ಮೌನೇಶ್ವರ ದೇವಸ್ಥಾನಕ್ಕೆ ರಸ್ತೆ ನಿರ್ಮಾಣ

Contributed byamareshhiremath72@gmail.com|Vijaya Karnataka
construction of road to mauneshwara temple including the hilly area
ವಿಕ ಸುದ್ದಿಲೋಕ ಶಹಾಪುರ ಪಟ್ಟಣದ ಬೆಟ್ಟದ ಪ್ರದೇಶದಲ್ಲಿಇರುವ ದೇವಸ್ಥಾನಕ್ಕೆ ತೆರಳಲು ಸಮರ್ಪಕವಾದ ರಸ್ತೆ ಇರಲಿಲ್ಲ. ಕೊನೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿರೂ.2 ಕೋಟಿ ವೆಚ್ಚ ಸಿಸಿ ರಸ್ತೆ ಕಾಮಗಾರಿ ನಡೆದಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ನಗರದ ಹೊರವಲಯದಲ್ಲಿರುವ ಬೆಟ್ಟದ ಪ್ರದೇಶಕ್ಕೆ ತೆರಳಿ ರಸ್ತೆ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಹಾಕಿದೆ. ಕಾಲ ಮೀತಿಯಲ್ಲಿಕಾಮಗಾರಿ ಪೂರ್ಣಗೊಂಡರೆ ಜನತೆಯು ಅನುಕೂಲವಾಗುತ್ತದೆ. ಯಾವುದೇ ಕಾಮಗಾರಿ ಕಾಲಮಿತಿಯಲ್ಲಿಪೂರ್ಣಗೊಳಿಸಬೇಕು. ಇದರಿಂದ ಇನ್ನೂ ಹೆಚ್ಚಿನ ಕೆಲಸ ನಿರ್ವಹಿಸಲು ಅವಕಾಶ ಸಿಗುತ್ತದೆ. ಮೌನೇಶ್ವರ ದೇವಸ್ಥಾನಕ್ಕೆ ಸಿ.ಸಿ ರಸ್ತೆ ನಿರ್ಮಾಣದಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶದ ದೇಗುಲ, ದರ್ಗಾಕ್ಕೂ ಉಪಯೋಗವಾಗುತ್ತದೆ ಎನ್ನುವ ಉದ್ದೇಶದಿಂದ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು. ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ , ದೇವಿಂದ್ರಪ್ಪ ವಿಶ್ವಕರ್ಮ, ಸಲೀಂ ಸಂಗ್ರಾಮ,ಸಣ್ಣ ಮಾನ್ಯ ಹಾದಿಮನಿ, ಮಲ್ಲೇಶಿ ಮಮದಾಪುರ, ಮಲ್ಲಪ್ಪ ಜಂಗಳಿ ಭಾಗವಹಿಸಿದ್ದರು.