ಕೆಎಎಸ್ ಮುಖ್ಯ ಪರೀಕ್ಷೆ ಫಲಿತಾಂಶದಲ್ಲಿಅಕ್ರಮ ಆರೋಪ | ವರದಿ ಕೇಳಿದ ಸರಕಾರ

Contributed bysrikanth.g@timesgroup.com|Vijaya Karnataka

ಕೆಎಎಸ್‌ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಒಂದೇ ಕೊಠಡಿಯಲ್ಲಿಪರೀಕ್ಷೆ ಬರೆದ 15 ಮಂದಿ ಹಾಗೂ ಒಂದೇ ಕುಟುಂಬದ ಮೂವರು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸರಕಾರ ಕೆಪಿಎಸ್‌ಸಿ ಕಾರ್ಯದರ್ಶಿಗೆ ವರದಿ ನೀಡುವಂತೆ ಸೂಚಿಸಿದೆ. ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಕೂಡ ಈ ಬಗ್ಗೆ ಟೀಕಿಸಿದ್ದಾರೆ.

kas exam result controversy government announces investigation

ವಿಕ ಸುದ್ದಿಲೋಕ ಬೆಂಗಳೂರು ಕರ್ನಾಟಕ ಲೋಕಸೇವಾ ಆಯೋಗದಲ್ಲಿಮತ್ತೆ ಅಕ್ರಮದ ಆರೋಪ ಕೇಳಿ ಬಂದಿದ್ದು, ಮಾ. 2ರಂದು ಪ್ರಕಟಿಸಲಾದ ಕೆಎಎಸ್ ಮುಖ್ಯ ಪರೀಕ್ಷೆ ಫಲಿತಾಂಶದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಒಂದೇ ಕೊಠಡಿಯಲ್ಲಿಮುಖ್ಯ ಪರೀಕ್ಷೆ ಬರೆದಿದ್ದ 15 ಮಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ಒಂದೇ ಕುಟುಂಬದ ಮೂವರು ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಈ ಬಗ್ಗೆ ಅಪಸ್ವರ ಎದ್ದಿದೆ. ಇದರ ಬೆನ್ನಲ್ಲೇ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧಿವರು ಅಕ್ರಮ ಆರೋಪ ಕುರಿತು ವರದಿ ನೀಡುವಂತೆ ಕೆಪಿಎಧಿಸ್ಸಿ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಫಲಿತಾಂಶ ಪ್ರಕಟವಾದ ಬಳಿಕ ಹಲವು ಅಭ್ಯರ್ಥಿಗಳು ಗಂಭೀರ ಅನುಮಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಧಿಗಳಲ್ಲಿಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಮುಖ್ಯ ಪರೀಕ್ಷೆ ಸರಿಯಾಗಿ ಬರೆದಿದ್ದರೂ ಆಯ್ಕೆಯಾಗಿಲ್ಲಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಫಲಿತಾಂಶದ ವಿವರಗಳನ್ನು ಒಳಗೊಂಡ ಹಲವು ಪೋಸ್ಟ್ ಧಿಗಳನ್ನು ಹಂಚಿಕೊಂಡು ಕಿಡಿಕಾರುತ್ತಿದ್ದಾರೆ. ಏನಿದು ಅಕ್ರಮ ಆರೋಪ?: ಒಂದೇ ಕೊಠಡಿಯಲ್ಲಿಪರೀಕ್ಷೆ ಬರೆದಿದ್ದ 15 ಮಂದಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಇಧಿವರ ಸೀರಿಯಲ್ ನಂಬರ್ ಸಾಲಾಗಿ ಆಯ್ಕೆಯಾಗಿದ್ದು ಹೇಗೆ ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಒಂದೇ ಕುಟುಂಬದ ಮೂವರು ಆಯ್ಕೆಯಾಗಿದ್ದು ಹೇಗೆ? ಪ್ರಾಮಾಣಿಕವಾಗಿ ಓದಿದವರಿಗೆ ಕೆಲಸ ಸಿಗಬೇಕು, ಈ ಬಗ್ಗೆ ಸಮಿತಿ ರಚಿಸಿ ತನಿಖೆ ಮಾಡಿಬೇಕು ಎಂದು ಆಗ್ರಹಿಸಿದ್ದಾರೆ. ಪ್ರಭಾವಿಗಳ ಮಕ್ಕಳು ಸರಕಾರಿ ಹುದ್ದೆಗಳನ್ನು ಕೊಡಿಸಲು ಕುತಂತ್ರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಸಿಎಂ-ಪಿಎಂಗೆ ಹ್ಯಾಶ್ ಟ್ಯಾಗ್ ಪೋಸ್ಟ್ : ಕೆಪಿಎಸ್ಸಿ ಅಕ್ರಮದ ಬಗ್ಗೆ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿದೊಡ್ಡ ಮಟ್ಟದ ಅಭಿಯಾನ ಆರಂಭಿಸಿದ್ದಾರೆ. ಅಭ್ಯರ್ಥಿಗಳು ಫಲಿತಾಂಶದ ಪ್ರತಿಯೊಂದು ಪೋಸ್ಟ್ ಹಂಚಿಕೊಂಡು, ಕೆಲವರು ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಮಧ್ಯಪ್ರವೇಶಿಸಲು ಮನವಿ ಮಾಡಿದ್ದರೆ, ಇನ್ನೂ ಕೆಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿ ನ್ಯಾಯ ಒದಗಿಸಬೇಕೆಂದು ಕೇಳಿದ್ದಾರೆ. ವ್ಯವಸ್ಥೆಯ ನೈತಿಕ ಅಧಃಪತನದ ಸಂಕೇತ: ಭಾಸ್ಕರರಾವ್ ಈ ಮಧ್ಯೆ, ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ತಮ್ಮ ಟ್ವೀಟ್ ನಲ್ಲಿ‘‘ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿಮತ್ತೊಂದು ಅಕ್ರಮದ ಸುದ್ದಿ ಹೊರಬಿದ್ದಿರುವುದು ಕೇವಲ ಆತಂಕಕಾರಿಧಿಯಷ್ಟೇ ಅಲ್ಲ, ಇದು ಆಡಳಿತ ವ್ಯವಸ್ಥೆಯ ನೈತಿಕ ಅಧಃಧಿಪತನದ ಸಂಕೇತ. ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ಅರ್ಹತೆ ಮತ್ತು ಪ್ರತಿಭೆ ಒರೆಗೆ ಹಚ್ಚುವ ಪ್ರಕ್ರಿಯೆಯಾಗಬೇಕು. ನೇಮಕಾತಿ ಭ್ರಷ್ಟಾಚಾರಗಳು ವ್ಯವಸ್ಥೆಯ ಮೇಲಿನ ಯುವ ಜನತೆಯ ನಂಬಿಕೆ ಬುಡಮೇಲು ಮಾಡುತ್ತಿವೆ. ಇದು ನಾಡಿನ ಭವಿಷ್ಯದ ಆಡಳಿತ ಯಂತ್ರದ ಮೇಲೆ ನಡೆಯುತ್ತಿರುವ ಪ್ರಹಾರವಾಗಿದೆ,’’ ಎಂದು ಟೀಧಿಕಿಧಿಸಿಧಿದ್ದಾಧಿರೆ.