ವಿಕ ಸುದ್ದಿಲೋಕ ಗುರುಮಠಕಲ… ಬೊರಬಂಡಾ ಗ್ರಾಮದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಭಕ್ತಿ ಭಾವದಿಂದ ಸಂಪನ್ನಗೊಂಡಿತು. ಶ್ರಾವಣ ಶುಕ್ರವಾರದ ಪ್ರಯುಕ್ತ ಬೆಳಗ್ಗೆಯಿಂದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಸೇರಿ ವಿವಿಧ ಪೂಜಾ ಸೇವೆಗಳು ನೆರವೇರಿದವು. ಶ್ರೀ ಮಹಾಲಕ್ಷ್ಮಿ ದೇವಿಯ ಮೂರ್ತಿಯನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಸಾಮೂಹಿಕ ಪೂಜೆಯಲ್ಲಿ80 ದಂಪತಿಗಳು ಪಾಲ್ಗೊಂಡು, ಶ್ರೀ ವರಮಹಾಲಕ್ಷ್ಮಿ ವ್ರತಕಥೆ ಆಲಿಸಿದ ಬಳಿಕ ಲಕ್ಷ್ಮಿ ವಿಗ್ರಹಕ್ಕೆ ಷೋಡಶೋಪಚಾರ ಹಾಗೂ ಅಷ್ಟೋತ್ತರ ಪೂಜೆ ನೆರವೇರಿಸಿದರು. ಬಳಿಕ ಶ್ರೀ ಮಹಾಲಕ್ಷ್ಮಿ ದೇವಿಯ ಜಯಘೋಷಗಳ ನಡುವೆ ರಥೋತ್ಸವ ಜರುಗಿತು. ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನದ ವ್ಯವಸ್ಥಾಪಕ ನರೇಂದ್ರ ರಾಠೋಡ ದಂಪತಿ ಪೂಜೆಯಲ್ಲಿಪಾಲ್ಗೊಂಡು, ವ್ರತಾಚರಣೆಯಲ್ಲಿಭಾಗವಹಿಸಿದ್ದವರಿಗೆ ಬಾಗಿನ ವಿತರಿಸಿ ದರು. ಕಾರ್ಯಕ್ರಮದಲ್ಲಿಯುವ ಮುಖಂಡರು ಅನಂತಪ್ಪ ಬೋಯಿನ್ ಯದ್ಲಾಪುರ ಕಾಶಿನಾಥ್ ರಾಠೋಡ್ , ಅಯ್ಯಪ್ಪ ರಾಠೋಡ, ರಾಜು ರಾಠೋಡ, ರಮೇಶ್ ಪವಾರ್ , ನೀಲಕಂಠ ಜಾದವ್ , ಕೃಷ್ಣ ಚೌವ್ಹಾಣ್ , ಸುರೇಶ್ ಚಿನ್ನ ರಾಠೋಡ, ಮೋಹನ್ ರಾವ್ ಆಚಾರ್ಯ, ಪವನ್ ಆಚಾರ್ಯ, ಪಟ್ಟಣದ ಗಣ್ಯರು, ದೇವಸ್ಥಾನದ ಭಕ್ತರು ಹಾಗೂ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿದ್ದರು.