ಕೆಸಿಡಿಯ ಪ್ಥಮ ವರ್ಷದ ಕಾಮರ್ಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
ವಿಕ ಸುದ್ದಿಲೋಕ ಧಾರವಾಡ
ಕಾರ್ಪೊರೇಟ್ ಕ್ಷೇತ್ರದಲ್ಲಿನ ವಿಪುಲವಾದ ಅವಕಾಶಗಳಿಗೆ ಪೂರಕವಾಗಿ ವಾಣಿಜ್ಯ ವಿದ್ಯಾರ್ಥಿಗಳು ವೃತ್ತಿಪರತೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ಕಲಾ ಕಾಲೇಜಿನ ಡಾ. ಐ.ಸಿ. ಮುಳಗುಂದ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಕಾಲೇಜಿನ ವಾಣಿಜ್ಯ ವಿಭಾಗದ ಕಾಮರ್ಸ್ ಅಸೋಸಿಯೇಷನ್ ಬಿಬಿಎ ಸಭಾಂಗಣದಲ್ಲಿಆಯೋಜಿಸಿದ ಪ್ರಥಮ ವರ್ಷದ ವಾಣಿಜ್ಯ ವಿಷಯದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಾಣಿಜ್ಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿಹೆಚ್ಚು ವೃತ್ತಿಪರ ಅವಕಾಶಗಳಿದ್ದು ಈ ನಿಟ್ಟಿನಲ್ಲಿವಿದ್ಯಾರ್ಥಿಗಳು ನಿರಂತರ ಅಧ್ಯಯನದ ಜೊತೆಗೆ ಶಿಸ್ತು, ಸಮಯ ಪಾಲನೆ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನ ಮತ್ತು ಮೊಬೈಲ್ ಬಳಕೆ ಮೆಲೆ ಹಿಡಿತ ವಿರಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಮೊಬೈಲ್ ಬಳಸಿ ಎಂದ ಅವರು ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿ ಸ್ನೇಹ ಬೆಳಸಿ ವರ್ತಮಾನದ ಜೊತೆಗೆ ಭವಿಷ್ಯದ ಕನಸ್ಸನ್ನು ನನಸು ಮಾಡಲು ಪ್ರಯತ್ನಿಸಿ ಎಂದರು.
ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಅಶೋಕ ಹೀರಬನ್ನವರ ಮಾತನಾಡಿ‘‘ವಿದ್ಯಾರ್ಥಿಗಳು ಸಮಯಕ್ಕೆ ಆದ್ಯತೆ ನೀಡಿವುದರ ಜೊತೆಗೆ ನಿರ್ದಷ್ಟ ಗುರಿಯನ್ನು ಸಾಧಿಸಲು ಪ್ರಯತ್ನಿಸಿ. ವಿದ್ಯಾರ್ಥಿ ಜೀವನ ಉಜ್ವಲವಾಗಿ ಬಳಸಿಕೊಳ್ಳಿ, ವಾಣಿಜ್ಯ ವಿದ್ಯಾರ್ಥಿಗಳಿಗೆ ಬ್ಯಾಂಕ್ ಮತ್ತು ಕಾರ್ಪೊರೇಟ್ ವಲಯದಲ್ಲಿಹೆಚ್ಚು ಉದ್ಯೋಗ ಅವಕಾಶಗಳು ಇವೆ. ವಾಣಿಜ್ಯ ಪದವಿಧರರಿಗೆ ಭವಿಷ್ಯದಲ್ಲಿಒಳ್ಳೆಯ ಅವಕಾಶ ಇವೆ’’ ಎಂದರು.
ಪ್ರೊ.ಕಿರಣಕುಮಾರ ಡಾ. ಇಂದಾಯಣಿ ಕಟ್ಟಿ, ಪ್ರೊ.ಉಲ್ಲಾಸ ದೊಡಮನಿ, ಸದಾಶಿವ ಮೆಣಸಿನಕಾಯಿ, ಸದಾಶಿವ ಅರಕೇರಿ,ಡಾ.ಶಿಲ್ಪಾ ಧಾರವಾಡ, ಸೇರಿದಂತೆ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಸಂಗೀತಾ. ಸೃಷ್ಠಿ ಹೀರೆಮಠ ಸೌಂದರ್ಯ ಮುದ್ದಪ್ಪನವರ ಇದ್ದರು.
ಫೋಟೊ: 31ನಿಜಗುಣಿ4
ಧಾರವಾಡ ಕರ್ನಾಟಕ ಕಾಲೇಜಿನ ವಾಣಿಜ್ಯ ವಿಭಾಗವು ಬಿಬಿಎ ಸಭಾಂಗಣದಲ್ಲಿಆಯೋಜಿಸಿದ ಪ್ರಥಮ ವರ್ಷದ ವಾಣಿಜ್ಯ ವಿಷಯದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಡಾ. ಐ.ಸಿ. ಮುಳಗುಂದ ಉದ್ಘಾಟಿಸಿದರು.

