8,176 ಹುದ್ದೆ ನೇಮಕ ಪ್ರಕ್ರಿಯೆಗೆ ಚಾಲನೆ

Contributed byshiva.rama@timesgroup.com|Vijaya Karnataka

ರಾಜ್ಯದ ಗೃಹ ಇಲಾಖೆಯಲ್ಲಿ 8,176 ಪೊಲೀಸ್ ಹುದ್ದೆಗಳ ನೇಮಕಾತಿಗೆ ಸರಕಾರ ಅನುಮೋದನೆ ನೀಡಿದೆ. ಡಿಟೆಕ್ಟಿವ್‌ ಸಬ್‌ ಇನ್‌ಸ್ಪೆಕ್ಟರ್‌, ಸಶಸ್ತ್ರ ಪೊಲೀಸ್‌ ಕಾನ್ಸ್‌ಟೆಬಲ್‌, ನಾಗರಿಕ ಪೊಲೀಸ್‌ ಕಾನ್ಸ್‌ಟೆಬಲ್‌, ಕೆಎಸ್‌ಆರ್‌ಪಿ ಹಾಗೂ ಕೆಎಸ್‌ಐಎಸ್‌ಎಫ್‌ ಹುದ್ದೆಗಳು ಭರ್ತಿಯಾಗಲಿವೆ. ಈ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಇದು ಪೊಲೀಸ್ ಇಲಾಖೆಯ ಬಲವರ್ಧನೆಗೆ ಸಹಕಾರಿಯಾಗಲಿದೆ.

launch of direct recruitment for 8176 posts in the state

ವಿಕ ಸುದ್ದಿಲೋಕ ಬೆಂಗಳೂರು ಗೃಹ ಇಲಾಖೆಯಲ್ಲಿಖಾಲಿಯಿರುವ 8,176 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರಕಾರ ಮಂಜೂರಾತಿ ನೀಡಿದೆ. ಡಿಟೆಕ್ಟಿವ್ ಸಬ್ ಇನ್ ಸ್ಪೆಕ್ಟರ್ (ಡಿಎಸ್ ಐ) 20, ಸಶಸ್ತ್ರ ಪೊಲೀಸ್ ಕಾನ್ಸ್ ಟೆಬಲ್ (ಎಪಿಸಿ) 1,650, ನಾಗರಿಕ ಪೊಲೀಸ್ ಕಾನ್ಸ್ ಟೆಬಲ್ (ಸಿವಿಲ್ ) 4,110, ವಿಶೇಷ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಕೆಎಸ್ ಆರ್ ಪಿ) 2,032 ಹಾಗೂ ಪೊಲೀಸ್ ಕಾನ್ಸ್ ಟೆಬಲ್ (ಕೆಎಸ್ ಐ ಎಸ್ ಎಫ್ ) 364 ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಲಾಗಿದೆ. ಇಲಾಖೆಯಲ್ಲಿಖಾಲಿಯಿರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ರಾಜ್ಯ ಸರಕಾರವು ಅನುಮತಿ ನೀಡಿದೆ. ಈ ಬೆನ್ನಲ್ಲೇ ವಿವಿಧ ಘಟಕಗಳಿಗೆ ಹಂಚಿಕೆಯಾಗಿರುವ ಹುದ್ದೆಗಳ ಮಾಹಿತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ನೇಮಕಾತಿ ವಿಭಾಗಕ್ಕೆ ರವಾನಿಸಿದೆ. ಗೃಹ ಇಲಾಖೆಯಲ್ಲಿಖಾಲಿಯಿರುವ ಹುದ್ದೆಗಳನ್ನು ನಗರ, ಜಿಲ್ಲಾಹಾಗೂ ಘಟಕಗಳಿಗೆ ಮರು ಹಂಚಿಕೆ ಮಾಡಿ, ತಮ್ಮ ಘಟಕಗಳಿಗೆ ಹಂಚಿಕೆಯಾಗಿರುವ ಹುದ್ದೆಗಳಿಗೆ ಸಂಬಂಧಿಸಿದ ವರ್ಗೀಕರಣದ ವಿವರವನ್ನು ಪೊಲೀಸ್ ನೇಮಕಾತಿ ವಿಭಾಗಕ್ಕೆ ಒದಗಿಸುವಂತೆ ಈ ಹಿಂದೆ ನಿರ್ದೇಶನ ನೀಡಲಾಗಿತ್ತು. ವಿವಿಧ ಘಟಕಗಳಿಗೆ ಚಾಲ್ತಿ ಮೀಸಲು/ರೋಸ್ಟರ್ ನಿಯಮಗಳ ಅನ್ವಯ ವರ್ಗೀಕರಣದ ವಿವರವನ್ನು ಪೊಲೀಸ್ ನೇಮಕಾತಿ ವಿಭಾಗಕ್ಕೆ ರವಾನೆ ಮಾಡಲಾಗಿದೆ.