ಮುಳುಗಿದ ಇರಾನ್ ಯುದ್ಧ ನೌಕೆ

Contributed byshree vijendra|Vijaya Karnataka

ಭಾರತದಿಂದ ಹೊರಟಿದ್ದ ಇರಾನ್ ಯುದ್ಧ ನೌಕೆ 'ಐರಿಸ್ ದೆನಾ' ಶ್ರೀಲಂಕಾ ಬಳಿ ಅಮೆರಿಕ ನೌಕಾಪಡೆಯಿಂದ ಮುಳುಗಡೆಯಾಗಿದೆ. ಈ ಘಟನೆಯಲ್ಲಿ180 ಸಿಬ್ಬಂದಿಯಲ್ಲಿಸಾ^ಯ^ರ^ು ಮೃತಪಟ್ಟಿದ್ದಾರೆ. ಅಮೆರಿಕದ ಜಲಾಂತರ್ಗಾಮಿ ಟಾರ್ಪಿಡೊ ಬಳಸಿ ಈ ದಾಳಿ ನಡೆಸಲಾಗಿದೆ. ಮಧ್ಯಪ್ರಾಚ್ಯದಲ್ಲಿಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ.

americas attack iranian warship iris dena sinks
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಇರಾನ್, ಸೌದಿ ಅರೇಬಿಯಾದಲ್ಲಿರುವ ವಿಶ್ವದ ಅತಿದೊಡ್ಡ ತೈಲ ಘಟಕ ‘ರಾಸ್‌ ತನುರಾ’ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಕಾರವಾಗಿ ಅಮೆರಿಕ ನೌಕಾಪಡೆ , ಶ್ರೀಲಂಕಾ ಬಳಿ ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಸಮರ ನೌಕೆ ‘ಐರಿಸ್‌ ದೆನಾ’ವನ್ನು ಟಾರ್ಪಿಡೊ ಬಳಸಿ ಮುಳುಗಿಸಿದೆ. ಈ ಘಟನೆಯಲ್ಲಿ 87 ಮಂದಿ ಸಿಬ್ಬಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಇಸ್ರೇಲ್ ಕೂಡ ಇರಾನ್‌ನ ಹಲವು ನಗರಗಳ ಮೇಲೆ ದಾಳಿ ತೀವ್ರಗೊಳಿಸಿದೆ.

ಇತ್ತೀಚೆಗೆ ಭಾರತದಲ್ಲಿ ನಡೆದ ‘ಇಂಟರ್‌ನ್ಯಾಷನಲ್‌ ಫ್ಲೀಟ್‌ ರಿವ್ಯೂ 2026’ ಸಮರಾಭ್ಯಾಸದಲ್ಲಿ ಭಾಗವಹಿಸಿ, ಭಾರತದಿಂದ ಹೊರಟಿದ್ದ ಇರಾನ್‌ನ ಯುದ್ಧ ನೌಕೆ ‘ಐರಿಸ್‌ ದೆನಾ’ ಶ್ರೀಲಂಕಾ ಸಮೀಪದಲ್ಲಿ ಅಮೆರಿಕದ ದಾಳಿಗೆ ಗುರಿಯಾಗಿದೆ. ಶ್ರೀಲಂಕಾದಿಂದ ಸುಮಾರು 40 ನಾಟಿಕಲ್‌ ಮೈಲು ದೂರದಲ್ಲಿ ಈ ದುರ್ಘಟನೆ ನಡೆದಿದೆ. ನೌಕೆಯಲ್ಲಿ ಒಟ್ಟು 180 ಸಿಬ್ಬಂದಿ ಇದ್ದರು. ಈ ಪೈಕಿ 87 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಇನ್ನೂ ನಾಪತ್ತೆಯಾಗಿದ್ದಾರೆ. ಶ್ರೀಲಂಕಾ ನೌಕಾಪಡೆ 32 ಮಂದಿಯನ್ನು ರಕ್ಷಿಸಿದೆ.
ಈ ಘಟನೆ ಬಗ್ಗೆ ಅಮೆರಿಕದ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ಅವರು ಪ್ರತಿಕ್ರಿಯಿಸಿ, "ಅಮೆರಿಕದ ಜಲಾಂತರ್ಗಾಮಿ ಟಾರ್ಪಿಡೊ ಬಳಸಿ ಇರಾನ್ ಯುದ್ಧ ನೌಕೆಯನ್ನು ಮುಳುಗಿಸಲಾಗಿದೆ. ಎರಡನೇ ಮಹಾಯುದ್ಧದ ನಂತರ ಟಾರ್ಪಿಡೊ ಮೂಲಕ ಶತ್ರು ರಾಷ್ಟ್ರದ ನೌಕೆಯನ್ನು ಮುಳುಗಿಸಿದ ಮೊದಲ ಘಟನೆ ಇದಾಗಿದೆ" ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ಶ್ರೀಲಂಕಾದ ಉಪ ವಿದೇಶಾಂಗ ಸಚಿವ ಅರುಣ್‌ ಹೇಮಚಂದ್ರ ಅವರು, ಇರಾನ್ ನೌಕೆಯಲ್ಲಿದ್ದ 80 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಶ್ರೀಲಂಕಾದ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದಾರೆ.

‘ಐರಿಸ್‌ ದೆನಾ’ ಯುದ್ಧ ನೌಕೆಯು ಫೆಬ್ರವರಿ 18 ರಿಂದ ಫೆಬ್ರವರಿ 25 ರವರೆಗೆ ಬಂಗಾಳ ಕೊಲ್ಲಿಯಲ್ಲಿ ನಡೆದ ನೌಕಾ ತರಬೇತಿಯಲ್ಲಿ ಭಾಗವಹಿಸಿತ್ತು. ಈ ನೌಕೆ ಮುಳುಗಡೆಯಾಗುವ ಎರಡು ವಾರಗಳ ಮೊದಲು, ವಿಶಾಖಪಟ್ಟಣಂ ಬಂದರಿಗೆ ಭೇಟಿ ನೀಡಿದ್ದಾಗ ಭಾರತದ ಪೂರ್ವ ನೌಕಾ ಕಮಾಂಡ್‌ ಅದನ್ನು ಸ್ವಾಗತಿಸಿತ್ತು. ಈ ಘಟನೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಿವೆ.