ಹಣಕಾಸು ವ್ಯವಹಾರಗಳ ಸಾಕ್ಷರತೆ

Contributed by: adarshkodi15@gmail.com|Vijaya Karnataka•
Vijay Karnataka
ಹಣಕಾಸು ವ್ಯವಹಾರಗಳ ಸಾಕ್ಷರತೆ

ದೊಡ್ಡಬಳ್ಳಾಪುರ: ಸಾರ್ವಜನಿಕರಲ್ಲಿಹಣಕಾಸಿನ ಅರಿವು ಮೂಡಿಸುವ ಉದ್ದೇಶದಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿತ ದೊಡ್ಡಬಳ್ಳಾಪುರದ ಹಣಕಾಸು ಸಾಕ್ಷರತಾ ಕೇಂದ್ರದಿಂದ ತೂಬಗೆರೆಯ ಅಂಬೇಡ್ಕರ್ ಭವನದಲ್ಲಿಹಣಕಾಸು ಸಾಕ್ಷರತೆ ಕಾರ ್ಯಕ್ರಮ ಆಯೋಜಿಸಲಾಗಿತ್ತು.
ಬ್ಯಾಂಕಿಂಗ್ ಸೇವೆಗಳು, ಆರ್ಥಿಕ ಸಾಕ್ಷರತೆ, ಕೇಂದ್ರ ಸರಕಾರದ ವಿವಿಧ ಹಣಕಾಸು ಯೋಜನೆಗಳು, ಬ್ಯಾಂಕ್ ಖಾತೆ ತೆರೆಯುವ ವಿಧಾನ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಸರಕಾರದ ವಿವಿಧ ಹಣಕಾಸು ಯೋಜನೆಗಳ ಪ್ರಯೋಜನಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು, ಬ್ಯಾಂಕಿಂಗ್ ಸೇವೆಗಳ ಸಮರ್ಪಕ ಬಳಸಿಕೆ ಹಾಗೂ ಡಿಜಿಟಲ್ ಹಣಕಾಸು ವಹಿವಾಟುಗಳ ಬಗ್ಗೆ ಅರಿವು ಮೂಡಿಸುವ ಕುರಿತು ತಿಳಿಸಲಾಯಿತು.

ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ: ಇದೇ ವೇಳೆ ಆನ್ ಲೈನ್ ವಂಚನೆ, ಸೈಬರ್ ಅಪರಾಧ, ನಕಲಿ ಕರೆಗಳು, ಅಪರಿಚಿತ ಲಿಂಕ್ ಗಳು ಹಾಗೂ ಯುಪಿಐ ಮೂಲಕ ನಡೆಯುವ ಹಣಕಾಸು ವಂಚನೆಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಯಿತು. ಡಿಜಿಟಲ್ ವಹಿವಾಟು ಎಚ್ಚರಿಕೆ, ಒಟಿಪಿ ಹಾಗೂ ಬ್ಯಾಂಕ್ ಖಾತೆಯ ಗೌಪ್ಯ ಮಾಹಿತಿ ಅಪರಿಚಿತರ ಜತೆ ಹಂಚಿಕೊಳ್ಳದಿರುವುದು ಸೇರಿದಂತೆ ಸುರಕ್ಷಿತ ಬ್ಯಾಂಕಿಂಗ್ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ವಿವೇಕ್ ಸಿಂಗ್ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ , ರಾಮಕೃಷ್ಣ, ವಿಜಯ್ ಕುಮಾರ್ , ಟಿ.ವಿ.ಶ್ರೀಧರ್ , ಟಿ.ಎಂ.ರಾಮಾಂಜನೇಯ ಉಪಸ್ಥಿತರಿದ್ದರು.

2311ವಿಕೆ3: ದೊಡ್ಡಬಳ್ಳಾಪುರದ ತೂ¸ಗೆರೆಯಲ್ಲಿಯೂನಿಯನ್ ಬ್ಯಾಂಕ್ ವತಿಯಿಂದ ಹಣಕಾಸು ಸಾಕ್ಷರತೆ ಹಾಗೂ ಡಿಜಿಟಲ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.