್ಪ ಮತ್ತೆ ಕಾಂಗ್ರೆಸ್ ಗೆ ಮರಳಿದಾಗ ಅರ್ಧದಷ್ಟು ಜನ ಮಾತ್ರ ಕಾಂಗ್ರೆಸ್ ಗೆ ಬಂದರು. ಹರಿದು ಹಂಚಿಹೋಗಿರುವ ಹಿಂದುಳಿದ ವರ್ಗಗಳ ಜನರನ್ನು ಮರಳಿ ಕಾಂಗ್ರೆಸ್ ಗೆ ತರುವ ನಿಟ್ಟಿನಲ್ಲಿಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ, ಸಚಿವ ಮಧು ಬಂಗಾರಪ್ಪ, ಜಿಲ್ಲೆಯಲ್ಲಿಹಿಂದುಳಿದ ವರ್ಗಗಳ ವಿಭಾಗ ಬಲಪಡಿಸಲು ಸೂಚನೆ ನೀಡಿದ್ದಾರೆ. ಅದರಂತೆ ಸಮಿತಿ ರಚಿಸಲಾಗಿದೆ ಎಂದರು.
ಓಬಿಸಿ ಘಟಕದ ಪದಾಧಿಕಾರಿಗಳ ಆಯ್ಕೆಯಲ್ಲಿಯಾವುದೆ ಎರಡು ವರ್ಗಗಳಿಗೆ ಸೀಮಿತಗೊಳ್ಳದೆ, 18 ಹಿಂದುಳಿದ ವರ್ಗಗಳಿಗೆ ಸೇರಿದ ಒಟ್ಟು 47 ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ8 ಜನ ಉಪಾಧ್ಯಕ್ಷರು, 15 ಪ್ರಧಾನ ಕಾರ್ಯದರ್ಶಿಗಳು, 11 ಸಂಘಟನಾ ಕಾರ್ಯದರ್ಶಿಗಳು ಮತ್ತು ವಿವಿಧ ಬ್ಲಾಕ್ ಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ತಾಲೂಕು ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದರು.
ಜಿ.ಡಿ.ಮಂಜುನಾಥ್ , ರಾಘವೇಂದ್ರ, ಶಶಿಕುಮಾರ್ , ಸಿದ್ರಾಮ ಮತ್ತಿತರರಿದ್ದರು.
=====
31ಎಸ್ ಎಂಜಿ5

