ಬಾಟಮ….. ಜವಾಬ್ದಾರಿಗೆ ತಕ್ಕಂತೆ ಇಲ್ಲಸೌಲಭ್ಯ

Contributed by: nalatwadmaibu@gmail.com|Vijaya Karnataka•
Vijay Karnataka
ಅಕ್ಷರ ದಾಸೋಹ ಅಧಿಕಾರಿಗಳಿಗಿಲ್ಲವಾಹನ ಭಾಗ್ಯ | ಮೇಲ್ವಿಚಾರಣೆಗಾಗಿ ಶಾಲೆಗಳಿಗೆ ತೆರಳಲು ಪರದಾಟ

ಜವಾಬ್ದಾರಿಗೆ ತಕ್ಕಂತೆ ಇಲ್ಲಸೌಲಭ್ಯ
ಮೈಬೂಬ ಹಳ್ಳೂರ ನಾಲತವಾಡ

್ಞa್ಝaಠಿಡಿadಞaಜಿಚ್ಠಿಃಜಞaಜ್ಝಿ.್ಚಟಞ

ಶಾಲಾ ಮಕ್ಕಳಿಗೆ ಗುಣಮಟ್ಟ ಹಾಗೂ ಪೌಷ್ಟಿಕ ಬಿಸಿಯೂಟ ನಿರ್ವಹಣೆಯ ಗುರುತರ ಜವಾಬ್ದಾರಿ ಹೊತ್ತಿರುವ ಅಕ್ಷರ ದಾಸೋಹ ಅಧಿಕಾರಿಗಳಿಗೆ ಸಕಾಲಕ್ಕೆ ಶಾಲೆಗಳಿಗೆ ತೆರಳಿ ಮೇಲ್ವಿಚಾರಣೆ ನಡೆಸಲು ವಾಹನ ಸೌಲಭ್ಯ ಇಲ್ಲದೇ ಪರದಾಡುವಂತಾಗಿದೆ.

ಮುದ್ದೇಬಿಹಾಳ, ತಾಳಿಕೋಟೆ ತಾಲೂಕು ಸೇರಿ ರಾಜ್ಯದಲ್ಲಿ176 ಕ್ಕೂ ಹೆಚ್ಚು ಅಕ್ಷರ ದಾಸೋಹ ಅಧಿಕಾರಿಗಳಿದ್ದಾರೆ. ಅವರ ವ್ಯಾಪ್ತಿಯ ಶಾಲೆಗಳಲ್ಲಿಆಹಾರ ಧಾನ್ಯಗಳ ಗುಣಮಟ್ಟ, ಅಡುಗೆ ವ್ಯವಸ್ಥೆ, ಸ್ವಚ್ಛತೆ ಹಾಗೂ ಇತರೆ ಸಮಸ್ಯೆಗಳ ಮೇಲ್ವಿಚಾರಣೆ ನಡೆಸಬೇಕಿದೆ. ಆದರೆ, ಯಾವುದೋ ಸಮಸ್ಯೆಗಳ ತುರ್ತು ಕರೆ ಬಂದಾಗ ಸ್ಥಳಕ್ಕೆ ತೆರಳಲು ಖಾಸಗಿ ವಾಹನ ಅಥವಾ ಬೈಕ್ ಗಳನ್ನೇ ಅವಲಂಬಿಸುವಂತಾಗಿದೆ.

ಪ್ರತಿ ತಾಲೂಕಿನಲ್ಲಿ100 ರಿಂದ 200 ಸರಕಾರಿ ಸೇರಿ ಅನುದಾನಿತ ಶಾಲೆಗಳಿವೆ. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ನಿರಂತರ ಸಂಚರಿಸಬೇಕಿದೆ. ಅದರಲ್ಲೂಸಾರಿಗೆ ಸೌಲಭ್ಯವಿಲ್ಲದ ಗ್ರಾಮೀಣ ಶಾಲೆಗಳಿಗೆ ತೆರಳಲು ಪ್ರಯಾಸ ಪಡುವಂತಾಗಿದೆ. ತುರ್ತು ಭೇಟಿ ನೀಡಲು ಅಸಾಧ್ಯವಾಗುತ್ತಿದೆ. ಹೀಗಾಗಿ ಅಧಿಕಾರಿಗಳಿಗೆ ಸಾರಿಗೆ ಅವ್ಯವಸ್ಥೆ ದೊಡ್ಡ ಸವಾಲಾಗಿದೆ.

ಆರೋಗ್ಯ ಕಾಳಜಿ ಹೊಣೆ: ಬಿಸಿಯೂಟದಲ್ಲಿಗುಣಮಟ್ಟ ಕಾಪಾಡುವುದು, ಪೌಷ್ಟಿಕ ಆಹಾರ ಒದಗಿಸುವುದು ಮತ್ತು ಯೋಜನೆಯ ಮೇಲ್ವಿಚಾರಣೆ ನಡೆಸುವುದು ಅಕ್ಷರ ದಾಸೋಹ ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ. ಇಂತಹ ಮಹತ್ವದ ಜವಾಬ್ದಾರಿ ಹೊಂದಿರುವ ಅಧಿಕಾರಿಗಳಿಗೆ ವಾಹನ ಭಾಗ್ಯ ಸೇರಿ ಅಗತ್ಯ ಸೌಲಭ್ಯವನ್ನು ಸರಕಾರ ಕಲ್ಪಿಸಬೇಕು ಎನ್ನುವುದು ಎಸ್ ಡಿಎಂಸಿ ಹಾಗೂ ಪ್ರಜ್ಞಾವಂತರ ಆಗ್ರಹವಾಗಿದೆ.

--

ಅಲ್ಪ ಮಾಸಿಕ ಭತ್ಯೆ

ತಾಲೂಕಿನಲ್ಲಿ100 ರಿಂದ 150 ಹಳ್ಳಿಗಳ ಶಾಲೆಗಳಿಗೆ ಅಧಿಕಾರಿಗಳು ಭೇಟಿ ನೀಡಬೇಕಿದೆ. ಇದಕ್ಕಾಗಿ ಸರಕಾರ ಅವರ ವಾಹನ ಸೇರಿ ಇತರೆ ಖರ್ಚು ಮಾಡಲು ಕೇವಲ 5 ಸಾವಿರ ರೂ. ಮಾಸಿಕ ಭತ್ಯೆ ನೀಡುತ್ತಿದ್ದು, ಅಧಿಕಾರಿಗಳಿಗೆ ಈ ಭತ್ಯೆ ಮೂಗಿಗೆ ತುಪ್ಪ ಸವರಿದಂತಾಗುತ್ತಿದೆ.

ಅಕ್ಷರ ದಾಸೋಹ ಅಧಿಕಾರಿಗಳದ್ದು ಸಹ ಬಾರಿ ಜವಾಬ್ದಾರಿ ಹೊಂದಿರುವ ಸ್ಥಾನವಾಗಿದೆ. ಅವರ ನೈಜ ಸಮಸ್ಯೆ ಹಾಗೂ ಕಾರ್ಯದ ಒತ್ತಡವನ್ನು ಗಂಭೀರವಾಗಿ ಪರಿಗಣಿಸಿ, ಸರಕಾರ ಅಗತ್ಯ ವಾಹನ ಸೌಲಭ್ಯ ಒದಗಿಸಿ, ಬಿಸಿಯೂಟ ಯೋಜನೆಯ ಮೇಲ್ವಿಚಾರಣೆಗೆ ಮತ್ತಷ್ಟು ಬಲ ನೀಡಬೇಕಿದೆ.

---

ಮಕ್ಕಳ ಹಿತ ಚಿಂತನೆ ಹಾಗೂ ಬಿಸಿಯೂಟದಲ್ಲಿಪರಿಣಾಕಾರಿ ನಿರ್ವಹಣೆಯಲ್ಲಿಅಕ್ಷರ ದಾಸೋಹ ಅಧಿಕಾರಿಗಳ ಜವಾಬ್ದಾರಿ ದೊಡ್ಡದಿದೆ. ತಾಲೂಕಿನಲ್ಲಿನೂರಾರು ಶಾಲೆಗಳಿಗೆ ಭೇಟಿ ನೀಡುವ ಅಧಿಕಾರಿಗಳಿಗೆ ಸರಕಾರ ವಾಹನ ಭಾಗ್ಯ ಕಲ್ಪಿಸಬೇಕು. ಈ ವಿಷಯ ಸದನದಲ್ಲೂಚರ್ಚೆಯಾಗಬೇಕು.

-ವೀರೇಶ ಚಲವಾದಿ

ಶಿಕ್ಷಣ ಪ್ರೇಮಿ, ಚವನಬಾವಿ

--

ಅಕ್ಷರ ದಾಸೋಹ ಅಧಿಕಾರಿಗಳು ತಾಲೂಕು ಪಂಚಾಯಿತಿ ಅಧೀನದಲ್ಲಿಕೆಲಸ ನಿರ್ವಹಿಸುತ್ತಾರೆ. ಅವರಿಗೆ ಪ್ರತ್ಯೇಕ ವಾಹನ ನೀಡಿಲ್ಲ, ಅದು ಸರಕಾರಕ್ಕೆ ಬಿಟ್ಟ ವಿಚಾರ.

-ಎಂ.ಎಸ್ . ಬಡದಾನಿ

ಬಿಇಒ, ಮುದ್ದೇಬಿಹಾಳ

ಫೋಟೊ

ಬಿಸಿಯೂಟ-ಎಐ