ನ.26ರಂದು ಕನಕಪುರದಲ್ಲಿಸಂವಿಧಾನ ಸಮರ್ಪಣೆ ದಿನಾಚರಣೆ, ಕನ್ನಡ ರಾಜ್ಯೋತ್ಸವ
ಡಾ.ಬಿ.ಟಿ. ಲಲಿತಾ ನಾಯಕ್ ರಿಂದ ಸಂವಿಧಾನದ ಆಶಯಗಳ ಕುರಿತು ಭಾಷಣವಿಕ ಸುದ್ದಿಲೋಕ ಕನಕಪುರ
ಬಹುಜನ ಜಾಗೃತಿ ವೇದಿಕೆ ವತಿಯಿಂದ ನ.26ರಂದು ಸಂವಿಧಾನ ಸಮರ್ಪಣೆ ದಿನಾಚರಣೆ ಹಾಗೂ 71ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಾನಾ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಗಣ್ಯರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ನೀಲಿರಮೇಶ್ ತಿಳಿಸಿದರು.
ನಗರದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿ, ಅಂದು ಬೆಳಗ್ಗೆ 11 ಗಂಟೆಗೆ ನಗರಸಭೆ ಮುಂಭಾಗದ ಭವ್ಯ ವೇದಿಕೆಯಲ್ಲಿಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಬಹುಜನ ಜಾಗೃತಿ ವೇದಿಕೆ ಕಳೆದ ಹತ್ತು ವರ್ಷಗಳಿಂದ ಸಂವಿಧಾನ, ಬುದ್ಧ, ಬಸವ, ಅಂಬೇಡ್ಕರ್ , ಫುಲೆ, ಶಾಹು ಮಹಾರಾಜ್ , ನಾಲ್ವಡಿ ಕೃಷ್ಣರಾಜ ಒಡೆಯರ್ , ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ಹಾಗೂ ಕುವೆಂಪು ಅವರ ವಿಚಾರಧಾರೆಗಳ ಕುರಿತು ಜನರಲ್ಲಿಜಾಗೃತಿ ಮೂಡಿಸುತ್ತಿದೆ. ನಾಡು-ನುಡಿ, ಭಾಷೆ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಪರವಾಗಿ ನಿರಂತರ ಹೋರಾಟ ನಡೆಸುತ್ತಾ ಸಾಮಾಜಿಕ ಪರಿವರ್ತನೆಗೆ ಶ್ರಮಿಸುತ್ತಿದೆ ಎಂದರು.
ಶ್ರೀ ದೇಗುಲ ಮಠದ ಡಾ. ಚನ್ನಬಸವಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಸಂಸದ ಹಾಗೂ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್ . ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವರು, ಸಾಹಿತಿಗಳು ಹಾಗೂ ಅಂಬೇಡ್ಕರ್ ವಾದಿ ಡಾ.ಬಿ.ಟಿ. ಲಲಿತಾ ನಾಯಕ್ ಮುಖ್ಯ ಭಾಷಣಕಾರರಾಗಿ ಸಂವಿಧಾನದ ಆಶಯಗಳ ಕುರಿತು ಮಾತನಾಡಲಿದ್ದಾರೆ. ಜಿಲ್ಲಾಕೆಡಿಪಿ ಸದಸ್ಯ ಗುರುಮೂರ್ತಿ ಎನ್ .ಸಿ. ಕನ್ನಡ ರಾಜ್ಯೋತ್ಸವದ ಆಶಯ ಭಾಷಣ ಮಾಡಲಿದ್ದಾರೆ.
ಎಚ್ .ಕೆ. ಶ್ರೀಕಂಠ, ಕೆ.ವಿ. ವಿಶ್ವನಾಥ್ , ಕೆ.ಎನ್ . ದಿಲೀಪ್ , ಏಳಗಳ್ಳಿ ಎಚ್ .ಕೆ. ರವಿ, ಮಹಾದೇವನಾಯಕ್ , ಕೆ.ಆರ್ . ಮಧುಸೂದನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಮುಖ್ಯಮಂತ್ರಿ ಪದಕ ವಿಜೇತ, ವಿಧಾನಸೌಧದ ಪೊಲೀಸ್ ಇನ್ ಸ್ಪೆಕ್ಟರ್ ಹಾಗೂ ಸಹಾಯಕ ದಂಡಾಧಿಕಾರಿ ಶಿವಕುಮಾರ್ ಎ.ಬಿ. ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ದಿವ್ಯಶ್ರೀ ಎಚ್ .ಎಂ. ಅವರನ್ನು ವಿಶೇಷವಾಗಿ ಪ್ರಾಮಾಣಿಕ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸತೀಶ್ ಮಾಸ್ಟರ್ ಅವರ ನಾಟ್ಯ ಮಯೂರ ಡ್ಯಾನ್ಸ್ ಸ್ಕೂಲ್ ಹಾಗೂ ಬದ್ರಿ ಚಿಗುರು ಡ್ಯಾನ್ಸ್ ಅಕಾಡೆಮಿ ತಂಡಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ನಾನಾ ಕನ್ನಡಪರ, ಪ್ರಗತಿಪರ, ರೈತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಪತ್ರಕರ್ತರು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿವೇದಿಕೆ ಉಪಾಧ್ಯಕ್ಷ ಪ್ರಸಾದ್ ಸಿ., ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಡಿ., ಜಂಟಿ ಕಾರ್ಯದರ್ಶಿ ಶಿವಾನಂದ ಎನ್ ., ಸಂಚಾಲಕ ಹನುಮಂತರಾಜು, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಹಾಗೂ ನಿರ್ದೇಶಕ ಪ್ರತಾಪ್ ಎಚ್ .ಎನ್ . ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.