ಕೆಪಿಸಿಸಿ ಸಾರಥ್ಯಕ್ಕೆ ಡಿಕೆಶಿ ಗುಡ್ ಬೈ

Contributed byrajeeva.cj@timesofindia.com|Vijaya Karnataka

ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ಮುಂದಿನ ಅಧಿಕಾರದ ಗುರಿಯನ್ನು ತಲುಪಲು ಅವರು ಸಿದ್ಧರಾಗಿದ್ದಾರೆ. ನಾನು ಸ್ಟ್ರೀಟ್ ಫೈಟರ್, ನನಗೆ ಏನು ಸಿಗಬೇಕೋ ಅದು ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷದ ಹೊರಗೆ ನನ್ನ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ. ಹೊಸ ರಕ್ತ, ಹೊಸ ಆಲೋಚನೆಗಳು ಪಕ್ಷಕ್ಕೆ ಬರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

dk shivakumar bids goodbye to kpcc president post

ನಾನು ಸ್ಟ್ರೀಟ್ ಫೈಟರ್ , ಸಿಗಬೇಕಾದ್ದು ಸಿಕ್ಕೇ ಸಿಗುತ್ತೆ !

ವಿಕ ಸುದ್ದಿಲೋಕ ಬೆಂಗಳೂರು

‘‘ನಾನು ಸ್ಟ್ರೀಟ್ ಫೈಟರ್ . ಹೇಗೆ ಹೋರಾಟ ಮಾಡಬೇಕೆಂದು ಗೊತ್ತಿದೆ,’’ ಎನ್ನುವ ಮೂಲಕ ಮುಂದಿನ ಅಧಿಕಾರದ ಗುರಿ ತಲುಪಲು ಅಖಾಡಕ್ಕಿಳಿಯುವ ಸುಳಿವು ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ , ‘ಧಿ‘ಧಿಕೆಧಿಪಿಧಿಸಿಧಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಸಾಕು. ಅಲ್ಲಿಗೆ ಹೊಸ ರಕ್ತ, ಹೊಸ ಆಲೋಚನೆ ಬರಬೇಕು,’ಧಿ’ ಎಂದಿದ್ದಾರೆ.

ಬೆಂಗಳೂರಿನಲ್ಲಿಪತ್ರಕರ್ತರ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿ,‘‘ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ. ನನ್ನ ಹೋರಾಟ ಪಕ್ಷದ ಹೊರಗೆ. ನಾನು ಸುಮ್ಮನಾಗಿದ್ದೇನೆ ಎಂದು ಭಾವಿಸಿದರೆ, ಅದು ಅವರಿಗೆ(ಹೈಕಮಾಂಡ್ ಗೆ) ಬಿಟ್ಟ ವಿಚಾರ,’’ ಎಂದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ ದಾಖಲೆ ಮುರಿಯುತ್ತೀರಾ ಎಂಬ ಪ್ರಶ್ನೆಗೆ, ‘‘ಹೊಸ ರಕ್ತ ಬರಬೇಕು. ಹೊಸ ಆಲೋಚನೆ ಬರಬೇಕು. ನಾವೆಲ್ಲಮೊದಲ ಬಾರಿ ಶಾಸಕರಾದಾಗಲೇ ಮಂತ್ರಿಯಾದವರು. ನಾವೀಗ ಹಿರಿಯ ನಾಗರಿಕರಾಗಿದ್ದೇವೆ,’’ ಎಂದು ಮಾರ್ಮಿಕವಾಗಿ ಹೇಳಿದರು.

‘‘ನಾನೇಕೆ ಕ್ರಾಂತಿ ಮಾಡಲಿ. ನನಗೆ ನನ್ನ ಮೇಲೆ ನಂಬಿಕೆಯಿದೆ. ನಾನು ಭರವಸೆ ಮೇಲೆ ಬದುಕುತ್ತೇನೆ. ನಾನು ಪ್ರಯತ್ನ ಮಾಡುವ ಅಗತ್ಯವಿಲ್ಲ. ನನಗೆ ಯಾವಾಗ ಯಾವುದು ಬರಬೇಕೋ ಅದು ಬಂದೇ ಬರುತ್ತದೆ,’’ ಎಂದು ಆತ್ಮವಿಶ್ವಾಸದಿಂದ ನುಡಿದರು.

ಓದಲೇ ಬೇಕಾದ ಸುದ್ದಿ