ಜೀವನದಲ್ಲಿಉತ್ತಮ ಮೌಲ್ಯ ಅಳವಡಿಸಿಕೊಳ್ಳಿ

Contributed byvinayakbhavimani11@gmail.com|Vijaya Karnataka
advice to instill good values in students
ಜೀವನದಲ್ಲಿಉತ್ತಮ ಮೌಲ್ಯ ಅಳವಡಿಸಿಕೊಳ್ಳಿ

ವಿಕ ಸುದ್ದಿಲೋಕ ಗದಗ
ವಿದ್ಯಾರ್ಥಿ ಜೀವನ ವ್ಯಕ್ತಿಯ ಭವಿಷÜ್ಯ ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದ್ದು, ಸತ್ಯ, ಪ್ರಾಮಾಣಿಕತೆ, ಶಿಸ್ತು, ದಯೆ, ಸಹಕಾರ ಹಾಗೂ ಗೌರವದಂತಹ ಉತ್ತಮ ಮೌಲ್ಯ ಅಳವಡಿಸಿಕೊಂಡು ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳಬೇಕು ಎಂದು ಭಾರತೀಯ ಶ್ರಮಿಕ ಕಾರ್ಮಿಕ ಕರ್ಮಚಾರಿ ಮಹಾಸಂಘದ ಜಿಲ್ಲಾಅಧ್ಯಕ್ಷ ನಿಂಗಪ್ಪ ಕಟ್ಟಿಮನಿ ಹೇಳಿದರು.

ನಗರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. 2ರಲ್ಲಿಜಿಲ್ಲಾಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಶ್ರಾವಣಮಾಸದ ಅಂಗವಾಗಿ ಆಯೋಜಿಸಿದ್ದ ‘ಅಮೃತ ಭೋಜನ-ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ನೈತಿಕ ಮೌಲ್ಯಗಳು ವಿದ್ಯಾರ್ಥಿಗಳಲ್ಲಿಉತ್ತಮ ವ್ಯಕ್ತಿತ್ವ ಬೆಳೆಸುತ್ತವೆ. ಶರಣರ ವಚನ ಹಾಗೂ ಅವರ ಆದರ್ಶಗಳನ್ನು ಮಕ್ಕಳು ತಿಳಿದುಕೊಂಡು ಜೀವನದಲ್ಲಿಅಳವಡಿಸಿಕೊಳ್ಳಬೇಕು. ಆ ಮೂಲಕ ಆದರ್ಶಪ್ರಾಯವಾದ ವಿದ್ಯಾರ್ಥಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಪ್ರಶಸ್ತಿ ವಿಜೇತ ಗಾಯಕಿ ಪದ್ಮಾ ಕಬಾಡಿ ಮಾತನಾಡಿ, ವಚನಕಾರರ ವಚನಗಳು ಹಾಡಲು ಸುಲಭವಾಗಿದ್ದು, ಅತ್ಯಂತ ಅರ್ಥಗರ್ಭಿತವಾಗಿವೆ. ಮಕ್ಕಳು ವಚನಗಳ ಅರ್ಥ ತಿಳಿದು ಹಾಡುವ ರೂಢಿ ಬೆಳೆಸಿಕೊಳ್ಳಬೇಕು. ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಮಾತನಾಡಿ, ಶ್ರಾವಣಮಾಸದಲ್ಲಿಕದಳಿಶ್ರೀ ವೇದಿಕೆಯು ಸರಕಾರಿ ಶಾಲೆಗಳಿಗೆ ವಿವಿಧ ಕ್ಷೇತ್ರಗಳಲ್ಲಿಸಾಧನೆಗೈದವರನ್ನು ಆಹ್ವಾನಿಸಿ, ಮಕ್ಕಳಿಗೆ ಸಿಹಿಭೋಜನ ಉಣಬಡಿಸುವುದು ಹಾಗೂ ಕಲಿಕಾ ಸಾಮಗ್ರಿ ವಿತರಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯೋಪಾಧ್ಯಾಯಿನಿ ಕಮಲಾಕ್ಷಿ ರೇಶ್ಮಿ ಅಧ್ಯಕ್ಷತೆ ವಹಿಸಿದ್ದರು.

ಕಲ್ಪನಾ ಅರ್ಕಸಾಲಿ, ಹೊನ್ನಮ್ಮ ಹರಿಜನ, ಶಿಲ್ಪಾ ಕಮ್ಮಾರ, ಸಂಗೀತಾ ಬದಿ, ಗೀತಾ ಮಂಗಳೂರ, ದೀಪಾ ಬೆಟಗೇರಿ, ಲಕ್ಷ್ಮೀ ಜಡಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಮೃತಾ ಮರಾಠಿ, ಕವನಾ ಬರಡಿ, ಸಿಂಧೂ ಹರ್ತಿ ವಚನ ಪ್ರಾರ್ಥನೆ ಸಲ್ಲಿಸಿದರು. ರೇಣುಕಾ ಪಾಟೀಲ, ಸ್ನೇಹಾ ಜಡಿ ವಚನಗಳನ್ನು ಹಾಡಿದರು. ಎಸ್ .ವಿ. ಇಂದಿರಾಬಾಯಿ ಸ್ವಾಗತಿಸಿದರು. ಪಿ.ಎಫ್ . ನಾಗನೂರ ಪರಿಚಯಿಸಿದರು. ಗೌರಮ್ಮ ಕಮತರ ನಿರೂಪಿಸಿದರು. ಸಂಗಮ್ಮ ಅಲಗೂರ ವಂದಿಸಿದರು.

22ಜಿಡಿಜಿ1-

ಗದಗ ಸರಕಾರಿ ಹಿಪ್ರಾ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. 2ರಲ್ಲಿನಡೆದ ಕಾರ್ಯಕ್ರಮದಲ್ಲಿಗಣ್ಯರನ್ನು ಸನ್ಮಾನಿಸಲಾಯಿತು.