ಆಲಂಕಾರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ: ಅಧ್ಯಕ್ಷರು, ಸದಸ್ಯರ ಮಧ್ಯೆ ಅಸಮಾಧಾನ ಸ್ಫೋಟ

Contributed bybkyashas2010@gmail.com|Vijaya Karnataka

ಆಲಂಕಾರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು. ತಮ್ಮ ಮನೆಯ ಬಳಿ ಒಳಚರಂಡಿಗೆ ತಡೆಗೋಡೆ ನಿರ್ಮಾಣ ಮತ್ತು ಬಸ್ ತಂಗುದಾಣ ಉದ್ಘಾಟನೆ ವಿಚಾರದಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅಧ್ಯಕ್ಷರು ಆರೋಪಗಳನ್ನು ತಳ್ಳಿಹಾಕಿದರು. ಈ ಗೊಂದಲದಿಂದ ಸಭೆಯಲ್ಲಿ ಬಿರುಕು ಮೂಡಿತು.

intense dispute between president and members in alankaru gram panchayat general meeting

ವಿಕ ಸುದ್ದಿಲೋಕ ಕಡಬ

ಆಲಂಕಾರು ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಕೊನೆಯ ಸಾಮಾನ್ಯ ಸಭೆ ಮಂಗಳವಾರ ನಡೆದು ಅಧ್ಯಕ್ಷರು ಹಾಗೂ ಕೆಲವು ಸದಸ್ಯರ ಮಧ್ಯೆ ಇರುವ ಅಸಮಾಧಾನ ಸ್ಫೋಟಗೊಂಡಿತು. ಅಧ್ಯಕ್ಷೆ ಸುಶೀಲಾ ಕೊಂಡಾಡಿ ಅವರು ಪಂಚಾಯಿತಿಯಲ್ಲಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲಎಂದು ಅವರು ಆರೋಪಿಸಿದರು.

ಸದಸ್ಯರಾದ ಸದಾನಂದ ಆಚಾರ್ಯ, ಶ್ವೇತ ಕುಮಾರ್ , ವಾರಿಜ ಅವರು ಮಾತನಾಡಿ, ಅಧ್ಯಕ್ಷರು ಅವರ ಮನೆಯ ಆವರಣ ಗೋಡೆ ಬಳಿ ಒಳ ಚರಂಡಿಗೆ ಕಾಂಕ್ರಿಟೀಕರಣದ ತಡೆಗೋಡೆಯನ್ನು ಕ್ರಿಯಾ ಯೋಜನೆಯನ್ನು ರಚಿಸಿಕೊಳ್ಳದೆ ಹಾಗೂ ವಾರ್ಡ್ ನ ಸದಸ್ಯರ ಗಮನಕ್ಕೆ ತಾರದೆ ನಿರ್ಮಿಸಿರುವುದಾಗಿ ಹೇಳಿದರು. ಕೊಂಡಾಡಿ ಸಾರ್ವಜನಿಕ ಬಸ್ ತಂಗುದಾಣದ ಉದ್ಘಾಟನೆಯನ್ನು ವಾರ್ಡ್ ನ ಸದಸ್ಯರ ಗಮನಕ್ಕೆ ತಾರದೆ ಮಾಡಿದ್ದೀರಿ, ಅಲ್ಲದೆ ಬಸ್ ತಂಗುದಾಣದ ಉದ್ಘಾಟನೆಗೆ ವಾರ್ಡ್ ನ ಮೂವರು ಸದಸ್ಯರ ಆಕ್ಷೇಪಣೆ ಇದೆ. ಈ ಬಗ್ಗೆ ಫೆ.2ರಂದು ಅಭಿವೃದ್ಧಿ ಅಧಿಕಾರಿಗೆ ಆಕ್ಷೇಪಣಾ ಪತ್ರ ನೀಡಿದ್ದೇವೆ. ಆದರೂ ನೀವು ಸಾಮಾನ್ಯ ಸಭೆಯ ಮೊದಲೇ ತಂಗುದಾಣ ಉದ್ಘಾಟನೆ ಮಾಡಿದ್ದೀರಿ, ವಾರ್ಡ್ ಸದಸ್ಯರನ್ನು ಕಡೆಗಣಿಸಿದ್ದೀರಿ ಎಂದು ಆರೋಪಿಸಿದರು.

ಇದಕ್ಕೆ ಶ್ವೇತ ಕುಮಾರ್ ಧ್ವನಿ ಸೇರಿಸಿ ಚರಂಡಿಗೆ ತಡೆಗೋಡೆ ನಿಮ್ಮ ಮನೆಯ ಬಳಿಯಲ್ಲೇ ಯಾಕೆ ನಿರ್ಮಾಣ ಮಾಡಬೇಕಿತ್ತು? ಕೊಂಡಾಡಿ ಅಂಗನವಾಡಿ ಶಾಲೆಗೆ ಹೊಗುವ ರಸ್ತೆ ಬಳಿ ಗುಡ್ಡ ಕುಸಿಯುತ್ತಿದೆ ಅಲ್ಲಿನಿರ್ಮಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಒಳ ಚರಂಡಿಗೆ ತಡೆಗೋಡೆಯನ್ನು ಪಂಚಾಯಿತಿ ಕಾಂಕ್ರೀಟ್ ರಸ್ತೆಗೆ ನಿರ್ಮಿಸಲಾಗಿದೆಯೇ ಹೊರತು ನನ್ನ ಕಾಂಪೌಂಡಿನ ಒಳಗೆ ನಿರ್ಮಿಸಿಲ್ಲ. ಬಸ್ ತಂಗುದಾಣದ ಉದ್ಘಾಟನೆಯ ವಿಚಾರವನ್ನು ಕಳೆದ ಬಾರಿಯ ಸಾಮನ್ಯ ಸಭೆಯಲ್ಲಿಪ್ರಸ್ತಾಪಿಸಿದ್ದೆ. ಆ ಸಮಯದಲ್ಲಿ ನೀವು ಯಾರೂ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಸಾರ್ವಜನಿಕರನ್ನು ಸೇರಿಸಿಕೊಂಡು ಇಂದು ಉದ್ಘಾಟನೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಆಕ್ಷೇಪಣಾ ಅರ್ಜಿ ಬಗ್ಗೆ ಮಾತನಾಡಿದ ಅಭಿವೃದ್ಧಿ ಅಧಿಕಾರಿ ಸುಜಾತ ಕೆ. ಪಂಚಾಯಿತಿ ಅಧ್ಯಕ್ಷರು ಬಸ್ ತಂಗುದಾಣದ ಉದ್ಘಾಟನೆಯಿದೆ ಎಂದು ಕರೆದಿದ್ದಾರೆ. ಪಿಡಿಒ ಆಗಿ ನಾನು ಹೋಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮಧ್ಯೆ ಒಪ್ರವೇಶಿಸಿದ ಸದಾನಂದ ಆಚಾರ್ಯ ಕಳೆದ ಎರಡು ಅವಧಿಯಲ್ಲಿ ನಾನು ಪಂಚಾಯಿತಿ ಸದಸ್ಯನಾಗಿ ಪಂಚಾಯಿತಿ ಅನುದಾನವನ್ನು ಎಲ್ಲಿಯೂ ದುರುಪಯೋಗ ಮಾಡಿಕೊಂಡಿಲ್ಲ. ಜತೆಗೆ ಈ ಹಿಂದೆ ಅಧಿಕಾರ ನಡೆಸಿರುವ ಯಾವ ಅಧ್ಯಕ್ಷರೂ ಈ ರೀತಿ ನಡೆದುಕೊಂಡಿಲ್ಲಎಂದರು. ಕಾರ ್ಯದರ್ಶಿ ವಸಂತ್ ಶೆಟ್ಟಿ ಮಾತನಾಡಿ, ಆಲಂಕಾರು ಗ್ರಾಮ ಪಂಚಾಯಿತಿಗೆ ಜಿಲ್ಲೆಯಲ್ಲೇ ಉತ್ತಮ ಹೆಸರಿದೆ, ಆರಂಭದಿಂದ ಚೆನ್ನಾಗಿ ಅಧಿಕಾರ ನಡೆಸಿದ್ದೀರಿ. ಕೊನೆಯ ಕ್ಷಣಕ್ಕೆ ಗೊಂದಲ ಮಾಡಿಕೊಳ್ಳುವುದು ಬೇಡ, ಉತ್ತಮ ಅಧಿಕಾರ ನಡೆಸಿದರ ಪರಿಣಾಮ ಬೇರೆ ಬೇರೆ ಪ್ರಶಸ್ತಿಗಳು ಬಂದಿವೆ. ಸಣ್ಣ ವಿಚಾರಕ್ಕೆ ಮನಸ್ತಾಪ ಮಾಡಿಕೊಳ್ಳುವುದು ಸರಿಯಲ್ಲ, ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪಂಚಾಯಿತಿ ಉಪಾಧ್ಯಕ್ಷ ರವಿ ಪೂಜಾರಿ, ಸದಸ್ಯರಾದ ಸುನಂದ ಬಾರ್ಕುಳಿ, ರೂಪಶ್ರೀ, ವಾರಿಜ, ಶಾರದಾ, ಶ್ವೇತಕುಮಾರ್ ಸುಮತಿ, ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.

.....

ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ, ಬಸ್ಸು ತಂಗುದಾಣ ವಿಚಾರದಲ್ಲಿಅನಗತ್ಯ ಗೊಂದಲ ಸೃಷ್ಟಿಸಲಾಗಿದೆ, ಪಂಚಾಯಿತಿ ಸಾಮಾನ್ಯ ಸಭೆಯ ನೋಟಿಸ್ ನೀಡುವಾಗಲೇ ಅದರಲ್ಲಿ ಬಸ್ಸು ತಂಗುದಾಣದ ಉದ್ಘಾಟನೆಯ ವಿಚಾರ ತಿಳಿಸಲಾಗಿತ್ತು, ಹಿಂದಿನ ಸಾಮಾನ್ಯ ಸಭೆಯಲ್ಲಿಕುಡಾ ಚರ್ಚಿಸಲಾಗಿತ್ತು, ಬಸ್ಸು ತಂಗುದಾಣ ನಿರ್ಮಾಣವಾಗಿ ಎರಡು ವರ್ಷಗಳಾಗುತ್ತಾ ಬಂದರೂ ಉದ್ಘಾಟಿಸದೆ ಇರುವುದರಿಂದ ಉದ್ಘಾಟನೆಗೆ ನಿರ್ಧರಿಸಲಾಗಿತ್ತು. ಉದ್ಘಾಟನೆಯ ಹಿಂದಿನ ದಿನದವರೆಗೂ ಯಾರೂ ಚಕಾರವೆತ್ತದೆ, ಸದಸ್ಯ ಸದಾನಂದ ಆಚಾರ್ಯ ಹಾಗೂ ಇತರ ಇಬ್ಬರು ಸದಸ್ಯರು ದುರುದ್ದೇಶದಿಂದ ಆಕ್ಷೇಪನಾ ಪತ್ರ ಪಿಡಿಒ ಅವರಿಗೆ ನೀಡಿದ್ದಾರೆ. ಆಕ್ಷೇಪಣೆಯಲ್ಲಿಬಸ್ಸು ತಂಗುದಾಣದ ಹೆಸರಿನ ಬಗ್ಗೆ ಉಲ್ಲೇಖಿಸಿದ್ದಾರೆ. ಕ್ರಿಯಾ ಯೋಜನೆ ಹಾಗೂ ನಿರ್ಣಯಗಳಲ್ಲಿಉಲ್ಲೇಖಿಸಿರುವಂತೆ ಕೊಂಡಾಡಿ ಕ್ರಾಸ್ ಎಂದು ನಾಮ ಫಲಕ ಹಾಕಲಾಗಿದೆ. ಇನ್ನು ತಡೆಗೋಡೆ ನಿರ್ಮಾಣವನ್ನು ಹದಿನೈದನೇ ಹಣಕಾಸು ಯೋಜನೆಯಲ್ಲಿಪಂಚಾಯಿತಿ ರಸ್ತೆ ಬಳಿ ನಿರ್ಮಾಣ ಮಾಡಿರುವುದೇ ಹೊರತು ನನ್ನ ಮನೆಯ ಕಂಪೌಂಡಿನ ಒಳಗೆ ಅಲ್ಲ, ಇಲ್ಲಸಲ್ಲದ ಆರೋಪ ಮಾಡಿ ನನ್ನ ತೇಜೋವಧೆ ಮಾಡುವ ಕೆಲಸವಾಗಿದೆ ಎಂದು ಪತ್ರಿಕೆಗೆ ಅಧ್ಯಕ್ಷೆ ಸುಶೀಲ ಕೊಂಡಾಡಿ ಪ್ರತಿಕ್ರಿಯಿಸಿದ್ದಾರೆ.

ಆಲಂಕಾರು ಗ್ರಾಮ ಪಂಚಾಯಿತಿ ಸಮಾನ್ಯ ಸಭೆ ನಡೆಯಿತು:ಫೋಟೋ ಫೈಲ್ ನೇಮ್ 4ಕೆಡಿಬಿ ಎಸ್ ಬಿ)