ಶ್ರಾವಣ ಮಾಸ ಆರಂಭಗೊಂಡಿದ್ದು ಹಲವು ಹಬ್ಬಗಳು ಬರಲಿವೆ. ಹಬ್ಬದ ಸಂಭ್ರಮಕ್ಕೆ ಹಲವು ಸಾಂಪ್ರದಾಯಿಕ ಅಡುಗೆಗಳನ್ನು ಮಾಡಬಹುದು. ಅವುಗಳಲ್ಲಿಕೆಲವು ಸಿಹಿ ಅಡುಗೆ ವಿಧಾನ ಇಲ್ಲಿದೆ.
-----
ಗೋಧಿ ನುಚ್ಚಿನ ಪಾಯಸ
ಸಾಮಗ್ರಿ: ಗೋಧಿ ನುಚ್ಚು ಅರ್ಧ ಕೆಜಿ, ಬೆಲ್ಲಕಾಲು ಕೆಜಿ, ಹಾಲು ಸಣ್ಣ ಬಟ್ಟಲು, ತುಪ್ಪ ಎರಡು ಚಮಚ, ದ್ರಾಕ್ಷಿ -ಗೋಡಂಬಿ ಸ್ವಲ್ಪ.
ವಿಧಾನ: ಗೋಧಿ ನುಚ್ಚು ಕುಕ್ಕರ್ ನಲ್ಲಿಹಾಕಿ ಮುಳುಗುವಷ್ಟು ನೀರು ಹಾಕಿ ಮೂರು ವಿಷಲ್ ಕುಕ್ಕರ್ ಆರಿದ ನಂತರ ಬೆಂದ ಮಿಶ್ರಣಕ್ಕೆ ಹಾಲು, ಬೆಲ್ಲಸೇರಿಸಿ ಕುದಿಸಿ. ತುಪ್ಪದಲ್ಲಿಕರಿದ ದ್ರಾಕ್ಷಿ ಗೋಡಂಬಿ ಹಾಕಿ ಚೆನ್ನಾಗಿ ಕೈಯಾಡಿಸಿ.
------
ಬೇಳೆ ಹೋಳಿಗೆ
ಸಾಮಗ್ರಿ: ತೊಗರಿ ಬೇಳೆ ಅರ್ಧ ಕೆಜಿ, 2ಬೆಲ್ಲದ ಅಚ್ಚಿನ ಪುಡಿ, ಎಣ್ಣೆ ಕಾಲು ಕೆಜಿ, ಅರಶಿನ ಪುಡಿ ಒಂದು ಚಿಕ್ಕ ಚಮಚ, ಮೈದಾ ಹಿಟ್ಟು ಕಾಲು ಕೆಜಿ.
ವಿಧಾನ: ತೊಗರಿ ಬೇಳೆಯನ್ನು ಬೇಯಿಸಿ. ತೀರಾ ನುಣ್ಣಗಾಗುವಂತೆ ಬೇಯಿಸಬಾರದು. ಕಟ್ಟು ತೆಗೆದ ಬೇಳೆ, ಬೆಲ್ಲದ ಪುಡಿ ಸೇರಿಸಿ ನುಣ್ಣಗೆ ರುಬ್ಬಿ. ಹೂರಣ ತಯಾರಿಸಿ. ಒಲೆಯ ಮೇಲೆ ಬಾಣಲೆ ಇಟ್ಟು ರುಬ್ಬಿದ ಹೂರಣವನ್ನು ಹಾಕಿ ಸಣ್ಣ ಉರಿಯಲ್ಲಿಕೈಯಾಡಿಸಿ, ನೀರು ಇಂಗಿಸಿ. ಗೋಧಿ ಹಿಟ್ಟನ್ನು ಸ್ವಲ್ಪ ಅರಶಿನ ಹಾಕಿ ಪೂರಿ ಹಿಟ್ಟಿನ ಹದದಲ್ಲಿಕಲೆಸಿ. ಕಲೆಸಿದ ಹಿಟ್ಟನ್ನು ಚೆನ್ನಾಗಿ ನಾದಿ. ಎಣ್ಣೆ ಹಾಕಿ ಒಂದು ಗಂಟೆ ನೆನೆಸಿಡಿ. ನಂತರ ನೆನೆದ ಹಿಟ್ಟಿನ ಉಂಡೆಯನ್ನು ಬಟ್ಟಲಿನ ಆಕಾರದಲ್ಲಿಹಳ್ಳ ಮಾಡಿ ಹೂರಣ ತುಂಬಿ ಮುಚ್ಚಿ. ಮೈದಾ ಹಿಟ್ಟನ್ನು ಉದುರಿಸಿ ತೆಳ್ಳಗೆ ಲಟ್ಟಿಸಿ. ಕಾದ ಕಾವಲಿ ಮೇಲೆ ಹಾಕಿ ಎರಡು ಬದಿ ಹದನಾಗಿ ಬೇಯಿಸಿ.
----------
ಕರ್ಜಿಕಾಯಿ
ಸಾಮಗ್ರಿ: ಚಿರೋಟಿ ರವೆ ಅರ್ಧ ಕೆಜಿ, ಮೈದಾ ಹಿಟ್ಟು ಕಾಲು ಕೆ, ಸಕ್ಕರೆ ಪುಡಿ ಕಾಲು ಕೆಜಿ ಒಣಕೊಬ್ಬರಿ ತುರಿ ಸ್ವಲ್ಪ, ಕರಿಯಲು ಎಣ್ಣೆ.
ವಿಧಾನ: ರವೆ ಮತ್ತು ಮೈದಾ ಹಿಟ್ಟನ್ನು ಎರಡು ಚಮಚ ತುಪ್ಪ ಹಾಕಿ ಸ್ವಲ್ಪ ನೀರು ಸೇರಿಸಿ ಮೃದುವಾಗಿ ಕಲೆಸಿ ಚೆನ್ನಾಗಿ ನಾದಿ ಒಂದು ಗಂಟೆಗಳ ನೆನೆಯೆಲು ಬಿಡಿ. ಸಕ್ಕರೆ ಪುಡಿ ಹೆರದ ಕೊಬ್ಬರಿ ತುರಿ ಮಿಶ್ರಣ ಮಾಡಿಟ್ಟುಕೊಳ್ಳಿ. ನೆನೆದ ಹಿಟ್ಟನ್ನು ನಿಂಬೆ ಗಾತ್ರದ ಉಂಡೆ ಮಾಡಿ ಪೂರಿ ರೀತಿ ಲಟ್ಟಿಸಿ ಸಕ್ಕರೆ ಕೊಬ್ಬರಿ ಮಿಶ್ರಣವನ್ನು ತುಂಬಿ ಮುಚ್ಚಿ. ಅಂಚಿಗೆ ನೀರು ಸವರಿ ಒತ್ತಿ. ಹೀಗೆ ಸಿದ್ಧಪಡಿಸಿದ ಕರ್ಜಿಕಾಯಿಯೆನ್ನು ಕಾದ ಎಣ್ಣೆಯಲ್ಲಿಹಾಕಿ ಹದವಾಗಿ ಕರಿಯಿರಿ.
----
ಚಕ್ಕುಲಿ
ಸಾಮಗ್ರಿ: ಅಕ್ಕಿಹಿಟ್ಟು ಒಂದು ಅಳತೆ, ಅರ್ಧ ಅಳತೆ ಹುರಿಗಡಲೆ ಹಿಟ್ಟು, ಉಪ್ಪು, ಜೀರಿಗೆ, ಬೆಣ್ಣೆ, ಕರಿಯಲು ಎಣ್ಣೆ.
ವಿಧಾನ: ಅಕ್ಕಿ ಹಿಟ್ಟು, ಹುರಿಗಡಲೆ ಹಿಟ್ಟು, ಉಪ್ಪು, ಜೀರಿಗೆ, ಅರ್ಧ ಚಮಚ ಬೆಣ್ಣೆ ಸೇರಿಸಿ ಚೆನ್ನಾಗಿ ಕಲೆಸಿ. ಚಕ್ಕುಲಿ ಒರಳಿನಲ್ಲಿಚಕ್ಕುಲೆ ಬಿಲ್ಲೆಹಾಕಿ ಕಲೆಸಿದ ಹಿಟ್ಟನ್ನು ತುಂಬಿ ಚಕ್ಕುಲಿ ಆಕಾರದಲ್ಲಿಹಿಂಡಿ ಕಾದ ಎಣ್ಣೆಯಲ್ಲಿಹಾಕಿ ಗರಿ ಗರಿಯಾದ ನಂತರ ತೆಗೆಯಿರಿ.
ವಿಧಾನ: ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಗಂಟೆ ಕಾಲ ನೆನೆಸಿ. ಸೌತೆಕಾಯಿಯ ಸಿಪ್ಪೆ ಬೀಜ ತೆಗೆದು ಸಣ್ಣದಾಗಿ ಹೆಚ್ಚಿ. ನೀರು ತೆಗೆದ ಹೆಸರುಬೇಳೆಗೆ ಹೆಚ್ಚಿದ ಸೌತೆಕಾಯಿ, ತೆಂಗಿನ ತುರಿ, ಉಪ್ಪು ನಿಂಬೆ ರಸ, ಒಗ್ಗರಣೆಗೆ ಹಸಿಮೆಣಸಿನಕಾಯಿ, ಕರಿಬೇವು, ಇಂಗು ಹಾಕಿ ಎಲ್ಲವನ್ನು ಕೋಸಂಬರಿಗೆ ಸೇರಿಸಿ ಚೆನ್ನಾಗಿ ಹೊಂದಿಸಿ.