ವಿಕ ಸುದ್ದಿಲೋಕ ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರಾವಣ ಮಾಸದ ಎರಡನೇ ಶುಕ್ರವಾರದ ಹಿನ್ನೆಲೆಯಲ್ಲಿವರಮಹಾಲಕ್ಷಿತ್ರ್ಮ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಮಹಿಳೆಯರು ಮನೆಗಳಲ್ಲಿಮೂರ್ತಿ ಕೂರಿಸಿ ವಿಶೇಷ ಅಲಂಕಾರ ಕೈಗೊಂಡು ಪೂಜಿಸಿ ಲಕ್ಷಿತ್ರ್ಮ ಒಲಿಯಲೆಂದು ಪ್ರಾರ್ಥಿಸಿದರು. ವರಮಹಾಲಕ್ಷಿತ್ರ್ಮ ಹಬ್ಬ ಮಹಿಳೆಯರ ನೆಚ್ಚಿನ ಹಬ್ಬವಾಗಿದ್ದು, ಮಹಿಳೆಯರು ವಿಶೇಷ ಅಲಂಕಾರ ಕೈಗೊಂಡು ಭಕ್ತಿಯಿಂದ ಪೂಜೆ ಸಲ್ಲಿಸಿ ದೇವರಿಗೆ ನೈವೇದ್ಯ ಸಮರ್ಪಿಸಿದರು. ಬೆಳಗಿನ ಜಾವದಿಂದಲೇ ಮನೆಗಳಲ್ಲಿವರಮಹಾಲಕ್ಷಿತ್ರ್ಮ ಪೂಜೆಗೆ ಸಿದ್ಧತೆಗಳನ್ನು ಕೈಗೊಂಡ ಮಹಿಳೆಯರು ಶುಭ ಗಳಿಗೆಯನ್ನು ನೋಡಿಕೊಂಡು ಪೂಜೆ ಕೈಂಕರ್ಯ ಕೈಗೊಂಡರು. ನಗರದ ಗಾಂಧಿ ಚೌಕ್ , ಸುಭಾಷ್ ಚೌಕ್ ಸೇರಿ ಹಲವೆಡೆ ಹೂವು, ಹಣ್ಣು, ಪೂಜಾ ಸಾಮಗ್ರಿ ಬೆಲೆ ಏರಿಕೆಯ ಮಧ್ಯೆಯೂ ಜೋರಾಗಿ ಖರೀದಿ ನಡೆದಿತ್ತು. ಹೂವು, ಹಣ್ಣು, ಬಾಳೆ ದಿಂಡು, ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳ ಖರೀದಿಯಲ್ಲಿಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿತೊಡಗಿರುವುದು ಕಂಡುಬಂತು. ಮನೆಗಳಲ್ಲಿವರಮಹಾಲಕ್ಷಿತ್ರ್ಮೕ ಪೂಜೆಗೆ ಸಿಹಿ ಪದಾರ್ಥಗಳಿಂದ ನೈವೇದ್ಯ ತಯಾರಿಸಿ ದೇವಿಗೆ ಅರ್ಪಿಸಿದರು. ನಂತರ ಒಬ್ಬರ ಮನೆಗೆ ಇನ್ನೊಬ್ಬರು ತೆರಳಿ ಲಕ್ಷ್ಮಿ ದೇವಿಯ ದರ್ಶನ ಮಾಡಿದರು. ಇದೇವೇಳೆ ಸುಮಂಗಲಿಯರು ಒಬ್ಬರಿಗೊಬ್ಬರು ಹರಿಸಿಕೊಂಡು ತಾಂಬೂಲ, ಬಾಗಿನ ನೀಡಿದರು.