ಖರ್ಗೆಗೆ ಅವಮಾನ: ಕ್ರಮಕ್ಕೆ ಆಗ್ರಹ

Contributed byphanumanthu14@gmail.com|Vijaya Karnataka
insult against kharge protest by dalit struggle committee
ವಿಕ ಸುದ್ದಿಲೋಕ ಯಾದಗಿರಿ ಉತ್ತರಾಖಂಡದ ಹಲ್ದಾವಾನಿಯಾ ರಾಮಲೀಲಾ ಮೈದಾನದಲ್ಲಿನಡೆದ ಕಾರ್ಯಕ್ರಮದಲ್ಲಿರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಹಿನ್ನೆಲೆಯಲ್ಲಿಆ ಸ್ಥಳವನ್ನು ಹಿಂದೂಪರ ಸಂಘಟನೆಯವರು ಶುಚಿಗೊಳಿಸಿ, ಹೋಮ, ಹವನವನ್ನು ಮಾಡಿ ಅವಮಾನಿಸಿರುವುದನ್ನು ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಯಿತು. ಜಿಲ್ಲಾಸಂಚಾಲಕ ಶಿವಪುತ್ರ ಜವಳಿ ಮಾತನಾಡಿ, ಜಾತಿ ಶ್ರೇಣಿಯಲ್ಲಿವಂಚಿತಗೊಂಡ ಸಮುದಾಯದಿಂದ ಬಂದ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ನಾಯಕರಾಗಿದ್ದು, ಜಾತಿ ಹಿನ್ನೆಲೆಯಲ್ಲಿಅಸ್ಪೃಶ್ಯತೆ ಆಚರಣೆ ಮಾಡಿ ಅವರನ್ನು ಅವಮಾನಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆಯವರ ಮನೋಸ್ಥೈರ್ಯ ಕುಗ್ಗಿಸುವ ಹುನ್ನಾರವನ್ನು ಸಹಿಸಿಕೊಳ್ಳುವುದಿಲ್ಲಎಂದು ಎಚ್ಚರಿಸಿದರು. ಇದು ಕೇವಲ ಖರ್ಗೆಯವರಿಗೆ ಆದ ಅವಮಾನವಲ್ಲಶೋಷಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಈ ರೀತಿಯ ದೇಶ ಹಾಗೂ ಸಂವಿಧಾನ ವಿರೋಧಿ ಆಚರಣೆಗಳನ್ನು ಯಾವುದೇ ಕಾರಣಕ್ಕೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಅನಿಷ್ಠ ಆಚರಣೆ ಖಂಡನೀಯವಾಗಿದ್ದು, ಈ ಕೃತ್ಯದ ಹಿಂದೆ ಯಾರಿದ್ದಾರೆ. ಅವರ ವಿರುದ್ಧ ದೇಶದ್ರೋಹಿ ಮತ್ತು ಅಟ್ರಾಸಿಟಿ ಕಾಯ್ದೆಯ ಅಡಿಯಲ್ಲಿಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲವಾದಲ್ಲಿಮುಂದಿನ ದಿನಮಾನಗಳಲ್ಲಿದೇಶ ಮತ್ತು ರಾಜ್ಯಾದ್ಯಾಂತ ಉಗ್ರ ಹೋರಾಟಕ್ಕೆ ಅಣೀಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಚಂದಪ್ಪ ಮುನಿಯಪ್ಪನೊರ್ , ಶಿವಲಿಂಗ ಹಸನಾಪುರ, ಮರೆಪ್ಪ ಕ್ರಾಂತಿ, ಮಲ್ಲಪ್ಪ ಪೂಜಾರಿ, ದೊಡ್ಡಪ್ಪ, ದೇವು ಹುಲ್ಕಲ್ , ಶರಣಪ್ಪ, ತಿಪ್ಪಣ್ಣ ಶೆಳ್ಳಗಿ, ಶರಬಣ್ಣ ದೋರನಹಳ್ಳಿ, ತಾಯಪ್ಪ ಭಂಡಾರಿ, ಭೀಮಶಂಕರ ಗುಂಡಹಳ್ಳಿ, ಚಂದ್ರು ಬಲಶೇಟ್ಟಿಹಾಳ, ರಂಗಸ್ವಾಮಿ ಕೊಂಕಲ್ , ಶರಣಪ್ಪ ಕುರಕುಂದ, ರಮೇಶ ಬಾಚಿಮಟ್ಟಿ, ಎಂ.ಪಟೇಲ್ , ಬಲಭೀಮ ಬೇವಿನಹಳ್ಳಿ, ಚನ್ನಪ್ಪ ದೇವಾಪೂರ, ಸಂತೋಷ ಗುಂಡಳ್ಳಿ, ನಾಗರಾಜ ಕೋಡಮನಹಳ್ಳಿ, ಸಿದ್ದಪ್ಪ ಕೋಡಮನಹಳ್ಳಿ, ನಾಗರಾಜ ಹಳಿಸಗರ, ವೆಂಕಟೇಶ ದೇವಪೂರ, ರಾಜು ಬಡಿಗೇರ,ದಶರಥ ಗುಂಡಳ್ಳಿ, ಮಲ್ಲಪ್ಪ ತಳಿಬಿಡಿ, ನಾಗರಾಜ ಕಂದಕೂರ, ಸುರೇಶ ಚಿಂತನಳ್ಳಿ, ಆನಂದ ಕೊಂಕಲ್ , ಆನಂದ ಯಲಸತ್ತಿ, ರಾಜು ದುಪ್ಪಲ್ಲಿ, ಹಣಮಂತು ಪಲ್ಲಗೇರಿ,ಚೌಡಪ್ಪ ಯಡ್ಡಳಿ, ಯಲ್ಲಪ್ಪ ಗುಂಡಲಗೇರಾ, ಪರಮಣ್ಣ ಬಲಶೇಟ್ಟಿಹಾಳ, ಸಾಯಿಬಣ್ಣ ಸದಬ್ ಉಪಸ್ಥಿತರಿದ್ದರು.