ಸಿರವಾರ- ಮೂಲಭೂತ ಸೌಕರ್ಯಕ್ಕೆ ಆಗ್ರಹ

Contributed by: mgsirwar226@gmail.com|Vijaya Karnataka•
Vijay Karnataka
ಮೂಲಸೌಕರ್ಯಕ್ಕೆ ಆಗ್ರಹಿಸಿ ಮನವಿ

ವಿಕ ಸುದ್ದಿಲೋಕ ಸಿರವಾರ
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.3ರ ಕೃಷ್ಣ ಲೇಔಟ್ ನಲ್ಲಿಕುಡಿಯುವ ನೀರು ಸೇರಿ ಇತರ ಮೂಲ ಸೌಕರ್ಯಗಳನ್ನು ತಕ್ಷಣ ಒದಗಿಸುವಂತೆ ಆಗ್ರಹಿಸಿ ವಾರ್ಡ್ ನಿವಾಸಿಗಳು ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ವಾರ್ಡ್ ನಲ್ಲಿಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಈ ಕುರಿತು ಏಪ್ರಿಲ್ 24 ರಂದು ಕಚೇರಿಗೆ ಮನವಿ ನೀಡಿದ್ದರೂ, ಇಲ್ಲಿಯವರೆಗೆ ಸಿಬ್ಬಂದಿ ಅಥವಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲಎಂದು ನಿವಾಸಿಗಳು ದೂರಿದರು.

ಬೇಸಿಗೆ ಆರಂಭವಾಗುತ್ತಿದ್ದು, ಪ್ರತಿದಿನ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸುವುದು, ಚರಂಡಿ ವ್ಯವಸ್ಥೆ ಸರಿಪಡಿಸಿ ಸ್ವಚ್ಛಗೊಳಿಸುವುದು, ಬೀದಿ ದೀಪಗಳನ್ನು ಅಳವಡಿಸಿ ನಿರ್ವಹಣೆ ಮಾಡುವುದು, ವಾರ್ಡ್ ನಲ್ಲಿಸ್ವಚ್ಛತೆ ಮತ್ತು ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವುದು, ಸಾರ್ವಜನಿಕರಿಗೆ ಅಗತ್ಯವಿರುವ ಇತರೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಪ.ಪಂ ಸದಸ್ಯ ಹಸೇನ ಅಲಿ, ರಾಜು ನಾಯಕ, ಬಂದೇನವಾಜ್ , ಮಹ್ಮದ್ ವಾಹೀದ್ , ಹಡಪದ ಸಮಾಜದ ತಾಲೂಕು ಅಧ್ಯಕ್ಷ ಅಮರೇಶ ಕನಸಾವಿ, ಚಂದ್ರಶೇಖರ ಹಡಪದ, ಪ್ರಕಾಶ, ರಾಜೇಶ್ ಸೇರಿ ವಾರ್ಡಿನ ನಿವಾಸಿಗಳು ಇದ್ದರು.