ಇರಾನ್ ಸಂಧಾನದ ಆಹ್ವಾನ ತಿರಸ್ಕರಿಸಿದ ಟ್ರಂಪ್

Contributed byBeeralinge gowda|Vijaya Karnataka

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ನ ಸಂಧಾನ ಮಾತುಕತೆ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಇರಾನ್‌ನಲ್ಲಿರುವ ದುಷ್ಟ ಆಡಳಿತ ಕೊನೆಗೊಳ್ಳುವವರೆಗೂ ದಾಳಿ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈ ಸಂಘರ್ಷ ಶೀಘ್ರವೇ ಅಂತ್ಯಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇರಾನ್‌ನ ಸೇನಾಪಡೆಗಳು ನಾಶಗೊಂಡಿವೆ ಎಂದು ಟ್ರಂಪ್‌ ತಿಳಿಸಿದ್ದಾರೆ.

trump denies american promise the fight against iran will continue
ವಾಷಿಂಗ್ಟನ್: ಇರಾನ್‌ನ ಮಾತುಕತೆ ಆಹ್ವಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. ಇರಾನ್‌ನಲ್ಲಿರುವ ದುಷ್ಟ ಆಡಳಿತ ಕೊನೆಗೊಳ್ಳುವವರೆಗೂ ದಾಳಿ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ, ವಾಯುಪಡೆ, ನೌಕಾದಳ ಸಂಪೂರ್ಣ ನಾಶವಾಗಿದೆ. ಸೇನಾಪಡೆಗಳ ನಾಯಕರು ಹತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಾತುಕತೆ ಏಕೆ? ನೆರೆಯ ದೇಶಗಳ ಮೇಲೆ ಪ್ರತೀಕಾರದ ದಾಳಿ ನಂತರ ಇರಾನ್ ಮಾತುಕತೆಗೆ ಮುಂದಾಗಿರುವುದು ತಡವಾಗಿದೆ. ದುಷ್ಟ ಆಡಳಿತದಿಂದ ಇರಾನಿಯರನ್ನು ಮುಕ್ತಗೊಳಿಸುವ ತನಕ ಸಮರ ಮುಂದುವರಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದಕ್ಕೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇರಾನ್ ಜತೆಗಿನ ಸಂಘರ್ಷ ಹೆಚ್ಚು ದಿನ ಮುಂದುವರಿಯುವುದಿಲ್ಲ. ಇದು ಅಂತ್ಯವಿಲ್ಲದ ಯುದ್ಧವಲ್ಲ. ಸ್ವಲ್ಪ ಸಮಯ ತೆಗೆದುಕೊಂಡರೂ ಬೇಗನೆ ಮುಗಿಯಲಿದೆ ಎಂದು ಅವರು ಹೇಳಿದ್ದಾರೆ.

ಓದಲೇ ಬೇಕಾದ ಸುದ್ದಿ