ಚಂದ್ರು ಹಿರೇಮಠ ಕಲಬುರಗಿ ್ಚha್ಞd್ಟ್ಠhಜ್ಟಿಛಿಞaಠಿh06ಃಜಞaಜ್ಝಿ.್ಚಟಞ ಅಕ್ಷರ ದಾಸೋಹ ಯೋಜನೆಯಡಿ ರಾಜ್ಯದ ಸರಕಾರಿ ಶಾಲೆಗಳಲ್ಲಿಮಧ್ಯಾಹ್ನದ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಎರಡು ತಿಂಗಳಿನಿಂದ ಗೌರವಧನ ಪಾವತಿಯೇ ಆಗಿಲ್ಲ. ಇದರಿಂದ ಜೀವನ ಸಾಗಿಸಲು ಪರದಾಡುವಂತಾಗಿದೆ. ರಾಜ್ಯದಲ್ಲಿಮುಖ್ಯ ಅಡುಗೆ ತಯಾರಕರು 44,703 ಇದ್ದರೆ, ಸಹಾಯಕಿಯರು 67,004 ಸೇರಿ ಒಟ್ಟು 1,11,707 ಅಡುಗೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಡುಗೆ ತಯಾರಕರಿಗೆ 4,700 ರೂ ಹಾಗೂ ಸಹಾಯಕರಿಗೆ 4,600ರೂ. ಗೌರವ ಧನ ನೀಡಲಾಗುತ್ತದೆ. ಈಗ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನ ಗೌರವಧ ಪಾವತಿಯಾಗಿಲ್ಲ. ಈಗ ನವೆಂಬರ್ ಅರ್ಧ ತಿಂಗಳು ಕಳೆದಿದೆ. ಇದರಿಂದ ತುಂಬಾ ಸಮಸ್ಯೆಯಾಗಿದೆ. ಕುಟುಂಬ ನಿರ್ವಹಣೆಗೂ ಪರದಾಡಬೇಕಾಗಿದೆ. ಸಾಲ ಮಾಡಿ ಮನೆ ನಡೆಸುವುದು ಅನಿವಾರ್ಯವಾಗಿದೆ ಎಂದು ನೌಕರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಬಿಸಿಯೂಟ ಸಿಬ್ಬಂದಿ ಬಹುತೇಕ ಆರ್ಥಿಕವಾಗಿ ಹಿಂದುಳಿದವರು, ವಿಧವೆಯರು ಕೆಲಸ ಮಾಡುತ್ತಿದ್ದಾರೆ. ಅವರ ಜೀವನ ನಿರ್ವಹಣೆಗೆ ಗೌರವ ಧನವೇ ಮುಖ್ಯ ಆಧಾರವಾಗಿದೆ. ಇದರಿಂದ ವೇತನ ಪಾವತಿಯಾಗದಿದ್ದರಿಂದ ತೊಂದರೆಯಾಗಿದೆ. ಕೆಲಸದ ಹೊರೆ ಹೆಚ್ಚು: ನಿತ್ಯ ಶಾಲಾ ಮಕ್ಕಳಿಗೆ ಹಾಲು, ಮೊಟ್ಟೆ ನೀಡಲಾಗುತ್ತಿದೆ. ಇದರಿಂದ ಕೆಲಸ ಹೊರೆ ಹೆಚ್ಚಾಗಿದೆ. ಪ್ರತಿ ದಿನ ಮೊಟ್ಟೆ ಬೇಯಿಸಿ, ಸುಲಿದು ಮಕ್ಕಳಿಗೆ ಕೊಡಬೇಕು. ಬೆಳಗ್ಗೆ 8.30ಕ್ಕೆ ಶಾಲೆಗಳಿಗೆ ಹೋದರೆ ಕೆಲಸ ಮುಗಿಸಿ ವಾಪಸ್ ಬರಲು ಸಂಜೆ 4.30 ಆಗುತ್ತದೆ ಎಂದು ಬಿಸಿಯೂಟ ನೌಕರರು ಹೇಳುತ್ತಾರೆ. 2023ರಿಂದ ಆಯಾ ಶಾಲೆ ಮುಖ್ಯ ಶಿಕ್ಷಕ ಹಾಗೂ ಎಸ್ ಡಿಎಂಸಿ ಹೆಸರಿನಲ್ಲಿಬಿಸಿಯೂಟದ ಜಂಟಿ ಖಾತೆ ಇದೆ. ತರಕಾರಿ, ಮೊಟ್ಟೆ, ನಾನಾ ಸಾಮಗ್ರಿಗಳ ಖರೀದಿಗೆ ಜಂಟಿ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಆದರೆ, ಅಡುಗೆ ಮಾಡಲು ಏನಾದರೂ ಕಡಿಮೆ ಬಿದ್ದರೆ ಶಾಲಾ ಮುಖ್ಯ ಶಿಕ್ಷಕರನ್ನು ಕೇಳಲು ಹೋದರೆ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲಎಂದು ದೂರುತ್ತಾರೆ ಅಡುಗೆ ಸಿಬ್ಬಂದಿ.

