ಸೇತುವೆ ನಿರ್ಮಾಣಕ್ಕೆ ಗಣೇಶ್ ಪ್ರಸಾದ್ ಚಾಲನೆ

Contributed bymaheshmadahalli.vk@gmail.com|Vijaya Karnataka
ganesh prasad launches bridge construction
ಸೇತುವೆ ನಿರ್ಮಾಣಕ್ಕೆ ಗಣೇಶ್ ಪ್ರಸಾದ್ ಚಾಲನೆ

ವಿಕ ಸುದ್ದಿಲೋಕ ಗುಂಡ್ಲುಪೇಟೆ
ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್ .ಎಂ.ಗಣೇಶಪ್ರಸಾದ್ ಶನಿವಾರ ಭೂಮಿಪೂಜೆ ನೆರವೇರಿಸಿದರು.

ತಾಲೂಕಿನ ಇಂಗಲವಾಗಿ ಗ್ರಾಮದಲ್ಲಿಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ‘‘ ತಾಲೂಕಿನಲ್ಲಿಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಅದೇ ರೀತಿ ಸೇತುವೆಗಳು ಶಿಥಿಲವಾಗಿರುವುದು, ಕಿರಿದಾಗಿರುವುದು ಇತರೆ ಕಾರಣಗಳಿಗೆ ಸೇತುವೆಗಳ ನಿರ್ಮಾಣಕ್ಕೆ ಚಿಂತಿಸಲಾಗಿತ್ತು. ಅದರಂತೆ 1 ಕೋಟಿ ರೂ. ವೆಚ್ಚದಲ್ಲಿಬನ್ನಿತಾಳಪುರ-ಇಂಗಲವಾಡಿ ಸಂಪರ್ಕ ರಸ್ತೆ, ಹಂಗಳ-ಮದ್ದೂರು ನಡುವಿನ ಬೇರಂಬಾಡಿ ಬಳಿ 85 ಲಕ್ಷ, ದೇವರಹಳ್ಳಿ ಬಳಿ 35 ಲಕ್ಷ, ಹುಲ್ಲೇಪುರ ಕಡಬೂರು ನಡುವೆ 50 ಲಕ್ಷ, ರಾಜ್ಯ ಹೆದ್ದಾರಿ 81ರ ಕಗ್ಗಳ ಬಳಿ 1.50 ಕೋಟಿ ಮತ್ತು ಶಿಂಡನಪುರ ಬಳಿ 1 ಕೋಟಿ 20 ಲಕ್ಷ ರೂ. ವೆಚ್ಚದಲ್ಲಿಸೇತುವೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು,’’ ಎಂದು ತಿಳಿಸಿದರು.

‘‘ರಸ್ತೆ ಮತ್ತು ಸೇತುವೆಗಳ ನಿರ್ಮಾಣದಿಂದ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಇಂಗಲವಾಡಿ ಶ್ರೀ ಮಹದೇಶ್ವರ ದೇವಾಲಯ ನಿರ್ಮಾಣಕ್ಕೆ ಕೆಆರ್ ಐಡಿಎಲ್ ನಿಂದ 5 ಲಕ್ಷ ರೂ. ಅನುದಾನ ಕೊಡಿಸಲಾಗಿದೆ. 2026-27 ರಲ್ಲಿಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿದೇವಾಲಯ ಅಭಿವೃದ್ಧಿಗೆ ಹೆಚ್ಚುವರಿ ನೆರವು ನೀಡಲಾಗುವುದು,’’ ಭರವಸೆ ನೀಡಿದರು.

ಎಪಿಎಂಸಿ ಅಧ್ಯಕ್ಷ ಮಂಚಹಳ್ಳಿ ವಿರೂಪಾಕ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಎಚ್ .ಜಿ.ಉಮಾಪತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವರಹಳ್ಳಿಪ್ರಭು, ಬೇರಂಬಾಡಿ ರಾಜೇಶ್ , ಮುಖಂಡರಾದ ರಂಗಪ್ಪನಾಯಕ, ಯೋಗೀಶ್ , ಮಹೇಶ್ , ಕುಮಾರಸ್ವಾಮಿ, ಮಾರಶೆಟ್ಟಿ, ಕಿಲಗೆರೆ ಶಿವಣ್ಣ, ಬಿ.ಸಿ.ರಾಜು ಹಾಜರಿದ್ದರು.

ಸಿಎಚ್ ಎನ್ 22ಜಿಪಿಟಿ2

ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿ ಗ್ರಾಮದ ಬಳಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್ .ಎಂ.ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು.