ಕಲುಷಿತ ನೀರಿನ 12 ಫ್ಯಾಕ್ಟರಿ ಬಂದ್ : ಖಾದರ್

Contributed by: mahammed.arif@timesofindia.com|Vijaya Karnataka•
12
ವಿಕ ಸುದ್ದಿಲೋಕ ಮಂಗಳೂರು

ದಿಲ್ಲಿಯಲ್ಲಿಬಿಸ್ಲೆರಿ ನೀರಿನ ಮಾದರಿಯಲ್ಲಿರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿರಾಜ್ಯಾದ್ಯಂತ 112 ವಾಟರ್ ಪ್ಯೂರಿಫಿಕೇಶನ್ ಮತ್ತು ಮಿನರಲ… ವಾಟರ್ ಘಟಕಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದು, ಲೋಪದೋಷ ಕಂಡುಬಂದ 12 ಫ್ಯಾಕ್ಟರಿಗಳಿಗೆ ಬೀಗ ಹಾಕಲಾಗಿದೆ. 60 ಘಟಕಗಳ ನೀರಿನ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಪ್ರಯೋಗಾಲಯದ ವರದಿ ಬಂದ ಬಳಿಕ ಎಷ್ಟೇ ದೊಡ್ಡ ಕಂಪನಿಯಾಗಿದ್ದರೂ ಮುಲಾಜಿಲ್ಲದೆ ಬಂದ್ ಮಾಡುತ್ತೇವೆ. ದಿಲ್ಲಿಯ ಅಥವಾ ಹೊರರಾಜ್ಯದ ಕಲುಷಿತ ಘಟಕಗಳಿಂದ ಕರ್ನಾಟಕಕ್ಕೆ ನೀರು ಸರಬರಾಜಾಗುತ್ತಿದ್ದರೆ ಅದನ್ನು ರಾಜ್ಯದಲ್ಲಿನಿಷೇಧಿಸಲಾಗುವುದು ಎಂದು ನಗರದಲ್ಲಿಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದ ಜನೌಷಧ ಕೇಂದ್ರಗಳ ತಪಾಸಣೆ ಪೂರ್ಣಗೊಂಡಿದ್ದು, ವರದಿ ನನ್ನ ಕೈ ಸೇರಿದೆ. ದಿಲ್ಲಿಯಿಂದ ಸಕಾಲಕ್ಕೆ ಔಷಧ ಪೂರೈಕೆಯಾಗದ ಕಾರಣ, ಅಂಗಡಿ ಮಾಲೀಕರು ಬಾಡಿಗೆ ಮತ್ತು ವಿದ್ಯುತ್ ಬಿಲ… ಕಟ್ಟಲಾಗದೆ ಸ್ಥಳೀಯ ಕಂಪನಿಗಳಿಂದ ಕಡಿಮೆ ದರಕ್ಕೆ ಔಷಧ ಖರೀದಿಸಿ ‘ಜನೌಷಧ’ ಫಲಕದಡಿ ಮಾರಾಟ ಮಾಡುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿಅತಿ ಕಡಿಮೆ ದರ ನಮೂದಿಸಿದವರಿಗೆ ಟೆಂಡರ್ ನೀಡುವುದರಿಂದ ಗುಣಮಟ್ಟವಿಲ್ಲದ ಗೂಡಂಗಡಿ ಮಾದರಿಯ ಫ್ಯಾಕ್ಟರಿಗಳ ಔಷಧಗಳು ಪೂರೈಕೆಯಾಗುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಂಗಡಿ ಮಾಲೀಕರು ಸಾಲ ಮಾಡಿ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ಮಾನವೀಯತೆಯಿಂದ ನಾವು ಇನ್ನೂ ಪ್ರಕರಣ ದಾಖಲಿಸಿಲ್ಲ. ಕೇಂದ್ರ ಆರೋಗ್ಯ ಸಚಿವರು ತಕ್ಷಣ ಈ ಸಮಸ್ಯೆ ಸರಿಪಡಿಸದಿದ್ದರೆ ರಾಜ್ಯ ಸರಕಾರ ಅನಿವಾರ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.

ಮಂಗಳೂರು ಮಹಾನಗರ ಪಾಲಿಕೆಗೆ ಮೂಲಸೌಲಭ್ಯ ಒದಗಿಸಲು ಸುಮಾರು 400 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಬೆಂಗ್ರೆ ಸೇತುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಶಂಕುಸ್ಥಾಪನೆಗೆ ಸಿದ್ಧವಾಗಿದೆ. ಮಂಗಳಾ ಕ್ರೀಡಾಂಗಣದ ಅಭಿವೃದ್ಧಿಗೆ ಹೆಚ್ಚುವರಿ 20 ಕೋಟಿ ರೂ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಯು.ಟಿ.ಖಾದರ್ ಹೇಳಿದರು.

------------

ವಿಜಯೇಂದ್ರಗೆ ನೇರ ಸವಾಲು

ಬಿಜೆಪಿ ಅಧಿಕಾರದಲ್ಲಿದ್ದಾಗ ಆಶಾ ಕಾರ್ಯಕರ್ತೆಯರಿಗೆ ಏನೂ ಮಾಡದ ಬಿ.ವೈ.ವಿಜಯೇಂದ್ರ, ಈಗ ಟೀಕೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿಅವರದ್ದೇ ಸರಕಾರವಿದೆ. ಕೇಂದ್ರ ಸರಕಾರಕ್ಕೆ ಪತ್ರ ಬರೆದು ಎನ್ ಎಚ್ ಎಂ ಪೋತ್ಸಾಹಧನ ಹೆಚ್ಚಿಸುವಂತೆ ಒತ್ತಾಯಿಸಲಿ. ಕೇಂದ್ರ ಎಷ್ಟು ಮೊತ್ತ ಹೆಚ್ಚಿಸುತ್ತದೋ ಅಷ್ಟೇ ಮೊತ್ತವನ್ನು ರಾಜ್ಯ ಸರಕಾರವೂ ಮ್ಯಾಚಿಂಗ್ ಗ್ರ್ಯಾಂಟ್ ಆಗಿ ನೀಡಲಿದೆ. ಬೇಕಿದ್ದರೆ ಒಟ್ಟಿಗೆ ದಿಲ್ಲಿಗೆ ನಿಯೋಗ ಹೋಗೋಣ ಎಂದು ಸಚಿವ ಯು.ಟಿ.ಖಾದರ್ ಸವಾಲು ಹಾಕಿದರು.

ಆಶಾ ಕಾರ್ಯಕರ್ತೆಯರು ನಮ್ಮ ಕುಟುಂಬದ ಸದಸ್ಯರಿದ್ದಂತೆ. ಅವರ ಕಷ್ಟ- ಸುಖಗಳು ನಮಗೆ ಚೆನ್ನಾಗಿ ಅರ್ಥವಾಗುತ್ತವೆ. ಸರಕಾರ ಸುಳ್ಳು ಭರವಸೆ ನೀಡಲು ಸಾಧ್ಯವಿಲ್ಲ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ, ಮುಂಬರುವ ಅಧಿವೇಶನದ ಅಂತ್ಯದೊಳಗೆ ಖಂಡಿತವಾಗಿಯೂ ಸಿಹಿ ಸುದ್ದಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. 12 ದಿನಗಳ ಕಾಲ ಕಾದು, ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿತೊಂದರೆಯಾಗದಂತೆ ಕರ್ತವ್ಯಕ್ಕೆ ಹಾಜರಾಗಿ ಎಂದು ಅವರು ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರು ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ ವ್ಯಾಪ್ತಿಯಲ್ಲಿದ್ದು, ಕೇಂದ್ರ ಕೇವಲ 2,000 ರೂ. ಹಾಗೂ 1 ಸಾವಿರ ಪ್ರೋತ್ಸಾಹಧನ ನೀಡುತ್ತಿದ್ದರೆ, ರಾಜ್ಯ ಸರಕಾರ 5,000 ಸೇರಿಸಿ ಒಟ್ಟು 8,000 ರೂ. ಗೌರವಧನ ನೀಡುತ್ತಿದೆ ಎಂದು ಅವರು ಹೇಳಿದರು.