ಗಮನ ಸೆಳೆದ ಜೋಡೆತ್ತು, ರೈತನ ಸಾಧನೆ

Contributed byrajeshinamadar7@gmail.com|Vijaya Karnataka
farmer chidappa poojaris achievement duo oxen plow 24 acres of cotton in 10 hours
10 ಗಂಟೆಯಲ್ಲಿ24 ಎಕರೆ ಹತ್ತಿ ಹೊಲ ಹರಗಿದ ಎತ್ತುಗಳು

ಗಮನ ಸೆಳೆದ ಜೋಡೆತ್ತು, ರೈತನ ಸಾಧನೆ
ವಿಕ ಸುದ್ದಿಲೋಕ ತಾಳಿಕೋಟೆ

ತಾಲೂಕಿನ ಹಿರೂರ ಗ್ರಾಮದ ರೈತ ಚಿದಪ್ಪ ಕೆಂಚಪ್ಪ ಪೂಜಾರಿ ಅವರ ಜೋಡೆತ್ತು ಕೇವಲ 10 ಗಂಟೆಗಳಲ್ಲಿ24 ಎಕರೆ ಹತ್ತಿ ಹೊಲವನ್ನು ಹರಗಿ ಗಮನಾರ್ಹ ಸಾಧನೆ ಮಾಡಿವೆ.

ಚಿದಪ್ಪ ಪೂಜಾರಿ ಅವರು ಗುರುವಾರ ಬೆಳಗಿನಜಾವ 4 ಗಂಟೆಗೆ ತಮ್ಮ ಹತ್ತಿ ಹೊಲ ಹರಗುವುದಕ್ಕಾಗಿ ಗಳೆ ಹೂಡಿದರು. ಮಧ್ಯಾಹ್ನ 2 ಗಂಟೆವರೆಗೆ ಸತತವಾಗಿ ಜೋಡೆತ್ತುಗಳು ಹರಗಿ 24 ಎಕರೆ ಜಮೀನಿನ ಕೆಲಸ ಪೂರ್ಣಗೊಳಿಸಿವೆ. ಕೃಷಿ ಕಾರ್ಯದಲ್ಲಿಇಂತಹ ಸಾಧನೆ ಮಾಡಬಹುದು ಎಂಬುದನ್ನು ಚಿದಪ್ಪ ಅವರು ತೋರಿಸಿಕೊಟ್ಟಿದ್ದಾರೆ.

ಜೋಡೆತ್ತು ಮತ್ತು ರೈತ ಚಿದಪ್ಪ ಅವರ ಈ ಸಾಧನೆಗೆ ಹಿರೂರ ಗ್ರಾಮದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು.

ರೈತರಾದ ಪರಮಾನಂದ ಪೂಜಾರಿ, ಬೀರಪ್ಪ ಪೂಜಾರಿ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಫೋಟೊ

ತಾಳಿಕೋಟೆ ತಾಲೂಕಿನ ಹಿರೂರ ಗ್ರಾಮದಲ್ಲಿಸಾಧನೆ ಮಾಡಿದ ಜೋಡೆತ್ತು ಮೆರವಣಿಗೆ ಮಾಡಲಾಯಿತು.