3 ಕ್ರೈಂ ಸುದ್ದಿ 1

Contributed byMahesh.Naregal@timesgroup.com|Vijaya Karnataka

ಹುಬ್ಬಳ್ಳಿಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ನಾಲ್ಕು ಆಕಳುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ಕುಸುಗಲ್‌ ರಸ್ತೆಯ ಶಬರಿನಗರದ ಬಳಿ ನಡೆದಿದೆ. ಪೊಲೀಸರು ಗೋವುಗಳನ್ನು ಗೋಶಾಲೆಗೆ ಕಳುಹಿಸಿದ್ದಾರೆ. ಈ ಸಂಬಂಧ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

illegal transportation of cows on kusugal road standoff with hindu organizations

ನಾಲ್ಕು ಗೋವುಗಳ ರಕ್ಷಣೆ

ಹುಬ್ಬಳ್ಳಿ: ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಾಲ್ಕು ಆಕಳುಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ರಾತ್ರಿ ಕುಸುಗಲ್ ರಸ್ತೆಯ ಶಬರಿನಗರದ ಬಳಿ ನಡೆದಿದೆ.

ಪೊಲೀಸರು ಗೋವುಗಳನ್ನು ಪಾಂಜರಪೋಳದಲ್ಲಿನ ಗೋಶಾಲೆಗೆ ಕಳುಹಿಸಿದ್ದಾರೆ. ಶಬರಿನಗರದಲ್ಲಿಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ತಂಡ ವಾಹನವೊಂದನ್ನು ತಡೆದಿದೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ4 ಆಕಳುಗಳಿದ್ದವು. ಈ ವೇಳೆ ಗೋವುಗಳನ್ನು ಒಯ್ಯುತ್ತಿದ್ದವರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಬಳಿಕ ಕೇಶ್ವಾಪುರ ಠಾಣೆಯ ಪೊಲೀಸರು ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಈ ಕುರಿತಂತೆ ಕೇಶ್ಚಾಪುರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

ಓದಲೇ ಬೇಕಾದ ಸುದ್ದಿ