ಚಿಕ್ಕೋಡಿ: ಇಲ್ಲಿನ ಎಂ.ಕೆ.ಕವಟಗಿಮಠ ಫೌಂಡೇಶನ್ , ಸಿಎಲ್ ಇ ಸಂಸ್ಥೆ ಸಹಯೋಗದಲ್ಲಿತಾಲೂಕಿನ ಕೌಶಲ ವಂಚಿತ ವಿದ್ಯಾವಂತರಿಗೆ ಜ.16 ರಿಂದ ಸಿಎನ್ ಸಿ ಅಪರೇಟರ್ , ವಾಹನ ಚಾಲನೆ , ಮೋಟರ್ ವೈಂಡಿಂಗ್ ತರಬೇತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಇದೇ ವೇಳೆ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಜನ್ಮದಿನದ ನಿಮಿತ್ತ ನಾನಾ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದ್ದು, ಇದಕ್ಕಾಗಿ ಮಹಾಂತೇಶ ಕವಟಗಿಮಠ ಟ್ರಫ್ ಸ್ಪೋರ್ಟ್ಸ್ ಅರೆನಾ ಕಾಂಪ್ಲೆಕ್ಸ್ ಸಜ್ಜುಗೊಳಿಸಲಾಗಿದೆ. ಈ ಸುಸಜ್ಜಿತ ಆಟದ ಮಳಿಗೆ ಉದ್ಘಾಟನೆಯನ್ನು ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು, ಸಂಪಾದನ ಚರಮೂರ್ತಿ ಮಠದ ಸಂಪಾದನ ಸ್ವಾಮಿಗಳು ಹಾಗೂ ಶ್ರೀ ಚಿಂಚಣಿ ಸಿದ್ಧಸಂಸ್ಥಾನ ಮಠದ ಶಿವಪ್ರಸಾದ ದೇವರು ನೆರವೇರಿಸಲಿದ್ದಾರೆ ಎಂದು ಸಿಎಲ್ ಇ ಸಂಸ್ಥೆ ಕಾರ್ಯದರ್ಶಿ ಜಗದೀಶ ಕವಟಗಿಮಠ ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.

